ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ದೃಶ್ಯ ಪ್ರಯೋಗದ ಶಾಸ್ತ್ರೀಯತೆ / ೩೫


ತದೆ. ಗತಿ ಪ್ರಚಾರದಲ್ಲಿ ಹಚ್ಚೆಯಿಂದ ಹಜ್ಜೆಗೆ ಇರುವ ದೂರದಲ್ಲಿಯೂ ಭಿನ್ನತ್ವವಿದೆ. ಈ ನರ್ತನದ ವೈವಿಧ್ಯವನ್ನು ಪ್ರತ್ಯಕ್ಷ ಕಾಣಬೇಕಲ್ಲದೆ ಹೇಳಿ ತಿಳಿಸುವುದು ಅಸಾಧ್ಯ. ಇವೆಲ್ಲವೂ ಶಾಕ್ತಕ್ರಮಗಳೇ ಆಗಿವೆ. ಇವಕ್ಕೆಲ್ಲ ಪ್ರತ್ಯೇಕ ಲಕ್ಷಣವೂ, ಹೆಸರೂ ಶಾಸ್ತ್ರದಲ್ಲಿದೆ. ಪ್ರತಿಯೊಂದರ ಲಕ್ಷಣವನ್ನು ಬರೆದರೆ ಅದೇ ಒಂದು ದೊಡ್ಡ ಗ್ರಂಥ ವಾಗಬಹುದು. ಈ ಚಿಕ್ಕ ಲೇಖನದ ವ್ಯಾಪ್ತಿಗೆ ಅದು ಒಳಪಡದು. ಕೆಲವನ್ನು ಮಾತ್ರ ಉದಾಹರಿಸುತ್ತೇನೆ. ದೇವತಾವೇಷಗಳೂ, ರಾಜವೇಷಗಳೂ ಕಾಲುಗಳನ್ನು ನಾಲ್ಕು ಗೇಣುಗಳಷ್ಟು ಅಂತರದಲ್ಲಿ ಅಗಲಿಸಿಡಬೇಕೆಂದೂ ಮಧ್ಯಮ ವೇಷಗಳ ಕಾಲುಗಳು ಎರಡು ಗೇಣು ಅಂತರದಲ್ಲಿರಬೇಕೆಂದೂ ನೀಚಪಾತ್ರ ಸ್ತ್ರೀವೇಷಗಳ ಕಾಲುಗಳು ಕ್ಷೀಣಗಲದಲ್ಲಿರ ಬೇಕೆಂದೂ ನಾಟ್ಯಶಾಸ್ತ್ರದ ನಿಯಮ.

ಚತುಸ್ತಾಲಯ್ತು ದೇವಾನಾಂ ಪಾರ್ಥಿವಾನಾಂ ತಥೈವ ಚ | ದ್ವಿತಾಲಶೈವ ಮಧ್ಯಾನಾಂ ತಾಲ: ನೀಚಸಂಗಿನಾಂ ||

ತಾಲವೆಂದರೆ ಕೈ ಬೆರಳುಗಳನ್ನು ಅಗಲಿಸಿದಾಗ ಹೆಬ್ಬೆರಳಿನ ತುದಿಯಿಂದ ನಡುಬೆರಳ ತುದಿವರೆಗಿರುವಷ್ಟು ಉದ್ದಳತೆ. ಗತಿಪ್ರಚಾರದಲ್ಲಿ ಹಜ್ಜೆಯಿಂದ ಹಜ್ಜೆಗಿರುವ ದೂರವೂ, ಕಾಲ ಪ್ರಮಾಣವೂ ಮೇಲಿನ ಅನುಕ್ರಮದಲ್ಲಿ ನಾಲ್ಕು, ಎರಡು, ಒಂದು ಕಲೆಗಳಷ್ಟಿರ ಬೇಕೆಂದಿದೆ. ಒಂದು ಕಲೆ ಎಂದರೆ ನಾಲ್ಕು ಪ್ರಸ್ತಾಕ್ಷರಗಳನ್ನು ಉಚ್ಚರಿಸಲು ಬೇಕಾಗುವಷ್ಟು ಕಾಲ ಪ್ರಮಾಣ, ಆಯಾ ಸಂದರ್ಭಕ್ಕೆ ತಕ್ಕಂತೆ ಈ ಕಾಲ ಪ್ರಮಾಣವನ್ನು ದ್ವಿಗುಣಿತ ಚತುರ್ಗುಣಿತವಾಗಿ ಮಾಡಬೇಕು. ಹೀಗೆಯ ಯುದ್ಧಾದಿ ಭಿನ್ನ ಸಂದರ್ಭಗಳಲ್ಲಿ ಕಾಲುಗಳನ್ನು ಎಷ್ಟೆಷ್ಟು ಎತ್ತರಕ್ಕೆ ಎತ್ತಬೇಕೆಂಬುದಕ್ಕೂ ವಿಧಿ ಇದೆ.

