ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨ / ಕುಕ್ಕಿಲ ಸಂಪುಟ

ನಮ್ಮ ಆಟದಲ್ಲಿಯೂ ಇಬ್ಬರು ಕೋಡಂಗಿಗಳು ಕೋಡಂಗಿಗಳು ಬಂದು ಹರೇ ರಾಮಾ ಗೋವಿಂದಾ, ಹತ್ತವತಾರಾ ಗೋವಿಂದಾ, ಕೇಶವ ಮಾಧವ ಗೋವಿಂದಾ ಎಂದು ನಾಮಸ್ಮರಣೆ ಮಾಡುತ್ತಾ ಅವೇ ಮಾತುಗಳನ್ನು ಹೇಳುತ್ತಿರುತ್ತಾರೆ.
ಆಮೇಲೆ ಎಳೆವಯಸ್ಸಿನ ಎರಡು ಬಾಲವೇಷಗಳು ಬಂದು ಸ್ತುತಿವರ್ತನ ಮಾಡಬೇಕೆಂದು ಶಾಸ್ತ್ರವಿಧಿ ಇದೆ. ಇದಕ್ಕೆ 'ಬಾಲಕ್ರೀಡಾವಿಧಿ' ಎಂದೇ ಹೇಳಲಾಗಿದೆ. ನಮ್ಮಲ್ಲಿಯೂ ಎರಡು ಕುಟ್ಟಿವೇಷಗಳು (ಕಟ್ಟುವೇಷಗಳು) ಈ ಸ್ತುತಿನರ್ತನವನ್ನು ಮಾಡುತ್ತವೆ, ಶಿವ, ಸ್ಕಂದ, ವಿಷ್ಣು, ಇಂದ್ರ ಮುಂತಾದ ನಾನಾ ದೇವತೆಗಳ ಸ್ತುತಿಗೀತ ಗಳಿಗೆ ಅವು ನರ್ತನ ಮಾಡಬೇಕು. ಆ ಕುಣಿತದಲ್ಲಿ ಕೈಯಡು, ಕೌತಕಿತ ಎಂಬ ವಿಶೇಷ ಸ್ತುತಿ ನರ್ತನೆಗಳಿವೆ. 'ಭರತಾರ್ಣವ' ಗ್ರಂಥದಲ್ಲಿ ಇವುಗಳ ಲಕ್ಷಣ ಹೀಗಿದೆ :
ಕೈಯೆಡ್ವಾದಿಸು ದಕ್ಕ ದಿಕ್ಕ ದಿಗಿದ್ದೇವಚ |
ಶಿರೋಭೇದೈ: ಸಮಾಯುಕೋ ದೃಷ್ಟಿ ಸ್ನಾನಕ ಸಂಯುತಃ ||
ನೃತ್ಯಹಸ್ರಾನುಸಾರೇಣ ಪಾದಚಾರಿಸ್ತು ಕೈಯೆಡುಃ ||
ತೆಲುಗು ವ್ಯಾಖ್ಯಾನ : 'ನಾಂದೀ ಚೇತನವೆನುಕ ತತ್ತಕಾರಮು ಜೇಶಿ ಅರಿದಿರು ಮರುದಿರು... ವಾಂಯಿಂಚವನು, ಅನುವನುಕ ವಿನಾಯಕ ಕೌತುಕಮುನ ಶಾಸ ಪ್ರಕಾರಾನ ಕೈಯೆಡುಲುನ್ನು ನಾಟ್ಯ ಪ್ರಾರಂಭಮಂದು ಜೇಯವನು' ತಾತ್ಪರ್ಯ ವೇನೆಂದರೆ ನಾಂದಿ ಶ್ಲೋಕದ ಬೆನ್ನಿಗೆ ತತ್ತಕಾರದೊಡನೆ, ಎಂದರೆ ಆ ಹೆಸರಿನ ಮೃದಂಗದ ಗತ್ತುಗಳೊಡನೆ 'ಅರಿದಿರು ಮರುದಿರು'... ಎಂಬ ಸ್ತುತಿವಾಕ್ಯವನ್ನು