ವಿಜಯನಗರದ ರಾಜವು ಈಗ ೬೦೦ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟದ್ದು. ಅದು ೩೦೦ ವರ್ಷಬಾಳಿ ನಾಶವಾದಬಳಿಕ, ಸರಾಸರಿ ನೂರು ವರ್ಷಗಳಮೇಲೆ ಮರಾಠರ ರಾಜವನ್ನು ಶಿವಾಜಿ ಮಹಾರಾಜನು ದಕ್ಷಿಣದಲ್ಲಿ ಸ್ಥಾಪಿಸಿದನು. ಆತನೂ, ಆತನ ಮಕ್ಕಳೂ ಸ್ವತಂತ್ರದಿಂದ ೩೫ ವರ್ಷ ರಾಜ್ಯವಾಳಿದರು. ಬಳಿಕ, ಆತನ ಮೊಮ್ಮಗ ನಾದ ಶಾಹೂರಾಜನು ರಾಜ್ಯಸೂತ್ರಗಳನ್ನೆಲ್ಲ ಪೇಶ್ವೇಯವರಿಗೆ ಒಪ್ಪಿಸಿ, "ನೀವು ಛತ್ರಪತಿಯ ರಾಜ್ಯವನ್ನು ವಿಸ್ತರಿಸಬೇಕೆಂದು ಹೇಳಿ ತಾನು ಸಾತಾರೆಯಲ್ಲಿ ಸ್ವಸ್ಥವಾಗಿ ಇರಹತ್ತಿದನು. ಪೇಶ್ವೇಯವರು ಬ್ರಾಹ್ಮಣರು; ಆದರೂ ಅವರು ಕ್ಷಾತ್ರಧರ್ಮವನ್ನು ಸ್ವೀಕರಿಸಿ ಧೋ ರಂಧರ್ಯದಿಂದ ರಾಜ್ಯವಾಳಿ ಇಡಿಯ ಹಿಂದುಸ್ತಾನದಮೇಲೆ ತನ್ನ ವರ್ಚಸ್ಸನ್ನು ಸ್ಥಾಪಿಸಿದರು . ಪ್ರತ್ಯಕ್ಷ ದಿಲ್ಲಿ ಬಾದಶಹನ ರಾಯಭಾರದಲ್ಲಿಯೂ ವರದಲ್ಲಿಯೂ ಅವರ ಕೈಸೇ ರಿತು. ಮೊದಲನೇಬಾಜಿರಾವ, ನಾನಾಸಾಹೇಬ, ದೊಡ ಮಾಧವರಾಯ ಎಂಬವರು ಪೇಶ್ವೇಯವರಲ್ಲಿ ಮಹಾವರಾಕ್ರಮಿಗಳೂ, ರಾಜಕಾರ್ಯಧುರಂಧರೂ ಆದರು, ಇವರ ಅಬ್ಬರಕ್ಕೆ ಹೈದರಾಬಾದದ ನಿಜಾಮನು ತತ್ತರಿಸಿದನು: ಹೈದರಲ್ಲಿಯು ಬೆದರಿದನು; ಮೈಸಖ ವ್ಯಾಘ್ರನೆನಿಸುವ ಟೀಪುವು ಮೆತ್ತಗಾದನು; ದಿಲ್ಲಿಯ ಬಾದಶಹನು ದಿಗಿಲು ಬಿದ್ದನು; ನಮ್ಮ ಇಂಗ್ಲಿಷರು ಆಶ್ಚರ್ಯದಿಂದ ತಲೆದೂಗಿದರು! ಇಂಥ ಪೇಶ್ವೇಯವರೊಳಗಿನ ೩ನೆ ಪೇಶ್ವೇಯಾದ ನಾನಾಸಾಹೇಬ ಕಾಲದಲ್ಲಿ ನಮ್ಮ ಈ ಕಾದಂಬರಿಯ ಪ್ರಸಂಗವು ಒದಗಿತು.
