ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೮ / ಕುಕ್ಕಿಲ ಸಂಪುಟ

ಒಂದಿಷ್ಟೂ ಕಾಣದಂತೆ ಬಣ್ಣಗಳಿಂದ ಮುಚ್ಚಬೇಕು. ಭರತನು ವರ್ಣಕ್ರಿಯೆಯಲ್ಲಿ ಇದನ್ನೇ ಹೇಳುತ್ತಾನೆ : ಮುಖಕ್ಕೆ ಬಣ್ಣ ಹಚ್ಚುವುದಕ್ಕೆ ಶಾಸ್ತ್ರದಲ್ಲಿ 'ವರ್ತನೆ' ಎಂದು ಹೆಸರು.

ವರ್ತನಾಚ್ಛಾದಿತಂ ವೇಷಂ ಸ್ವವೇಷ ಪರಿವರ್ಜಿತಂ |
ನಾಟ್ಯಧರ್ಮಪ್ರವೃತ್ತೇನ ಜೇಯಂ ತತ್ತ್ವ ಕೃತಿಸ್ಥಿತಂ ||
ಸ್ವವರ್ಣಮಾತ್ಮನಶ್ಚಾನ್ಯಂ ವರ್ಣಜೈರ್ವೇಷ ಸಂಕ್ರಯ್ಯ |
ಪ್ರಕೃತಿರ್ವಾಸ್ಯ ಕರ್ತವ್ಯಾ ಯಸ್ಯ ಪ್ರಕೃತಿಮಾತಾ ||
ವರ್ಣಕೈಶೈವ ವೇಪೈಶ್ಚ ಭಾದಿತಃ ಪುರುಷಸ್ತ್ರದಾ |
ಪರಪ್ರಭಾವಂ ಕುರುತೇ ಯಸ್ಯ ವೇಷಸಮಾಶ್ರಯಂ ||(ಭ. ನಾ.)

ಭಾರತವರ್ಷದಲ್ಲಿ ವೇಷಗಳ ವರ್ಣಕ್ರಿಯೆಗೆ ವಿಶೇಷ ಕ್ರಮಗಳನ್ನು ವಿಧಿಸಿದ್ದಾನೆ :

ಪುನಶ್ಚ ಭಾರತೇ ವರ್ಷ ತಾಂಸ್ತಾನ್‌ ವರ್ಹಾನ್ನಿ ಬೋಧತೆ |
ರಾಜಾನಃ ಪಂಚವರ್ಣಾ ಸ್ಯು: ಶ್ಯಾಮೋ ಗೌರಸ್ತಥೈವಚ ||

ಕೆಂಪು ಹಸುರು ಗೌರ (ಚಾಯ) ಬಿಳಿ, ಕಪ್ಪು ಸೇರಿ ಐದು ಬಗೆಯ ಬಣ್ಣಗಳನ್ನು ರಾಜವೇಷಗಳಿಗೆ ಹೇಳಿರುತ್ತಾನೆ. ದೈತ್ಯ, ದಾನವ ರಾಕ್ಷಸರುಗಳಿಗೆ ರಾಕ್ಷಸರುಗಳಿಗೆ ಹೇಳಿರುವ ವರ್ಣಕ್ರಿಯೆ, ವೇಷಭೂಷಣಗಳು, ಆಯಾ ಭೂಮಿಕೆಯ ಸ್ವಭಾವಕ್ಕೆ ತಕ್ಕಂತೆ ನಮ್ಮ ತೆಂಕ ಮಟ್ಟಿನ ಆಟದಲ್ಲಿ ಉಪಯೋಗಿಸುವಂತಹವೇ ಆಗಿವೆ. ನಮ್ಮಲ್ಲಿ ವರ್ಣಗಳನ್ನು ಮಿಶ್ರಮಾಡುವ ಕ್ರಮವೂ ನಾಟ್ಯಶಾಸ್ರೋಕ್ತವಾದುದೇ. 'ರಕ್ತಪೀತಸಮಾಯೋಗಾದ್ರ ಇತ್ಯಭಿಧೀಯತೇ' ಇತ್ಯಾದಿ. (ಕೆಂಪು ಹಳದಿ ಮಿಶ್ರ ಮಾಡಿದ್ದು ಗೌರವರ್ಣ, ನಮ್ಮಲ್ಲಿ ಮತ್ತು ಕಥಕಳಿಯಲ್ಲಿ ಇದಕ್ಕೆ 'ಚಾಯ್' ಎನ್ನುತ್ತಾರೆ), ವೇಷದ ಸ್ವಭಾವವು ಯಾವ ರಸಭಾವಾಧಿಷ್ಟಿತವಾಗಿದೆಯೋ ಆ ರಸಕ್ಕೆ ನಿರ್ದಿಷ್ಟವಾದ ವರ್ಣವೇ ಆ ವೇಷವನ್ನು ಚಿತ್ರಿಸುವ ಪ್ರಧಾನ ವರ್ಣವಾಗಿರುತ್ತದೆ.

