ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೪ / ಕುಕ್ಕಿಲ ಸಂಪುಟ

ಗೆಜ್ಜೆ ಪಟ್ಟಿ, ಅದಕ್ಕೆ ಇಳಿಗುಂಜಿ, ಸಣ್ಣ ಹಲ್ಲೆಯ ಸುರಾಲ್‌ ಕಡ್ಡಿ, ಮಾರ್‌ಮಾಲೆ, ಕೈಯುಂಗುರ, ಕಾಲುಂಗುರ ಇವೆಲ್ಲ ನಾಲ್ಕಾರು ವಿಧದಲ್ಲಿದ್ದವು. ಹಸುರು ಅಥವಾ ಗರ್ಭಸುತ್ತಿ ಬಣ್ಣದ ಇಪ್ಪತ್ತು ಮೊಳ ಉದ್ದದ ಜರತಾರಿ ಸೀರೆಯನ್ನು ಕಚ್ಚೆಹಾಕಿ, ಮುಂದುಗಡೆ ತೆರೆನೆರಿಯಿಟ್ಟು, ಉಡಬೇಕು. ಈ ವಿಧದ ಸ್ತ್ರೀವೇಷಗಳು ಈಗ ಕಾಣುವುದಕ್ಕಿಲ್ಲವೆಂಬುದು ತೀರ ವ್ಯಸನದ ಸಂಗತಿ. ಪೂರ್ವರಂಗದ ಸಭಾವಂದನೆಯಲ್ಲಿ ಇಂತಹ ಎಂಟು ಸ್ತ್ರೀವೇಷಗಳ ನರ್ತನವಿರುತ್ತಿತ್ತು. (ಇವಕ್ಕೆ 'ಇಂದುವದನೆ' ಸ್ತ್ರೀವೇಷಗಳೆಂದು ಹೆಸರು).

ತೆಂಕಮಟ್ಟಿನ ಆಟದ ಪುರುಷವೇಷಗಳ ನೃತ್ಯ ವಿಧಾನಗಳಲ್ಲಿ ಮತ್ತು ಬಣ್ಣ, ಚುಟ್ಟಿ, ಕಿರೀಟ, ಆಭರಣ, ದಗಲೆ, ಭುಜಕಿರೀಟ, ಮುನ್ನಿ ಮುಂತಾದ ವೇಷಭೂಷಣಗಳಲ್ಲಿಯೂ ಹಿಂದಕ್ಕೆ ಈಗ ಇರುವುದಕ್ಕಿಂತ ಹೆಚ್ಚಿನ ವೈಶಿಷ್ಟ್ಯಗಳಿದ್ದುವು. ಅವೆಲ್ಲವನ್ನು ಪ್ರಕೃತ ವರ್ಣಿಸುವುದು ದುಸ್ತರವಾದ ಕೆಲಸ. ಅಂದಿನ ಆಭರಣ ವಿಶೇಷಗಳೆಂದರೆ ಏನೇನಿದ್ದವು ಎಂಬುದಕ್ಕೆ ಈಗ ಸುಮಾರು ೮೦ ವರ್ಷಕ್ಕೆ ಹಿಂದೆ ಕಾಸರಗೋಡು ತಾಲೂಕಿನ ಕೂಡಲು ದಶಾವತಾರ ಮೇಳದಲ್ಲಿದ್ದ ಆಟದ ಸಾಮಾನುಗಳ ಒಂದು ಪಟ್ಟಿಯನ್ನು ಕೆಳಗೆ ಕೊಡುತ್ತೇನೆ. ಇದರಿಂದ, ನಮ್ಮ ದಶಾವತಾರ ಆಟದ ಪೂರ್ವಸ್ವರೂಪ ಹೇಗಿತ್ತೆಂಬುದನ್ನೂ, ಕೇರಳದ ಸಂಪ್ರದಾಯಕ್ಕೆ ಅದೆಷ್ಟು ಸಾಮ್ಯವಾಗಿತ್ತೆಂಬುದನ್ನೂ ವಾಚಕರು ಊಹಿಸಿಕೊಳ್ಳಬಹುದು. (ದಿವಂಗತ ಕೂಡಲು ಸುಬ್ಬರಾಯ ಶ್ಯಾನುಭಾಗರ ಹಸ್ತಾಕ್ಷರದಲ್ಲಿದ್ದ ಈ ಪಟ್ಟಿಯು ದಿ| ಕೂಡಲು ಈಶ್ವರ ಶಾನುಭೋಗರಲ್ಲಿ ದೊರೆತದ್ದಾಗಿದೆ).

ಆಟದ ಸಾಮಾನುಗಳ ಪಟ್ಟಿ

ಕಟ್ಟುವೇಷದ ಬಾಬ್ತು ವೇಷದ ಸಾಮಾನು ೧ರ-

೧. ಕೈ ತಟ್ಟಿಗೆ ಕಟ್ಟುವ ಬಾಬು ಹಲ್ಲೆ ವಾಸುರಿಕಡ್ಡಿ ಮುಳ್ಳು ಹವಳದಿಂದ ಸಹ ಐದಾರು ತರದಲ್ಲಿರುವ ಕೈಕಟ್ಟು, ಜೋಡು ೬.
೨. ಹಲ್ಲೆ ವಾ ತಾಯಿತ್ತಿಮುಳ್ಳು ಮತ್ತು ಬೋಳುಮುಳ್ಳು ಈ ಪ್ರಕಾರ ನಾಲ್ಕು ತರದಲ್ಲೂ (ತರಮಾಟ?) ಇರುವ ತೋಳಕಟ್ಟು ತೋಳ ಬಾಪುರಿ ಜೋಡು - ೧.
೩. ಹಲ್ಲೆ ಬಾಬು ತೋಳಿಗೆ ಕಟ್ಟುವ ಬಾಜು ಒಂದು ಜೊತೆ - ೧.
೪. ಮುಳ್ಳಿನ ಬಾಬ್ತು ಭುಜಕಿರೀಟ ಜೋಡು - ೧.
೫. ಐದಳೆ ಬಾಬ್ತು ಮಡಂದಲೆಮಣಿ ಕ್ಯಾಸರ ಜೋಡು – ೧.
೬. ಹವಳದ ಬಾಬ್ತು ಕಾಯಿಸರ ಜೋಡು - ೧
೭. ಕರ್ಣಪಾತ್ರ ಜೋಡು – ೧
೮. ಕೆಂನೆಪ್ಪೂ ಜೋಡು - ೧
೯. ಚೆಂನೆಪ್ಪೂ ಜೋಡು - ೧
೧೦. ಹಲ್ಲೆ ವಾತಾಯಿತ್ತಿ ಈ ಎರಡು ತರದ ಬಾಬು ಕೊರಳ ಅಡ್ಡಿಗೆ - ೧
೧೧. ವೀರಕತೆ - ೧
೧೨. ಮಾರ್‌ಮಾಲೆ ಸುರಾಲ ಕಡ್ಡಿ ಜೋಡು – ೧
೧೩. ಬೋಳು ಮುಳ್ಳಿನ ಜೋಡು - ೧
೧೪. ಹಲ್ಲೆ ವಾ ತಾಯಿತ್ತಿ ಈ ಎರಡು ತರದ ದೊಡ್ಡ ಡಾಬು - ೧