ಕುರುಬನ ಕರಾಮತಿ . ದಲ್ಲಿ ತೊಡಗಿದ್ದರಿಂದ ಅವನ ಗಸಿಯು ಬಂದುಬಿದ್ದು, ಹೋಳಕರನು ಶಾನ ಛಾವಣಿ ಯಮೆಲೆ ಸಪ್ಪಳಿಲ್ಲದೆ ನಿರ್ಬಾಧವಾಗಿ ಸಾಗಿಹೋಗಲಿಕ್ಕೆ ಅನುಕೂಲವಾಯಿತು. ಆತಾ ಯಿಖಾನನು ಯುದ್ಧದಲ್ಲಿ ತೊಡಗಿದ ಸುದ್ದಿಯನ್ನು, ಆ ಬಾನನ ಜನರು ಶಹನಿಗೆ ತಿಳ ಸಿದರು; ಆದರೆ ಶಹಾನು ಅದಕ್ಕೆ ಅಷ್ಟು ಮಹತ್ವ ಕೊಡಲಿಲ್ಲ. ಈಮೊದಲೆಅತಾಯಿಖಾನನು ಅಕಸ್ಮಾತ್ತಾಗಿ ಗೋವಿಂದಪಂತಬುಂದಲೆಯನ್ನು ಕೊಂದ ಸಿಟ್ಟಿನಿಂದ ಮರಾಟರು ಅವನ ಸೇಡು ತೀರಿಸಿಕೊಳ್ಳಲಿಕ್ಕೆ ಬಂದಿರಬಹುದೆಂದು ಆತನು ತಿಳಿದು, ಖಾನನ ಸಹಾಯಕ್ಕೆ ತನ್ನ ವಾಸಸೈನ್ಯವನ್ನೂ, ಸುಜಾಲದೌಲನ ಮೊಗಲರಾವುತರನ್ನೂ ಕಳಿಸಿ, ತನ್ನ ಬಳಿಯಲ್ಲಿ ಅಫಗಾಣಕಾಲಾಳನ್ನೂ, ಹಾಫೀಜರಹಮಂತಖಾನನ ರೊಹಿಲೆಜನರನ್ನೂ ಇಟ್ಟುಕೊಂಡನು. ಇದಕ್ಕಾ ಹೆಚ್ಚಿನ ವ್ಯವಸ್ಬಿಯನ್ನೇನು ಮಾಡುವ ಕಾರಣವಿಲ್ಲೆಂದು ಶಹಾನು ತಿಳಿದು ಸ್ವಸ್ಥವಾಗಿದ್ದನು. ಆತನ ಈ ತಪ್ಪು ತಿಳುವಳಿಕೆಯ ಲಾಭವು ಮಲ್ಲಾ ರರಾಯನಿಗಾಯಿತು. ಆ ರಣವೀರನು ನಿರ್ವಾಧವಾಗಿ ಮುಂದಕ್ಕೆ ಸಾಗಿ ದನು, ಉತ್ತರಹಿಂದುಸ್ಥಾನದಲ್ಲಿ ಚಳಿಗಾಲದೊಳಗೆ ಮಂಜು ಬಹು ದಟ್ಟವಾಗಿ ಬೀಳುತ್ತದೆ. ಅದರಂತೆ ಈಗ ಮಂಜು ಬಿದ್ದದರಿಂದ, ದಾಣಿಗಳಿಗೆ ಜೋಳಕರನ ಜನರು ಬರುವದು ಕಾಣಲಿಲ್ಲ. ಶಹಾನು ಜಾತ್ಯಾ ಒಳ್ಳೇ ಜಾಣನು, ಧೂರ್ತನು; ಆದರೆ ಯುದ್ಧ ಮಾಡಿ ನರೆ ಹಾಯ್ದಿದ್ದ ಮಲ್ಲಾರರಾಯನು ಯುಕ್ತಿಯಿಂದ ಆತನನ್ನು ಚನ್ನಾಗಿ ಮೋಸಗೊಳಿಸಿ ದನು. ಒಂದು ದಿನ್ನೆಯಮೇಲೆ ಶಹಾನ ಕೆಂಪು ಡೇರೆಯನ್ನು ಹೊಡೆದಿದ್ದರು. ಅದರ ಸುತ್ತು ತುಬಾಕಿಯವರ ಜಾಗರೂಕವಾದ ಕಾವಲು ಇತ್ತು. ಮಲ್ಲಾರರಾಯನ ಜನರು ತೀರಹತ್ತರ ಹೊಗಲು, ಆ ಕಾವಲುಗಾರರಿಗೆ ಅವರ ಸುಳವು ಹತ್ತಿ, ಕಡಲೆ ಅವರು ತುಬಾಕಿಗಳನ್ನು ಹಾರಿಸಿದರು. ಅದಕ್ಕೆ ಮರಾಟರಿಂದಲೂ ಪ್ರತ್ಯುತ್ತರವು ದೊರೆಯಿತು. ಮರಾಟರು “ಹರ ಹರ ಮಹಾದೇವ” ಎಂದು ಗರ್ಜಿಸುತ್ತ ಕೈಗೆ ಸಿಕ್ಕವರನ್ನು ತುಂಡರಿಸುತ್ತ ಮುಂದಕ್ಕೆ ಸಾಗಿದರು. ಅವರ ಸೈನ್ಯದೊಂದು ಗುಂಪು ಶಹಾನ ಛಾವಣಿಯ ದ್ವಾರದೊಳಗಿಂದ ಸಾಗಿಹೊಗಿ ಡೇರೆಯ ಮುಂದಿನ ಓಣಿಯನ್ನು ಸೇರಿತು. ಮತ್ತೊಂದು ಗುಂಪು ಬೇರೊಂದು ನಿಟ್ಟಿನಿಂದ ಡೇರೆಯಿದ್ದ ದಿನ್ನೆಯನ್ನು ಏರಿ ಹೋಗಹತ್ತಿತು. ಹೀಗೆ ಸೂರ್ಯೋದಯವಾಗುತ್ತಿರಲು, ಮಲ್ಲಾರರಾಯನು ತನ್ನ ಪ್ರತಿಜ್ಞೆಯಂತೆ ದುರಾಣಿಯ ಶಹನ ಡೇರೆಗೆ ಮುತ್ತಿಗೆ ಹಾಕಿದನು. ಈ ಪ್ರಸಂಗ ದಲ್ಲಿ ದುರಾಣಿ ಅಹಮ್ಮದಶಹನು ತನ್ನ ಡೇರೆಯಲ್ಲಿ ಇದ್ದರೆ, ಹೋಳಕರನ ಪ್ರತಿಜ್ಞೆಯು ಪೂರ್ಣವಾಗಿ, ಶಹಾನು ಹೋಳಕರನ ಸೆರೆಯಾಳಾಗಬಹುದಾಗಿತ್ತು; ಆದರೆ ಗುರಿಯ ಸ್ವಲ್ಪದರಲ್ಲಿ ತಪ್ಪಿದಂತಾಯಿತು! ಅಂದು ಶಹಾನು ಸುದೈವದಿಂದ ಬೇರೆ ಡೇರೆಯಲ್ಲಿ ಮಲಗಿಕೊಂಡದ್ದರಿಂದ ಪಾರಾದನು. ದೇವರು ಕಾಯುವಾಗ ಯಾರು ಏನು ಮಾಡು ವರು? ಹೀಗೆ ಹೋಳಕರನು ಡೇರೆಯನ್ನು ಮುತ್ತಿದಾಗ, ಅತ್ತ ಸಮಶೇರಬತಾ ದರ, ವಿಚಾರಕರ ಇವರು ದುರಾಣಿಯ ಛಾವಣಿಯೊಳಗಿನ ಜನರನ್ನು ತುಂಡರಿಸ
ಪುಟ:ಕುರುಕ್ಷೇತ್ರ ಗ್ರಂಥ.djvu/೫೪
ಗೋಚರ