ಸ್ವಭಾವರುತ್ತ ಮಗ ಕಾರ್ಯಾ ಜಾನುಕಟೀಸಮಂ || ಯುದ್ಧಚಾರೀ ಪ್ರಯೋಗೇಷು ಜಾನುನಸಮಂ ಭವೇತ್ || ಇತ್ಯಾದಿ.

ಮೇಲೆ ಹೇಳಿದ ಪ್ರಕಾರದ ಗತಿ ಪ್ರಚಾರದಿಂದ ರಂಗಸ್ಥಳದ ನಾಲ್ಕು ದಿಕ್ಕಿಗೂ ಸುತ್ತಾಡಬೇಕೆಂಬುದೂ ನಾಟ್ಯಶಾಸ್ರೋಕ್ತ ಕ್ರಮವೇ ಆಗಿದೆ.

ಅನೇನ ಚಾರೀಯೋಗೇನ ಪರಿಕ್ರಮ್ಯ ಚತುರ್ದಿಶಂ | ಬಾಹ್ಯಭ್ರಮರಕಂ ಚೈವ ರಂಗಕೋಣೇ ಪ್ರಸಾರಯೇತ್ ||

ಪ್ರತಿಯೊಂದು ವೇಷವೂ ರಂಗಪ್ರವೇಶವನ್ನು ಮಾಡಿ ನಿಮ್ಮಮಿಸುವ ತನಕ ಅದರ ಗತಿ ಪ್ರಚಾರಗಳೂ ಸ್ವಭಾವಾನುಗುಣವಾದ ಪೌರುಷ ಪ್ರದರ್ಶನಾದಿ ನೃತ್ತಲೀಲೆಗಳೂ ಏಕಪ್ರಕಾರವಾಗಿರಬೇಕೆಂದಿದೆ.

ಯಾ ಯಸ್ಯ ಲೀಲಾ ನಿಯತಾಗತಿಶ್ವ ರಂಗ ಪ್ರವಿಷ್ಯಸ್ಯ ವಿಧಾನತಸ್ತು |ತಾಮೇವ ಕುರ್ಯಾತ್ತು ವಿಮುಕ್ತಸತ್ತೋ ಯಾವನ್ನರಂಗಾಕೃತಿ ನಿಃಸೃತಃ ಸಃ || ಭ. ನಾ


ತಿರುಗಿ ಹಾರುವುದಕ್ಕೆ 'ಉತ್ಸುಕರಣ'ವೆಂದೂ, ನಿಂತ ಚಕ್ರದಂತೆ ತಿರುಗುವುದಕ್ಕೆ (ಚಕ್ರಸುತ್ತು), 'ಭ್ರಮರೀ' ಎಂದೂ, ಪ್ರದಕ್ಷಿಣವಾಗಿ ತಿರುಗುವುದಕ್ಕೆ'ಅಂತರ್ಭಮರಿ' ಎಂದೂ ಅಪ್ರದಕ್ಷಿಣೆಯದಕ್ಕೆ 'ಬಾಹ್ಯಭ್ರಮರೀ' ಎಂದೂ, ಮೇಲಕ್ಕೆ 'ತಿರುಗಿ ಹಾರಿ ಕೆಳಬೀಳುವಾಗ ಕುಕ್ಕುಟಾಸನದಲ್ಲಿ ನೆಲಮುಟ್ಟಿ ಅಲ್ಲಿಂದಲೇ ಜಿಗಿದು ತಿರುಗಿ