ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುರುಕ್ಷೇತ್ರ ಮಾಡಿದರೆ ತಮ್ಮ ಪರಿಣಾಮವಾದೀತಂಬದನ್ನು ತಿಳಿದುಕೊಳ್ಳುವದಕ್ಕಾಗಿಯೂ ಆತನು ಈಗ ಮಹದಾಜಿಯನ್ನು ಕರೆಸಿದನು, ಆದ್ದರಿಂದ ಮಹದಾಜಿಯ ಮುಂದ ಮೊದಲು ಯಾವ ಮಾತು ತೆಗೆಯಬೇಕೆಂಬದ ಕುರಿತು ಆತನು ಆಲೋಚಿಸ ಹತ್ತಿದನು. ಕೆಲಹೊತ್ತಿನಮೇಲೆ ಆ ತರುಣಪೇಶ್ವ ಯು ಸಿಂದೆಯನ್ನು ಕುರಿತು ಭಾವುಸಾಹೇಬ-ಮಹದಾಜೀ, ನಿಮ್ಮ ಮನಸ್ಸಿನ ವಿಚಾರಗಳನ್ನು ನನ್ನ ಮುಂದೆ ಈಗ ಸ್ಪಷ್ಟವಾಗಿ ಹೇಳಿರಿ, ಸ್ವಲ್ಪವೂ ಬಚ್ಚಿಡಬೇಡಿರಿ, ಬಚ್ಚಿಟ್ಟರೆ ನನ್ನ ಕೊರಳ ಆಣೆಯಿರುವದು! ನನಗೆ ಮುಖಸ್ತುತಿಯು ಬೇಡ, ಮುಖಸ್ತುತಿಗೆ ಇದು ತಕ್ಕ ಸಮಯವೂ ಅಲ್ಲ. ಪಾಟೀಲಬಾವಾ, ನನ್ನ ಬುದ್ಧಿಗೆ ಏನೂ ತೋ ಭದಾಗಿದೆ. ಯೋಗ್ಯವಾದ ಆಲೋಚನೆ ಹೇಳುವ ಮನುಷ್ಯರು ನನಗೆ ಬೇಕಾ ಗಿದ್ದಾರೆ ವಿಶ್ಯಾಸರಾಯರು ಹುಡುಗರು, ಹುಡುಗತನದ ವಿಚಾರವು ಈಗ ಕೆಲಸ ದಲ್ಲ, ಸಮಶೇರಬಹದ್ಧರರು ಸಮಶೇರರದ ಕೆಲಸ ಮಾಡತಕ್ಕವರಲ್ಲದೆ, ರಾಜ ಕಾರಣದಲ್ಲಿ ಅವರ ಬುದ್ದಿಯು ಹರಿಯುವದಿಲ್ಲ. ಇಬ್ರಾಹಿಮಖಾನಗಾರದಿಯವ ರು ಯಾವಾಗಲೂ ತಮ್ಮ ಮದ್ದು-ಗುಂಡುಗಳ ವಿಚಾರದಲ್ಲಿಯೇ ಮಗ್ನರಾಗಿರು ವರು, ಅವರ ಆಲೋಚನೆಯೂ ಕೆಲಸಕ್ಕೆ ಬಾರದು ! ಬಳವಂತರಾವಮೇಹೇಂ ದಳೆಯವರು ಮಾತ್ರ ಅನುಭವಿಕ ಮುತ್ಸದ್ಧಿಗಳೂ, ಯುದ್ಧದಲ್ಲಿ ಒಳಿತಾಗಿ ನು ದುಪಡಿ ಹೊಂದಿದ ವೀರರೂ ಇದ್ದರು;ಆದರೆ ದುರ್ದೈವದಿಂದ ನಿನ್ನಿನ ಯುದ್ಧದಲ್ಲಿ ಅವರು ಮರಣ ಹೊಂದಿದರು ! ದಮಾಜಿಗಾಯಕವಾಡರವರು