ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ಶಾಸ್ತ್ರೀಯತೆ / ೮೧

ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ ನಾಟ್ಯಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ 'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ 'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ.

ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬತೆಂಬುದು ಸಹ ವಿಚಾರಾರ್ಹವಾದ ಪ್ರಶ್ನೆಯೇ, ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ. ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ, ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre)ಯೊಳಗೆ ಆಡುವ ಪ್ರಯೋಗವಿದ್ದಿತ್ತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದುಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ ನಾಟ್ಯಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಅಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ. (ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ, ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.)

ಏತೇ ಪ್ರಯೋಕ್ತೃಭಿರ್ಜ್ಞೇಯಾ ಮಾರ್ಗಾಹ್ಯಭಿನಯೇ ಸ್ಮೃತಾಃ |
ಯದೀದೃಶಂ ಭವೇನ್ನಾಟ್ಯಂ ಜ್ಞೇಯಮಾಧ್ಯಂತರಂ ತು ತತ್ ||
ಲಕ್ಷಣಾಭ್ಯಂತರತ್ವಾದ್ಧಿ ತದಾಭ್ಯಂತರಮಿಷ್ಯತೇ |
ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಬಾಹ್ಯಮಿತಿ ಸಂಜ್ಞಿತಂ ||
ಅನೇನ ಲಕ್ಷ್ಯತೇ ಯಸ್ಮಾತ್‌ ಪ್ರಯೋಗಃ ಕರ್ಮ ಚೈವ ಹಿ|
ತಸ್ಮಾಲ್ಲಕ್ಷಣಮೇತದ್ದಿ ನಾಟ್ಯೇ ಸಮ್ಯಙ್ನೆಯೋಜಿತಂ ||
ಅನಾಚಾರ್ಯೋದಿತಾ ಯೇ ಚ ಯೇ ಚ ಶಾಸ್ತ್ರ ಬಹಿಃಸೃತಾಃ |
ಬಾಹ್ಯಂ ತೇ ತು ಪ್ರಯೋಕ್ಷಂತೇ ಕ್ರಿಯಾ ಕಲ್ಪೈಃ (ಮಾತ್ರೈಃ) ಪ್ರಯೋಜಿತಾಃ ||

ತಾತ್ಪರ್ಯವೇನೆಂದರೆ- ಶಾಸ್ತ್ರ ನಿರ್ದಿಷ್ಟವಾದ ಲಕ್ಷಣಕ್ಕೆ ಸಂಪೂರ್ಣ ಒಳಪಟ್ಟ ನಾಟ್ಯ ಪ್ರಯೋಗವು 'ಆಭ್ಯಂತರ'ವೆಂದೂ, ನಾಟ್ಯಾಚಾರನ ನಿರ್ದೇಶವಿಲ್ಲದೆ ಆಡಲ್ಪಡುವಂಥವು ಮತ್ತು ಶಾಸ್ತ್ರದಲ್ಲಿ ಹೇಳುವ ಲಕ್ಷಣಕ್ಕಿಂತ ಹೊರಗೆ ಕಾಲಿಟ್ಟ ಪ್ರಯೋಗಗಳು 'ಬಾಹ್ಯ ಪ್ರಯೋಗ'ಗಳೆಂದೂ ಕರೆಯಲ್ಪಡುತ್ತವೆ; ಇಲ್ಲಿ, ಎಂದರೆ 'ಸಾಮಾನ್ಯಾಭಿನಯ'ವೆಂಬ ಈ ಅಧ್ಯಾಯದಲ್ಲಿ (ಹಿಂದಿನ ಅಧ್ಯಾಯಗಳಲ್ಲಿ ವಿಸ್ತಾರವಾಗಿ ನಿರೂಪಿಸಿದ್ದನ್ನು