ಶ್ಯಾಮೋ ಭವೇತ್ತು ಶೃಂಗಾರಃ ಸಿತೋ ಹಾಸ್ಯ: ಪ್ರಕೀರ್ತಿತಃ |
ಕಪೋತಃ ಕರುಣಶ್ಚಿವ ರ ರೌದ್ರಃ ಪ್ರಕೀರ್ತಿತಃ ||
ಗೌರೋ ವೀರನ್ನು ವಿಜೇಯಃ ಕೃಷ್ಣಶ್ಯಾಪಿ ಭಯಾನಕಃ |
ನೀಲವರ್ಣಸ್ತು ಭೀಭತ್ಸ: ಪೀತವಾದ್ಭುತಃ ಸ್ಮೃತಃ ||

ಶೃಂಗಾರಕ್ಕೆ ಶ್ಯಾಮವರ್ಣ ಎಂದರೆ ಎಳೆಹಸುರು (light green), ಹಾಸಕ್ಕೆ ಬಿಳಿ, ಪಾರಿವಾಳದ ಬಣ್ಣ ಕರುಣರಸಕ್ಕೆ, ರೌದ್ರಕ್ಕೆ ಕೆಂಪು, ವೀರಕ್ಕೆ ಗೌರ, ಭಯಾನಕಕ್ಕೆ ಕಪ್ಪು ಬಣ್ಣ, ಭೀಭತ್ಸಕ್ಕೆ ಹಳದಿ ಬಣ್ಣ- ಇವು ಪ್ರತ್ಯೇಕ ರಸಕ್ಕೆ ಭರತನು ಹೇಳಿದ ವರ್ಣಗಳು.

ರಾಕ್ಷಸ ವೇಷಗಳನ್ನು ಕುರಿತು ಅವುಗಳನ್ನು ಸಾದಾ ರೌದ್ರರಸಾಧಿಷ್ಠಿತ ತಗಳೆ೦ದೇ ರೂಪಿಸಬೇಕೆನ್ನುತ್ತಾನೆ. ಇತರ ರಸಸಂದರ್ಭವಿದ್ದರೂ ಅವುಗಳ ವೇಷವರ್ಣಗಳು ರೌದ್ರಸ್ವಭಾವದಲ್ಲೇ ಇರಬೇಕೆನ್ನುತ್ತಾನೆ :

ಅತಃ ಪರಂತು ವಕ್ಷ್ಯಾಮಿ ದೈತ್ಯ ರಕ್ಷೆಗಣಾನ್ ಪ್ರತಿ |
ಏಕ ಏವ ರಸಸ್ತೇಷಾಂ ಸ್ಥಾಯೀ ರೌದ್ರೋ ದ್ವಿಜೋತ್ತಮಾಃ ||
ನೇಪಥ್ಯ ರೌದ್ರೋ ವಿಶ್ಲೇಯಂಗರೌದ್ರಸ್ತಥೈವಚ |
ತಥಾ ಸ್ವಭಾವದವ ತಿಸ್ರೋ ರೌದ್ರಃ ಪ್ರಕೀರ್ತಿತಃ ||