ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳ ಕುರುಕ್ಷೇತ್ರ ! ಛಾವಣಿಯ ಮುಖ್ಯದ್ವಾರದಿಂದ ಒಳಗೆ ಪ್ರವೇಶಿಸಿ, ಗುರಾಣಿಯು ಏಳುವದರೊಳಗೆ ಅವನ ಡೇರೆಯನ್ನು ಮುತ್ತುವೆನು, ಇಂದಿನ ಸಂಗ್ರಾಮದಲ್ಲಿ ದುರಾಣಿಯನ್ನು ಸೆರೆ ಹಿಡಿಯುವೆನು; ಒಂದುಪಕ್ಷದಲ್ಲಿ ಅದು ಸಾಧಿಸದ್ದರೆ ಅವನ ದಂಡನ್ನು ತುಂಡರಿಸುವೆನು. ನಮ್ಮ ಛಾಲೆಯ ರಾವುತರು ದುರಾಣಿಯ ಛಾವಣಿಯಮೇಲೆ ಬಹು ಎಚ್ಚರದಿಂದ ಏು ಹೋಗಬೇಕು~ಸದ್ದಿಲ್ಲದೆ ಏರಿಹೋಗಬೇಕು; ಯಾವಬಗೆಯ ವಾದ್ಯಗಳನ್ನೂ ಬಾಂಸ ಬಾರದು; ಯಾವಬಗೆಯ ಸಪ್ಪಳವನ್ನೂ ಮಾಡಲಾಗದು. ನಾನು ಸೂಚಿಸಿದಕೂಡಲೆ ಸುಮ್ಮನೆ ನನ್ನ ಬೆನ್ನಹತ್ತಿಬರಬೇಕು. ನಾಳೆ ಮಾಳಸಾಕಾಂತನ ಕೃಪೆಯಿಂದ ದುರಾ ಣಿಯನ್ನು ಬೆರಳಿನಮೇಲೆ ಹಾಗೆ ಕುಣಿಸುವೆನೆಂಬದನ್ನು ನೋಡಬೇಕು. ಭಾವುಸಾ ಹೇಬ, ನಮ್ಮ ಬರ್ಚಿಗಳಿಗೆ ನಾಳೆ ಮನದಣಿಯಾಗಿ ಪಠಾಣರ ರಕ್ತವನ್ನು ಕುಡಿಸುವೆನು! ೭ ನೆಯ ಪ್ರಕರಣ-ಕುರುಬನ ಕರಾಮತಿ ! ಶಿ ~-- ಹೀಗೆ ಜೋಳಕರನು ನುಡಿಯಲು, ಭಾವುಸಾಹೇಬನು ಅದಕ್ಕೆ ಒಪ್ಪಿಕೊಂಡು, ದರ್ಬಾರದ ಕಾರ್ಯವನ್ನು ಮುಗಿಸಿದನು. ಬಳಿಕ ಆ ಕಕ್ಕ-ಮಕ್ಕಳು ಎದ್ದು ದಿವಾಣ ಖಾನೆಯಾಳಗೆ ಹೋದರು, ಭಾವುಸಾಹೇಬನು ಯುದ ಕಲೆಯನ್ನು ಚನ್ನಾಗಿ ಬಲ್ಲವನಾಗಿ ಧನು. ಉದಗಿರಿ ಮಾದಲಾದ ಹಲವು ಯುದ್ಧಗಳಲ್ಲಿ ಜಯಹೊಂದಿ ಆತನು ಕೀರ್ತಿಯ ಪಡೆದಿದ್ದನು. ಆತನಿಗೆ ಈಗಿನ ತನ್ನ ದುರವಸ್ಥೆ ಯ ಸಂಪೂರ್ಣ ಜ್ಞಾನವಿದ್ದದ್ದರಿಂದ, ತನಗೆ ಜಯವಾಗುವ ಲಕ್ಷಣವಿಲ್ಲೆಂದು ಆತನು ತಿಳಿದುಕೊಂಡಿದ್ದನು; ಆದ್ದರಿಂದ ಹೋಳಕ ರನ ಪ್ರಯತ್ನಕ್ಕೆ ಯಶಸ್ಸು ದೊರೆಯುವ ನಂಬಿಗೆಯು ಆತನಿಗಿದಿಲ್ಲ. ಆತನು ಅಂತ ರಂಗದಲ್ಲಿ ತೀರ ಉದಾಸೀನನಾಗಿದ್ದನು. ಈ ಸ್ಥಿತಿಯಲ್ಲಿ ವಿಶ್ವಾಸರಾಯನನ್ನು ನೋಡಿ ಆತನಿಗೆ ಬಹಳ ವ್ಯಸನವಾಯಿತು. ಅತ್ತಿಗೆಯಾದ ಗೋಪಿಕಾಬಾಯಿಯು, ಇಷ್ಟು ದೂರ ಮಗನನ್ನು ಕಳುಹಿಸಲಿಕ್ಕೆ ಅಂದೇಶಪಡುತ್ತಿರುವಾಗ, ನಾನೇ ಒತ್ತಾಯದಿಂದ ಕರೆತಂದು ಈತನನ್ನು ಗಂಡಾಂತರಕ್ಕೆ ಗುರಿಮಾಡಿದಹಾಗಾಯಿತೆಂದು ಆತನು ಮಿಡುಕಿದನು, ಭಾವು ಸಾಹೇಬನ ಹೊಟ್ಟೆಯಲ್ಲಿ ಮಕ್ಕಳಿದ್ದಿಲ್ಲ. ತನ್ನ ಅಣ್ಣನನಗನಾದ ವಿಶ್ವಾಸರಾಯನ ಮೇಲೆ ಆತನ ಪ್ರೇಮವು ಹೆಚ್ಚು; ಆದ್ದರಿಂದ ಆ ಮನಧನನಾದ ಭಾವುವು ವಿಶ್ವಾಸರ) ಯನನ್ನು ಕುರಿತು ಬಾಳಾ, ವಿಶ್ವಾಸರಾಯಾ, ಈ ದಂಡಯಾತ್ರೆಯ ಪರಿಣಾಮವು ನನಗೆ ನೆಟ್ಟಗೆ ಕಾಣುಣವದಿಲ್ಲ. ನನ್ನ ತಪ್ಪೇ ಇರಲಿ-ನಮ್ಮ ಜನರತಇರಲಿ, ಅಥವಾ ನಮ್ಮ ಪ್ರಾರಬ್ಧಕರ್ಮವು ಎಲ್ಲರ ಬುದ್ದಿಗೆ ಭ್ರಂಶವನ್ನುಂಟುಮಾಡಿರಲಿ; ನಮ್ಮ ಪಕ್ಷಕ್ಕೆ ಬಯಉಂಟಾಗುವದಿಲ್ಲೆಂಬದು ನಿಶ್ಚಯವು! ನಮ್ಮ ಪಕ್ಷವು ರಸಾತಳಕ್ಕೆ ಹೋಗಬೇಕೆಂದು ಈಶ್ವರೀಸಂಕೇತವಿದ್ದಂತೆ ತೋರುತ್ತದೆ. ಹೊರಗಿನಿಂದ ನನಗೆ ದೊಡ್ಡ ಸಹಾಯವು ಒದ