ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ದೃಶ್ಯ ಪ್ರಯೋಗದ ಶಾಸ್ತ್ರೀಯತೆ / ೩೩

ಓಲೆಯ ಗರಿ ಬೆಂಡು ಇವುಗಳನ್ನು ಹೆಣೆದು ಮಾಡುವ ತಟ್ಟಿ ಆದುದರಿಂದ ಅದಕ್ಕೆ ಆ ಹೆಸರು.

ನಮ್ಮ ವೇಷಗಳ ಆಭರಣಗಳೂ ಬಹುಧಾ ನಾಟ್ಯಶಾಸ್ತ್ರದಲ್ಲಿರುವುವೇ. ಉದಾ: ಕರ್ಣಪತ್ರ, ಕರ್ಣಪೂರ = (ಕೆನ್ನೆ ಪೂ) ಕರ್ಣಕೀಲಕ = (ಕೇದಗೆ) ಕಟಕ = (ಕೈಕಟ್ಟು ), ಚಾಲಕ= (ಚಳಕಿ), ತಿರಸ = (ತ್ರಿಸರ), ಚತೂರಸ = (ಚತ್ರಾಸು), ಶಿಖಿಪತ್ರ ಎಂಬುದು ಕಿವಿಯ ಹಿಂಭಾಗಕ್ಕಿರುವ ನವಿಲುಗರಿಗಳಿಂದ ಮಾಡಿದ ಬೀಸಣಿಗೆಯಂತಹದು. ನಮ್ಮಲ್ಲಿ ಕೇಶಭಾರ ತಟ್ಟಿ ವೇಷಗಳಿಗೆ ಕಿರೀಟದ ಎರಡು ಬದಿಗಳಲ್ಲಿ ಕಿವಿಯ ಹಿಂಭಾಗದಲ್ಲಿ ಇದನ್ನು ಕುತ್ತುತ್ತಾರೆ. ನಾಟ್ಯಶಾಸ್ತ್ರದಲ್ಲಿ ಇದು ಕರ್ಣಾಭರಣಗಳಲ್ಲಿ ಸೇರಿದ್ದು ನಮ್ಮಲ್ಲಿಯ ಶೂರ್ಪನಖಿ, ನಕ್ರತುಂಡಿ ಇತ್ಯಾದಿ ರಾಕ್ಷಸ ಸ್ತ್ರೀ ವೇಷಗಳೂ ನಾಟ್ಯ ಶಾಸ್ರೋಕ್ತ ಲಕ್ಷಣಕ್ಕೆ ಸರಿಯಾಗಿಯೇ ಇವೆ.