ಹೇಳಬೇಕು. ಅನಂತರ ಕೈಯೆಡು ಕುಣಿತದಿಂದ ಗಣಪತಿ ಕೌತಕಿತವೆಂಬ ನಾಟ್ಯಾರಂಭ ಮಾಡಬೇಕು. ನಮ್ಮ ಯಕ್ಷಗಾನದಲ್ಲಿಯೂ ಇದು ತಪ್ಪದೇ ಆಚರಿಸಲ್ಪಡುತ್ತದೆ. ಸಭಾ ಲಕ್ಷಣ ಗ್ರಂಥದಲ್ಲಿ ಅದೆಲ್ಲ ಇದ್ದೇ ಇದೆ- ತಾಂ ಧಿಗಿಧಿಗಿತೈ | ತಂಧಿಗಿ ತತ್ತರಿ ತತ್ವಾಂ | ಹುತ್ತಾಹುತಕಿಟ ಗಣಪತಿ ಕೌತುಕ ತೋಂ ಕಿತ್ತಾಕಿತಕತ್ತಿತ್ತಾಂ | ತಿರುವುಟು ತೋಂಗುತ ತರಿಕಿಟಕಿಟತಕ ತೋಂಗುತಕ | ಆರಿದಿರು ಮರುದಿರು ಏಘನವಿನಾಯಕ ವಿನಕುಟ ಅರಳಿಯ ಗಣಪತಿ ಜೇ ಜೇ ಜಕ್ಕಿಟ ಉದರಿಕಿಟಂ | ಕಿಾಂತದಿಕ್ಕು ತುದಿಕ್ಕು ಆನೆಮುಖತ್ತವನ್ ತಕ್ಕಿಟಕಿಟತಕ ಗಣಪತಿ ಕವಿತಂ | ಕತೆಯ‌ ಏನೆಯ‌ ಉಗುದಾಂ ಉಗ್ರುದೀಂ ತಕ್ಕುದಿಕ್ಕು ತಕ್ಕುಟ್ಟೆ ತಕ್ಕಟಕಿಟತಕತೋ- ಇತ್ಯಾದಿ. ಶಾಸ್ತ್ರದಲ್ಲಿ ಈ ಕೌತಕಿತದ ಲಕ್ಷಣ ಹೀಗಿದೆ :
ಯಂಚಿತ್ ತಾಳಸಂಬದ್ಧ೦ ದೇವತಾ ವಿಷಯಾತ್ಮಕಂ |
ವಿಚಿತ್ರವಾದನೈರ್ಯುಕ್ತಂ ಶಬ್ದಾರ್ಥೈರುಷಶೋಭಿತಂ |
ದೇಶೀಯ ಭಾಷಾ ಸಹಿತಂ ಕಿತ್ಕಾಂತಂ ಕೌತಮುಚ್ಯತೇ || (ಭ. ಚಂ.)
ಹೀಗೆ ಸ್ತುತಿಸತಕ್ಕ ದೇವತೆಗಳಲ್ಲಿ ಷಣ್ಮುಖನಿಗೆ ವಿಶೇಷ ಮಹತ್ವವಿರುವುದನ್ನು ನಾಟ್ಯಶಾಸ್ತ್ರದ ಈ ಶ್ಲೋಕಗಳಿಂದ ತಿಳಿಯಬಹುದು.
ನಮನೃತ್ಯ ಮಹಾದೇವಂ ವಿಷ್ಣುಮಿಂದ್ರಂ ಗುಹಂ ತಥಾ |
ಆದೌ ನಿವೇಶೋ ಭಗವಾನ್ ಸ್ಕಂದಃ ಸೂರ್ಯಾನ್ ಶಶೀ ||
ದೇವಸೇನಾಪತೇ ಸ್ಕಂದ ಭಗವನ್ ಶಂಕರಪ್ರಿಯ || (ಭ. ನಾ. ಅ. ೨)
ನಮ್ಮ ಯಕ್ಷಗಾನದಲ್ಲಿಯೂ ಷಣ್ಮುಖನು ಪ್ರಧಾನ ದೇವತೆಯಾಗಿದ್ದಾನೆ. 'ಕುಂಡಲಮಣಿಭೂಷಣ ಹೇ ಸುಬ್ಬರಾಯ...' ಎಂಬ ಸ್ತುತಿಪದ್ಯವನ್ನು ಕೇಳದವರಿಲ್ಲ.