ಸ್ನೇಹಿತರಕ್ಷರು, ತಮ್ಮದೊಂದು ಹಿತವು ಸಾಧಿಸಿದರಾಯಿತು. ಯಾರು ಹಾಳಾದರೂ ಅವರು ನೋಡುವಹಾಗಿಲ್ಲ. ಇದ್ದುಬಿದ್ದು, ನಮ್ಮ ನಂಬಿಗೆಯು ಯಶವಂತರಾವಸವಾರರ ವರಮೇಲೆ, ಆದರೆ ಅವರು ನಮಗಿಂತಲೂ ಕೈ ಕಾಲುಗೆಟ್ಟಿದ್ದಾರೆ. ಹೋಳಕರರ ಹೊಟ್ಟೆಯೊಳಗಿನ ಮಾತು ನಮಗೆ ತಿಳಿಯಲೊಲ್ಲದು, ಇವರ ಹೊರತು ಬೇರೆ ಎಷ್ಟೋ ಜನ ಬ್ರಾಹ್ಮಣ-ಪರಭು-ಮಹಾರಾಷ್ಟ ಜಾತಿಯ ಸರದಾರರು ಇರು ವರು; ಆದರೆ ಅವರಲ್ಲಿ ಮೊದಲಿನ ಉಾಹವು ಈಗ ಉಳಿದಿರುವದಿಲ್ಲ. ಹೀಗೆ ನಮ್ಮ ಪಕ್ಷವು ಅತ್ಯಂತ ದುರ್ಬಲವೂ,ಉತ್ಸಾಹಹೀನವೂ, ಒಕ್ಕಟ್ಟಿಲ್ಲರೂ ಆಗಿ ರುವದು; ಆದ್ದರಿಂದ ಮುಂದೆ ಏನು ಮಾಡಬೇಕೆಂಬದನ್ನು ತಿಳಿದುಕೊಳ್ಳುವದಕ್ಕಾ ಗಿಯೇ ಈಗ ನಾನು ನಿಮ್ಮನ್ನು ಕರೆಸಿಕೊಂಡಿರುವನು. ಸುಜಾ ಉದ್ಲನು ನಮ್ಮನ್ನು ಮೋಸಗೊಳಿಸುತ್ತಿರುವಂತೆ ತೋರುತ್ತದೆ; ಆತನ ನಂಬಿಕೆ ಹಿ ಲಕ್ಕೆ ಬರುವದಿಲ್ಲೆಂದು ನಾನು ತಿಳಿದಿರುವೆನು; ಆದರೆ ಆತನ ಮಿತ್ರತ್ವದ ಬಗ್ಗೆ ನಿಮ್ಮ ವಿಚಾರವೇನಿರುವದು ? ಮಹದಾಜಿ-(ಸ್ವಲ್ಪ ಹೊತ್ತು ಸುಮ್ಮನಿದ್ದು) ತಮ್ಮ ವಿಷಯವಾಗಿ ಸು ಜಾ ಉದೌಲನ ಮನಸ್ಸು ಶುದ್ಧವಿದ್ದಂತೆ ನನಗೆ ತೋರುತ್ತದೆ. ಆತನ ಮನ ಸ್ಟು ನಮ್ಮ ಕಡೆಗೆ ಹರಿಯುತ್ತಿದ್ದಷ್ಟು ಅಬದಾಲಿಯ ಕಡೆಗೆ ಹರಿಯುತ್ತಿರುವದಿ ಲ್ಲೆಂಬುದು ನಿಶ್ಚಯವು; ಆದರೆ, ಆ ಮನುಷ್ಯನು ತನ್ನ ಹಾನಿ ಮಾಡಿಕೊಂಡು ಮಂದಿಯಕೆಲಸ ಮಾಡತಕ್ಕವನು ಮಾತ್ರ ಅಲ್ಲವು. ತನ್ನ ಹಿತವಾಗಿ ನಮ್ಮ ಹಿತ ಮಾಡಲಿಕ್ಕೆ ಬರುವಹಾಗಿದ್ದ ಪಕ್ಷದಲ್ಲಿ ಆತನು ಅಷ್ಟರಮಟ್ಟಿಗೆ ಮಾಡಬಹುದು, లిక్కి బరువు