ನಮ್ಮ ವೇಷಗಳು ಕುಪ್ಪಸ ತೊಡುವುದೂ ಚಲ್ಲಣ ಹಾಕಿಕೊಳ್ಳುವುದೂ ಶಾಸ್ರೋಕ್ತ ವಿಧಿಯೇ ಆಗಿದೆ. ನಾನಾ ಬಣ್ಣದ ಉದ್ದವಾದ ವಸ್ತ್ರಗಳನ್ನು ಅಂತರಂತರವಾಗಿ ಮೇಲಿಂದ ಮೇಲೆ ನಡುವಿಗೆ ಸುತ್ತಿ ಸುತ್ತಲೂ ಬಣ್ಣ ಬಣ್ಣದ ನೆರಿಗಳನ್ನೂ, 'ಸೋಗೆಒಲ್ಲಿ'ಗಳನ್ನೂ ಇಳಿಬಿಡುವುದು ಶಾಸ್ರೋಕ್ತ ಕ್ರಮವೇ. ಕಳ್ಳ, ಕಾಶ, ಕಾಸೆ ಎಂದು ಅದಕ್ಕೆ ಹೆಸರು, ವೀರ ವೇಷಗಳು ಹೀಗೆ ವಸ್ತ್ರ ಸುತ್ತಿ ನೆರಿಗೆಯನ್ನು ಇಳಿಬಿಡುವುದಕ್ಕೆ ವೀರಗಾಸೆ ಎನ್ನುತ್ತಾರೆ. ಬಡಗಲಾಗಿನ ವೇಷಗಳು ಎರಡೂ ಕಾಲುಗಳಿಗೆ ಸುತ್ತಿ ವಸ್ತ್ರ ಉಡುವುದಕ್ಕೆ 'ಕಚ್ಚೆ ' 'ಕಾಶ'ವೆಂದು ಹೆಸರಲ್ಲ. ಇಳಿಯ ಬಿಡುವ ವಸ್ತ್ರದ ನೆರಿ ಅಥವಾ ವಸ್ತ್ರದ ತುದಿಗೇ ಕಚ್ಚವೆಂದು ಹೆಸರು. ಕಾಲಿಗೆ ಸುತ್ತುವುದಕ್ಕಲ್ಲ. ಶಾಸ್ರೋಕ್ತವಾದ ಲಕ್ಷಣವು ಹೀಗಿದೆ :
(ಸಂಸ್ಕೃತ ನಿಘಂಟುಗಳಲ್ಲಿ ಕಚ್ಚಿದ ಅರ್ಥವನ್ನು ನೋಡಿರಿ)
ಅಥ ಕಾಶವಿಧಿಃ
ಉಪರ್ಯೋಕೇನಃ ವಣ ತದಧೋಸ್ತತ: ಪದ್ಯ: |
ನೀಲಪೀಠಹರಿದ್ರಕ್ತಶುಕ್ರೈಸ್ತುಲಿತರೂಪಕೈ: ǁ
ಸಂಯುಕ್ತಂ ಪಂಚಭಿರ್ವಣೆ್ರ್ರಯಥಾರುಚಿ ಯಥಾಕ್ರಮಂ |
ವೇಷಾಣ್ಯನಂ ಪಾರ್ಥಿವಾನಾಂ ಶಾಸ್ತ್ರಸಿದ್ದಾನ್ಯಥಾಪಿಚ
(ಭರತ ಕಲ್ಪಲತಾ ಮಂಜರಿ ಮತ್ತು ಭರತಾರ್ಣವ) ಮುಂದಿನಿಂದ ನಮ್ಮ ವೇಷಗಳು ಇಳಿಬಿಡುವ ವರ್ಣರಂಜಿತವಾದ ಕಚ್ಚೆಮುನ್ನಿಗೆ 'ವರ್ತನಿಕಾ' ಎಂದು ಶಾಸ್ತ್ರದ ಹೆಸರು. ಅದರ ಅಪಭ್ರಂಶವಾದ 'ಒತ್ತೆನಾಕ್' ಎಂಬ ಹೆಸರೇ ನಮ್ಮ ಆಟದಲ್ಲಿ ಅದಕ್ಕಿದೆ.
ಕುಪ್ಪಸಗಳನ್ನು ಧರಿಸುವುದೂ ಅಶಾಸ್ತ್ರೀಯವಲ್ಲವೆಂಬುದು ಈ ಲಕ್ಷಣ ಶ್ಲೋಕ ಗಳಿಂದ ವ್ಯಕ್ತವಾಗುತ್ತದೆ.
ತಥಾ ಸಂಚಿಂತ್ಯ ಭರತಃ ಕೂರ್ಪಾಸಂ ಪಂಚಧಾಕರೋತ್ |
ಜಘನಾಂತಂಬೋರುಮಧ್ಯಂ ಜಾನ್ವಂತಂ ಮಧ್ಯಜಾನುಕಂ ǁ
ಆಗುಲ್ಫಾತ್ತು ಪುರೋವಸ್ತ್ರಂ ಕಿಂಕಿಣೀಚರ್ಮಸಂಯುತಂ...
ಸಕಂಚುಕಂ ವಾಚಲನಂ ಚೈವ ಕೂರ್ಪಾಸಕಸ್ತಮಃ ǁ

(ಭ. ಕ. ಮಂ.)