ಕುರುಕ್ಷೇತ್ರ!
ಈಮೇರೆಗೆ ಇಬ್ರಾಹಿಮಖಾನನು` ಆಡಿದ ಕಠೋರ ಭಾಷಣವನ್ನು ಕೇಳಿ ಹೊಳಕರನು ಸಂತಪ್ತನಾದನು.ಆತನು ಸರಕ್ಕನೆ ಒರೆಯಿಂದ ಖಡ್ಗವನ್ನು ಹಿರಿದು ಎದ್ದು ನಿಂತು ಗಾರದಿ ಸರದಾರನನ್ನು ಕೆಕ್ಕರಿಸಿ ನೋಡಹತ್ತಿದನು. ಆತನ ಮೂಗಿನ ಹೊರಳಿಗಳು ಅರಳಿ ಭರದಿಂದ ಉಸರು ಹಾಯುವಾಗ ಮುಸು ಮುಸು ಸಪ್ಪಳವಾಗುತ್ತಿತ್ತು. ಅತ್ತ ಗಾರದಿ ಸರದಾರನೂ ಸಂತಾಪಗೊಂಡು ತನ್ನ ತುಂಬಿದ ಪಿಸ್ತೂಲನ್ನು ಮುಂದಕ್ಕೆ ಚಾಚಿ ಹಿಡಿದನು. ಈ ಅನರ್ಥವನ್ನು ನೋಡಿ ವಿಶ್ವಾಸರಾಯನು ತಟ್ಟನೆ ಗಾದಿಯಿಂದ ಎದ್ದು ಹೋಗಿ ಇಬ್ರಾಹಿಮುಖಾನನ ಕೈಯೊಳಗಿನ.ಪಿಸ್ತೂಲನ್ನು ಕಸಕೊಂಡನು. ಅತ್ತ ಯಶವಂತರಾವ ಪವಾರನು ಹೋಳಕರನ ಮುಂಗೈ ಹಿಡಿದು--"ಸುಬೇದಾರ, ಇದೇನು ಅನರ್ಥವು? ನೀವು ಎಲ್ಲಿ ಇರುವಿರೆಂಬದನ್ನು ಮನಸ್ಸಿನಲ್ಲಿ ತಂದುಕೊಳ್ಳಿರಿ” ಅನ್ನಲು, ಸದಾಶಿವರಾವ ಭಾವುವು ಅಸಮಾಧಾನಪಟ್ಟು ತನ್ನ ಯೋಗ್ಯತೆಗೆ ತಕ್ಕಂತೆ ಮಾತಾಡಿ, ತನ್ನ ಇಬ್ಬರು ಪ್ರಮುಖ ಸರದಾರರನ್ನು ಸಮಾಧಾನಗೊಳಿಸಿದನ. ಭಾವುವು ಸಂತಪ್ತ ಸ್ವಭಾವದವನೂ, ಹಟಮಾರಿಯೂ ಇದ್ದನು. ತನ್ನ ಮನಸ್ಸಿನಂತೆ ಕೆಲಸವಾದಾಗ ಆತನು ಆನಂದಪಡುವನು, ಆಗದಾಗ ವ್ಯಸನಪಡುವನು; ಅದರಂತೆ ಅಪಯಶಸ್ಸು ಪ್ರಾಪ್ತವಾದಾಗ ನಿರಾಶೆಪಡುವನು. ಹೀಗೆ ಫಲಕ್ಕನುಸರಿಸಿ ಆತನ ವೃತ್ತಿಯಲ್ಲಿ ಚಾಂಚಲ್ಯವು ತೋರಿದರೂ, ಆತನ ಪ್ರಾರಬ್ದಯೋಗವು ಚಮತ್ಕಾರವಾದದ್ದಿತ್ತೆಂದು ಹೇಳಬಹುದು; ಯಾಕಂದರೆ ಆತನ ಅಪ್ಪಣೆಯನ್ನು ಯಾರಾ ಮೀರುತ್ತಿದ್ದಿಲ್ಲ! ಈ ಪ್ರಸಂಗದಲ್ಲಿ ಆತನು ಗಾಂಭೀರ್ಯದಿಂದ ತನ್ನ ಆ ಇಬ್ಬರು ಪ್ರಮುಖ ಸರದಾರರನ್ನು ಕುರಿತು-"ಕಾಕಾಸಾಹೇಬ, ನೀವುಹಿರಿಯರು, ನಮ್ಮಂಥ ತರುಣರಿಗೆ ಬುದ್ದಿ ಹೇಳತಕ್ಕವರು; ಹೀಗಿದ್ದು ಕೂಡಿದ ದರ್ಬಾರ ದಲ್ಲಿ ಕಲಹಪ್ರಸಂಗವೆ? ಖಾನಸಾಹೇಬ, ದುರಾಣಿಯೊಡನೆ ಕಾದುವದು ಒತ್ತಟ್ಟಿಗುಳಿದು, ನಮ್ಮನಮ್ಮೊಳಗೇ ಕಾದಾಟಕ್ಕಾರಂಭವಾಯಿತಲ್ಲ! ನೀವು ಎಲ್ಲಿ ಕುಳಿತಿರುವಿರಿ, ಯಾವ ಕೆಲಸಕ್ಕೆ ಬಂದಿರುವಿರಿ ಎಂಬುದನ್ನು ಮರೆತಂತೆ ತೋರುತ್ತದೆ. ಕಾಲಕ್ಕನುಸರಿಸಿ ಆದದ್ದು ಆಗಿಹೋಯಿತು. ಯಾರಿಂದ ತಪ್ಪಾಗಿದ್ದರೂ ಅದನ್ನು ಪುನಃ ಉಚ್ಚರಿಸುವವರಲ್ಲಿ ಪ್ರಯೋಜನವಿಲ್ಲ , ನೀವಿಬ್ಬರೂ ತಿಳಿದವರಿರುವಿರಿ, ಯಾವ ಪ್ರಸಂಗದಲ್ಲಿ ಹ್ಯಾಗೆ ನಡೆಯಬೇಕೆಂಬದರ ವಿಚಾರವು ನಿಮಗಿರುತ್ತದೆ. ಈಗ ನಮಗೆ ಜಯಪ್ರಾಪ್ತಿಯಾಗ ಬೇಕೆಂಬ ಇಚ್ಚೆಯಿದ್ದರೆ, ನೀವೆಲ್ಲರೂ ಒಮ್ಮನಸ್ಸಿನಿಂದ ನಡೆದುಕೊಳ್ಳಿರಿ. ಅಂತಃಕಲಹ ಗಳನ್ನು ಮರೆಯಿರಿ, ಸ್ವರಾಜ್ಯದ ಹಿತಕ್ಕಾಗಿ ಒಕ್ಕಟ್ಟಿನಿಂದ ಮನಃಪೂರ್ವಕವಾಗಿ ಯತ್ನಿಸಬೇಕೆಂದು ನಿಮ್ಮನ್ನು ನಾನು ಆಜ್ಞಾಪಿಸುವೆನು. ನನ್ನ ಅಪ್ಪಣೆಯನ್ನು ನಡಿಸು ವಿರೆಂದು ಪೂರ್ಣವಾಗಿ ನಂಬಿದ್ದೇನೆ.
ಭಾವುಸಾಹೇಬನ ಈ ಮಾತುಗಳನ್ನು ಕೇಳಿ ಮಲ್ಹಾರರಾಯನು ತನ್ನ ಸ್ಥಳದಲ್ಲಿ ಕುಳಿತುಕೊಂಡನು; ಗಾರದಿಯೂ ತನ್ನ ಸ್ಥಳದಲ್ಲಿ ಕುಳಿತುಕೊಂಡನು. ಆಗ ಬಳವಂತರಾವಮೇಹೇಂದಳೆಯು-"ಹೀಗೆ ನೀವು ಪರಸ್ಪರ ಕಲಹಬೆಳಿಸುವದು ಕಾರ್ಯದ ಲಕ್ಷಣವಲ್ಲ. ಶೂರರಾದವರು ವೈರಿಗಳೊಡನೆ ಕಾದುವಾಗ ಶೌರ್ಯವನ್ನು ತೋರಿಸ