ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦ / ಕುಕ್ಕಿಲ ಸಂಪುಟ

ಇವುಗಳನ್ನು ಹೆಣೆದು ಮಾಡುವುದಾದ್ದರಿಂದ ಅದು ತಟ್ಟೆ' ಎಂದು ಕರೆಯಲ್ಪಡುವುದಾಗಿದೆ. ಸಂಸ್ಕೃತದಲ್ಲಿ ಇದಕ್ಕೆ ಪುಸ್ತ, ಕಿಲಿಂಜ ಎಂದು ಹೆಸರು.
ವೇಷಗಳ ಆಭರಣಗಳೂ ಬಹುಧಾ ನಾಟ್ಯಶಾಸ್ತ್ರದಲ್ಲಿರುವಂಥದೇ ಎಂಬುದನ್ನು ಲಕ್ಷಿಸಬಹುದು. ಉದಾ: ಕರ್ಣಪತ್ರ, ಕರ್ಣಪೂರ (ಕನ್ನಪೂ), ಬಾಹು ಪೂರ (ಬಾಪುರಿ),ಕೆನ್ನೆಪು, ಕರ್ಣಕೀಲಕ (ಕೇದಿಗೆ), ಕಟಕ (ಕೈ ಕಟ್ಟು), ಚಾಲಕ (ಚಳಕಿ), ತಿರಸ (ತ್ರಿಸರ),ಚತರಸ (ಚೆತ್ರಾಸು), 'ಶಿಖಿಪತ್ರ' ಎಂಬುದು ಕಿವಿಯ ಹಿಂಭಾಗಕ್ಕಿರುವ ನವಿಲುಗರಿ ಗಳಿಂದ ಮಾಡಿದ ಬೀಸಣಿಗೆಯಂತಹುದು. ನಮ್ಮಲ್ಲಿ ಕೇಶಭಾರ ತಟ್ಟಿ ವೇಷಗಳಿಗೆ ಕಿರೀಟದ ಎರಡು ಬದಿಗಳಲ್ಲಿ, ಕಿವಿಯ ಹಿಂಭಾಗಕ್ಕೆ ಇದನ್ನು ಕುತ್ತುತ್ತಾರೆ. ಕೇರಳ ಕಥಕಳಿ ಯಲ್ಲಿಯೂ ಇದನ್ನು ಉಪಯೋಗಿಸುತ್ತಾರೆ.
ಕಥಕಳಿಯಲ್ಲಿರುವಂತೆ ನಮ್ಮಲ್ಲಿಯ ಶೂರ್ಪನಖಿ, ನಕ್ರತುಂಡಿ ಇತ್ಯಾದಿ ರಾಕ್ಷಸ ಸ್ತ್ರೀವೇಷಗಳೂ ನಾಟ್ಯಶಾಸ್ರೋಕ್ತ ಲಕ್ಷಣಕ್ಕೆ ಸರಿಯಾಗಿಯೇ ಇವೆ.
ತೆಂಕಮಟ್ಟಿನ ವೇಷಗಳು ಕುಪ್ಪಸ ತೊಡುವುದೂ, ಚಲ್ಲಣ ಹಾಕಿಕೊಳ್ಳುವುದೂ ಶಾಸ್ರೋಕ್ತ ವಿಧಿಯೇ ಆಗಿದೆ. ನಾನಾ ಬಣ್ಣದ ಉದ್ದವಾದ ನರಿ ವಸ್ತ್ರಗಳನ್ನು ಅಂತರಂತರವಾಗಿ ಮೇಲಿಂದ ಮೇಲೆ ನಡುವಿಗೆ ಸುತ್ತಿ ಸುತ್ತಲೂ ಬಣ್ಣಬಣ್ಣದ ನೆರಿಗಳನ್ನೂ ಸೋಗೆ ಒಲ್ಲಿ'ಗಳನ್ನೂ ಇಳಿಬಿಡುವುದೂ ಶಾಸ್ರೋಕ್ತ ಕ್ರಮವೇ. 'ಕಚ್ಚ' 'ಕಾಸ' ಅಥವಾ ಕಾಸ ಎಂದು ಅದಕ್ಕೆ ಹೆಸರು. ವೀರವೇಷಗಳು ಹೀಗೆ ವಸ್ತ್ರ ಸುತ್ತಿ ನೆರಿಗಳನ್ನು ಇಳಿಬಿಡುವುದಕ್ಕೆ ವೀರಗಾಸೆ ಎನ್ನುತ್ತಾರೆ. ಬಡಗಲಾಗಿನ ವೇಷಗಳು ಎರಡೂ ಕಾಲುಗಳಿಗೆ ಸುತ್ತಿ (ಸೈಕಲ್ ಕಚ್ಚೆ) ಲುಂಗಿ ಉಡುವುದು ನಿಜವಾದ ವೀರಗಾಸೆಯಲ್ಲ. ಇಳಿಬಿಡುವ ವಸ್ತ್ರದ ನೆರಿ ಅಥವಾ ವಸ್ತ್ರದ ತುದಿಯಂಚಿಗೇ ಕಚ್ಚವೆಂದು ಹೆಸರಿರುವುದು ಹೊರತು ಕಾಲಿಗೆ ಸುತ್ತುವುದಕ್ಕಲ್ಲ. ಅದರ ಶಾಸ್ರೋಕ್ತ ಲಕ್ಷಣ ಹೀಗಿದೆ :
ಅಥ ಕಾಶ ವಿಧಿಃ
ಉಪರ್ಯೋಕೇನ ವಣ, ತದಧೋಧಸ್ವತಃ ಪರೈ: |
ನೀಲಪೀತ ಹರಿದ್ರಕ್ಕೆ ಶುಕ್ರೈಸ್ತುಲಿತರೂಪಕ್ಕೆ: |
ಸಂಯುಕ್ತಂ ಪಂಚಭಿರ್ವಣ್ಯ್ರ್ರಯಥಾರುಚಿ ಯಥಾಕ್ರಮಂ |
ವೇಷಾಣ್ಯವಂ ಪಾರ್ಥಿವಾನಾಂ ಶಾಸ್ತ್ರ ಸಿದ್ಧಾನ್ಯಥಾ ಪಿಚ ||(ಭರತಾರ್ಣವ)
ನಮ್ಮ ವೇಷಗಳು ಮುಂದುಗಡೆ ಸೊಂಟದಿಂದ ಇಳಿಬಿಡುವ ವರ್ಣರಂಜಿತವಾದ 'ಕಚ್ಚೆ ಮುನ್ನಿ'ಗೆ ಶಾಸ್ತ್ರದಲ್ಲಿ 'ವರ್ತನಿಕಾ' ಎಂದು ಹೆಸರು. ಅದರ ಅಪಭ್ರಂಶವಾದ 'ಒತ್ತನಾಕ್' ಎಂಬ ಹೆಸರೇ ನಮ್ಮಲ್ಲಿ ಅದಕ್ಕಿರುವುದಾಗಿದೆ.
ಕುಪ್ಪಸಗಳನ್ನು ಧರಿಸಿರುವುದೂ ಶಾಸ್ತ್ರೀಯ ಕ್ರಮವೆಂಬುದು ಈ ಲಕ್ಷಣ ಶ್ಲೋಕಗಳಿಂದ ವ್ಯಕ್ತವಾಗುವುದು.
ತಥಾ ಸಂಚಿಂತ್ಯ ಭರತಃ ಕೂರ್ಪಾಸಂ ಪಂಚಧಾಕರೋತ್ |
ಜಘನಾಂತಂ ಚೋರು ಮಧ್ಯಂ ಜಾನ್ವಂತಂ ಮಧ್ಯಜಾನುಕಂ ||
ಅಗುಲ್ಬಾತ್ತು ಪುರೋವಂ ಕಿಂಕಿಣೀ ಚರ್ಮಸಂಯುತಂ |
ಸಕಂಚುಕಂ ವಾಚಲನಂ ಚೈವ ಕೂರ್ಪಾಸಕಸ್ತನುಃ || (ಭ.ಕ.ಮಂ.)