೨೯೬ / ಕುಕ್ಕಿಲ ಸಂಪುಟ
ಇಲ್ಲಿ 'ಸ್ಥಾನಲಾಭೇನ' ಎಂಬುದಕ್ಕೆ ಕಲ್ಲಿನಾಥನು 'ಸ್ಥಾನಸ್ಯ ತತ್ತ್ವನರ್ಭನಾ ವಶಾತ್ ಸಾಂತಾನಾಂ ಸ್ವರಾಣಾಮಾಧಾರ ಶ್ರುತೇರ್ಲಾಧೀನ, ಪರಿಜ್ಞಾನೇನ' ಎಂದು ವ್ಯಾಖ್ಯಾನಿಸಿದ್ದಾನೆ. ಇದರಿಂದ, ಹಿಂದೆ 'ಷಡ್ಡ ಸ್ಥಾನಸ್ಥಿತರ್ನಾ: ರಜನ್ಮಾದ್ಯಾ ಪರೇ ವಿದುಃ' ಎಂದು ಮತಾಂತರಾನುಸಾರ ಹೇಳಿರುವ ಮೂರ್ಛನೆಗಳಲ್ಲಿ ಕಲ್ಲಿನಾಥನು ತಾನು ಹೇಳಿರುವಂತೆ ಸ್ವರಗಳಿಗೆ ಲಭಿಸುವ ಅನ್ಯ ಶ್ರುತ್ಯಂತರ ಸ್ನಾನಗಳ ಪರಿಜ್ಞಾನವಾಗುವುದ ರಿಂದ, ಎಂಬ ತನ್ನ ಸ್ವಂತ ಅಭಿಪ್ರಾಯವನ್ನೇ ಹೇಳುತ್ತಿದ್ದಾನೆಂದು ತಿಳಿಯ ಬೇಕಾಗುವುದು.
ಇನ್ನು ಸಾಧಾರಣ ಕ್ರಿಯೆಗಳನ್ನು ಹೇಳುತ್ತಾನೆ-
ಸಾಧಾರಣಂ ಭವೇದ್‌ಧಾ ಸ್ವರಜಾತಿವಿಶೇಷಣಾತ್
ಸ್ವರಸಾಧಾರಣಂ ತತ್ರ ಚತುರ್ಧಾ ಪರಿಕೀರ್ತಿತಂ
ಕಾಕಲ್ಯಂತರ ಷಡೈಶ್ಚ ಮಧ್ಯಮೇನ ವಿಶೇಷಣಾತ್
ಸಾಧಾರಣಂ ಕಾಕಲೀ ಹಿ ಭವೇತ್ ಷಡ್ಜ್ ನಿಷಾದಯೋ
ಸಾಧಾರಣ್ಯಮತಸ್ಯ ಯತ್ತತ್ಸಾಧಾರಣಂ ವಿದು:ǁ೧೨ǁ
ಅಂತರಸ್ಯಾಪಿ ಗಮಯೋರೇವಂ ಸಾಧಾರಣಂ ಮತಂ ǁ
ಸ್ವರಸಾಧಾರಣವೆಂದೂ ಜಾತಿಸಾಧಾರಣವೆಂದೂ 'ಸಾಧಾರಣ'ವು ಎರಡು ವಿಧ ವಾಗಿದೆ. ಸ್ವರಸಾಧಾರಣವು ಕಾಕಲೀ ಸಾಧಾರಣ, ಅಂತರಸಾಧಾರಣ, ಷಡ್ಡ ಸಾಧಾರಣ, ಮಧ್ಯಮ ಸಾಧಾರಣ ಎಂದು ನಾಲ್ಕು ವಿಧವಾಗಿದೆ. ಕಾಕಲೀ ಸಾಧಾರಣವೆಂದರೆ ಷಡ್ಡ ಮತ್ತು ನಿಷಾದ ಎಂಬೆರಡು ಎಂಬೆರಡು ಸ್ವರಗಳಿಗೂ ಮಧ್ಯದ ಸಮಾನಸ್ಥಾನದಲ್ಲಿರುವುದು ಎಂದರ್ಥ. ಅಂತರ ಸಾಧಾರಣವೆಂಬುದೂ ಇದರಂತೆ ಗಾಂಧಾರಕ್ಕೂ ಮಧ್ಯಮಕ್ಕೂ ಸಾಧಾರಣ (ಮಧ್ಯ) ಸ್ಥಾನದಲ್ಲಿರುವುದಾಗಿದೆ.