ನಾನಾಸಾಹೇಬನ ಕಾಲವು ಪೇಶ್ವೇಯವರ ಅತ್ಯತ್ಕವರ್ಷದ ಕಾಲವೆಂದು ಹೇಳ ಬಹುದು. ಮೊಗಲರು ವಿಷಯಾಧೀನರಾಗಿ ದುರ್ಬಲರಾಗಲು, ಅವರ ರಾಜ್ಯವನ್ನು ತುಂಡರಿಸುವದಕ್ಕಾಗಿ ಇಂಗ್ರಜರು, ಸೀಕರು, ರೋಹಿಲರು, ರಜಪೂತರು, ಚಾಟರು,ಮಹಾರಾಷ್ಟ್ರರು, ಇರಾಣಿಜನರು, ದುರಾಣಿಜನರು, ಗಿಲಚಿಜನರು ಮುಂದುವರಿದರು. ಇವರೆಲ್ಲರಲ್ಲಿ ಮಾರಾಟರು ಒಳ್ಳೆ ಗಟ್ಟಿಗರಾದದ್ದರಿಂದ, ಅವರು ಎಲ್ಲರಿಗಿಂತ ನಾಲ್ಕು ಹೆಜ್ಜೆ ಮುಂದಕ್ಕೆ ಹೋದರೆಂದು ಹೇಳಬಹುದು. ಬರಬರುತ್ತ ಅವರ ತೇಜಸ್ವಿತೆಯು ಮಿನುಗಹತ್ತಿತು. ದರ್ಪವು ಹೆಚ್ಚಿತು; ಆದ್ದರಿಂದ ಇವರೇ ಹಿಂದೂಸ್ಥಾನದ ಸಾರ್ವಭೌಮರಾಜರಾಗಬಹುದೆಂದು ಜನರು ತರ್ಕಿಸಹತ್ತಿದರು. ಅವರ ಸರದಾರ ಮಂಡಲವು ಬಹು ದೊಡ್ಡದಿದ್ದರಿಂದ ರಿಂದ ದೇಶದತುಂಬ ಹಬ್ಬಿತ್ತು. ಅವರ ಮುಖ್ಯಸ್ಥರುನು ಪೇಶ್ವೇಯು . ಪ್ರತಿವರ್ಷ ಮಳೆಗಾಲ ಹೋದಕಡಲೆ ತಮ್ಮ ತಮ್ಮ ಸರಂಜಾಮಗಳೊಡನೆ ಮಹಾರಾಷ್ಟ್ರ ಸರದಾರರು, ಪೇಶ್ವೇ ಸರಕಾರದ ಅಪ್ಪಣೆಯಾದ ಸ್ಥಳದಲ್ಲಿ ಒಟ್ಟುಗೂಡುತ್ತಿದರು. ಅಲ್ಲಿ ಅವರೆಲ್ಲರ ಬೆಟ್ಟದಾದನಂತರ ಪೇಶ್ವೇ ಯವರ ಜರಿಪಟ ನಾನಿಶಾನೆಯೂ, ಢಾಲೂ ಹೊರ ಳಿದ ದಿಕ್ಕಿಗೆ ಅವರು ದಂಡೆತ್ತಿ ಹೋಗುತ್ತಿದ್ದರು, ವಿಜಯಾದಶಮಿಯು ಅವರು ದಂಡೆತ್ತಿ ಹೋಗುವ ಸುಮುಹೂರ್ತವಾಗಿತ್ತು. ಹೀಗೆ ದಂಡೆತ್ತಿ ಹೋದಳಿ, " ಇಂದು ಈ ಪ್ರಾಂತವನ್ನು ಕೈ ಸೇರಿಸಿಕೊಂಡರು, ನಾಳೆ ಆ ಪ್ರಾಂತವನ್ನು ಕೈ ಸೇರಿಕೊಂಡರು, ನಾಡದು ನಿಜಾಮನನ್ನು ಹಣ್ಣಿಗೆ ತಂದರು, ಆಚೇನಾದದು ದಿಲ್ಲಿಯ ಕಡೆಗೆ ದುಮು