ಎಂದಿರುವುದನ್ನು ಲಕ್ಷಿಸಬಹುದು. ಹೀಗೆ ಶಬ್ದಗಳನ್ನು ಇದ್ದಂತೆ ಓದುವುದರಿಂದ ವ್ಯಕ್ತವಾಗುವ ವಸ್ತುವಿನ ನಿಜಸ್ವರೂಪವೇ ಅದರ ಛಂದವಾಗಿದೆ. ಆದ್ದರಿಂದಲೇ ಈ ಪಾಠವಿಧಾನವು 'ವಸೂವ' ಹಾಗೂ 'ವಸ್ತುನಿಷ್ಠ'ವೆಂದೂ ಛಂದೋರಚನೆಗಳು 'ವಸ್ತುಕೃತಿ' ಅಥವಾ 'ವಸ್ತುಕ'ಗಳೆಂದೂ ಕರೆಯಲ್ಪಟ್ಟಿವೆ.
ಗಾನವೆಂದರೆ ಅಕ್ಷರಗಳನ್ನು ಬೇಕಾದಂತೆ ಎಳೆದು ವರ್ಣಾಲಂಕಾರಗಳ ಪ್ರಯೋಗ ದಿಂದ ಶಬ್ದವನ್ನು ವಿಸ್ತಾರಗೊಳಿಸಿ ಹಾಡುವುದಾದ್ದರಿಂದ ಅದು 'ವರ್ಣನಿಷ್ಠ'ವಾದ್ದು. 'ವರ್ಣ' ಶಬ್ದಕ್ಕೆ ವಿಸ್ತಾರಗೊಳಿಸುವುದು ಎಂಬರ್ಥವಿರುವುದು, (ವರ್ಣ-ವಿಸ್ತಾರ, ಪಾಣಿನಿ) ಆದ್ದರಿಂದ ಸಂಗೀತಶಾಸ್ತ್ರದಲ್ಲಿ ಗಾನಕ್ರಿಯೆ, ಎಂದರೆ ಹಾಡುವಿಕೆಯು ವರ್ಣ ವೆಂದೇ ಕರೆಯಲ್ಪಟ್ಟಿದೆ. 'ಗಾನಕ್ರಿಯೋಚ್ಯತೇ ವರ್ಣ: ಸ ಚತುರ್ಧಾ ಪ್ರಕೀರ್ತಿತಃ (ಸಂ. ರ, ೧-೬-೧), ಸಂಗೀತದಲ್ಲಿ ಆದಿತಾಳವರ್ಣ', 'ಆಟತಾಳವರ್ಣ'ಗಳೆಂದು ಪ್ರಸಿದ್ಧವಾದ ರಚನೆಗಳಲ್ಲಿ ಪ್ರತಿಯೊಂದು ಅಕ್ಷರವನ್ನೂ ಬೇಕಾದಂತೆ ಎಳೆದು ವರ್ಣಾಲಂಕಾರಗಳನ್ನು ಪ್ರಯೋಗಿಸುವುದಾದ್ದರಿಂದಲೇ ಅವಕ್ಕೆ 'ವರ್ಣ'ಗಳೆಂಬ ಹೆಸರಾಗಿದೆ. ಭರತನು ಹೇಳುವ ವರ್ಣಲಕ್ಷಣ ಹೀಗಿದೆ :
ಪದಂ ಲಕ್ಷಣಸಂಯುಕ್ತಂ ಯದಾ ವರ್ಸೋನುಕರ್ಷತಿ |
ತದಾ ವರ್ಣಸ್ಯ ನಿಷ್ಪತ್ತಿರ್ಜ್ಞೆಯಾ ಸ್ವರಸಮುದ್ಭವಾ ||
(೨೯-೧೮)
ವ್ಯಾಖ್ಯೆ- 'ಲಕ್ಷಣಸಂಯುಕ್ತಮಿತಿ-ಅನಿಟ್ಟಂತಂ ಪದಂ, ಸುಪ್ತಿ ಜಂತಂ ಪದಂ, ವಿಭಾಂತಂ
ಪದಮಿತಿ ಹಿ ತತ್ರ ಪ್ರಸಿದ್ಧಂ ತೇನ ಪದಮೇಕಂ ಯದಾ ಯತೋ ವರ್ಣ:-ಗೀತಿಕ್ರಿಯಾ,