ಪ್ರಯೋಜ್ಯಾ ಪದ್ವಮುಚ್ಚಾರ್ಯ ಕಾಕಲೀ ದೈವತಾ ಕ್ರಮಾತ್ |
ಏವಂ ಮಧ್ಯಮಮುಚ್ಚಾರ್ಯ ಪ್ರಯೋಜ್ಯಾ ಚಾಂತರರ್ಷಭಾ ǁ
ಷಡ್ಡ ಕಾಕಲಿನೌ ಯದ್ಯೋಚ್ಚಾರ್ಯ ಪತ್ವಂ ಪುನರ್ವಜೇತ್ |
ತತ್ಪರಾನ್ಯತಮಂ ಚೈವಂ ಮಧ್ಯಮಂ ಚಾಂತರಸ್ವರಂ ǁ
ಪ್ರಯೋಜ್ಯ ಮಧ್ಯಯೋಗ್ರಾಹ್ಯ ಸತ್ಪರೋನ್ಯತಯೋಥವಾ |
ಅಲ್ಪ ಪ್ರಯೋಗ: ಕರ್ತವ್ಯ: ಕಾಕಲೀ ಚಾಂತರ ಸ್ವರಃǁ೧೬ǁ
ಈ ಸಾಧಾರಣಗಳ ಪ್ರಯೋಗದಲ್ಲಿ ಷಡ್ಗವನ್ನು ಉಚ್ಚರಿಸಿದ ಮೇಲೆ ಕಾಕಲಿ ನಿಷಾದ ಸ್ವರವನ್ನೂ ತದನಂತರ ದೈವತವನ್ನೂ ಉಚ್ಚರಿಸಬೇಕೆಂಬ ನಿಯಮವಿದೆ. ಹಾಗೆಯೇ ಮಧ್ಯಮ ಸ್ವರವನ್ನುಚ್ಚರಿಸಿದ ಮೇಲೆಯೇ ಅಂತರ ( ಗಾಂಧಾರ) ಸ್ವರ ಮತ್ತು ಋಷಭವನ್ನುಚ್ಚರಿಸಬೇಕು. ಎರಡು ಸಾಧಾರಣ ಸ್ವರಗಳು ಕ್ರಮಾರೋಹಣ ಪ್ರಯೋಗದಲ್ಲಿ ಪೂರ್ವಾಪರ ಸ್ವರಗಳ ಮಧ್ಯೆ ಸಿಕ್ಕಬಾರದು, ಅವರೋಹ ಕ್ರಮದಲ್ಲಿ ಮಾತ್ರ ಸಿಕ್ಕಬಹುದಾಗಿದೆ ಎಂಬ ತಾತ್ಪರ್ಯ. ಈ ಕಾಕಲಂತರ ಸ್ವರಗಳನ್ನು ಗಾನದಲ್ಲಿ ಹೆಚ್ಚು ಪ್ರಯೋಗಿಸಬಾರದು, ಎಂದರೆ ಆಗಾಗ ಹೆಚ್ಚು ಪ್ರಯೋಗಿಸಬಾರದು, ಎಂದರೆ ಆಗಾಗ ಹೆಚ್ಚು ಸಲ ಪ್ರಯೋಗಕ್ಕೆ ತರಬಾರದು ಎಂಬ ತಾತ್ಪರ್ಯ.
ನಿಷಾದೋ ಯದಿ ಷಡ್ಡಸ ಶ್ರುತಿಮಾದ್ಯಾಂ ಸಮಾಶ್ರಯೇತ್ ǁ
ಋಷಭಂತಿಮಂ ಪ್ರೋಕ್ಕಂ ಷಡ್ಡ ಸಾಧಾರಣಂ ತದಾ ǁ