ಅನುಕರ್ಷತಿ -ದೀರ್ಘಕಾಲಂ ಕರೋತಿ, ತದಾ ತತೋ ವರ್ಣಕಸ್ಯ ಸಂಕೀರ್ಣಸ್ಯ
ನಿಷ್ಪತ್ತಿ, ಮಾ ಪ್ರಾದೀನಾಂಚ ನಿಪಾತಾನಾಂ ಪದತ್ವ ಮೇವ |... ಯತಃ ಪದಂ ಕರ್ಷತಿ
ವಿಸ್ತಾರಯತಿ ತತೋ ಹೇತೋರ್ವಣ್ರತಿ ವರ್ಣಸಂಜ್ಞಾಯಾ ನಿಷ್ಪತ್ತಿರಿತಿ ನಿರುಕ್ತಂ |*
ವ್ಯಾಕರಣಶಾಸ್ರೋಕ್ತಲಕ್ಷಣವುಳ್ಳ ಪದವನ್ನು, ಎಂದರೆ ಅರ್ಥವತ್ತಾದ ಶಬ್ದವನ್ನು ಹಾಗೂ ಶಬ್ದದ ವರ್ಣಗಳನ್ನು (ಅಕ್ಷರಗಳನ್ನು ದೀರ್ಘಕಾಲ ಎಳೆದು ವಿಸ್ತಾರಗೊಳಿಸು ವುದರಿಂದ ಗಾನಕ್ರಿಯೆಗೆ 'ವರ್ಣ' ಎಂಬ ಹೆಸರು ಸಾರ್ಥಕವಾಗಿಯೇ ಬಂದಿದೆ ಎಂದರ್ಥ ಆದುದರಿಂದ ಹಾಡುವ ಪದ್ಯವು 'ವರ್ಣಕ'ವೆಂದು ಕರೆಯಲ್ಪಟ್ಟಿದೆ. *ಕಾವ್ಯ ಲಕ್ಷಣದಲ್ಲಿ ವಸ್ತುಕ, ವರ್ಣಕ ಎಂಬ ಎರಡು ವಿಭಾಗಗಳು ಇದರಿಂದಲೇ ಉಂಟಾಗಿರುವುದಾಗಿದೆ. ವಸ್ತುಕವೆಂದರೆ ಛಂದಸ್ಸಿನ ಪದ್ಯಗಳಿಂದ ರಚಿಸಲ್ಪಟ್ಟ 'ವಾಚನ ಕಾವ್ಯ', ಇದರ ತದ್ಭವವೇ ಕನ್ನಡದಲ್ಲಿ 'ಬಾಜನೆಗಬ್ಬ'ವೆಂದು ಕರೆಯಲ್ಪಟ್ಟಿದೆ. 'ವರ್ಣಕ'ವೆಂದರೆ, ಗೇಯ ಕಾವ್ಯ, ಕನ್ನಡದಲ್ಲಿ ಇದು 'ಹಾಡುಗಬ್ಬ', 'ಪದ'ಗಳಿಂದ ಕೂಡಿದ ರಚನೆ. ಆ ಪದಗಳೆಂದರೆ ಹಾಡುಗಳೆಂದೂ ಹಾಡುಗಳಿಂದ ಮಾಡಿದ್ದೇ ಹಾಡುಗಬ್ಬವೆಂದೂ 'ಕಾವ್ಯಾವಲೋಕನ'ದಲ್ಲಿ ನಾಗವರ್ಮನು ಕೊಡುವ ಲಕ್ಷಣಗಳಿಂದ ವ್ಯಕ್ತವಾಗುವುದು-
ತದ್ಭವಂ ತತ್ಸಮಂ ದೇಶೀತತ್ವಾತ್ ಪದಲಕ್ಷಣಂ |
ಪದಂ ಸ್ವರಾಧಿಕರಣಮರ್ಥಪ್ರತ್ಯಯಕಾರಿಯತ್ ||
(20..)
ಸ್ವರಾಲಂಕಾರೇಷು ಯತ್ಾಮಾನ್ಯಂ ಸುವರ್ಣಃ | ತದ್ಯೋಗಾತ್ತು ಗೀಯಮಾನಂ
ಪದಮಪಿ ವರ್ಣಕ ಇತ್ಯುಚ್ಯತೇ |
(2.5. g. 22-06).