ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಸ್ತಾವನೆ.

ಅತಿಗರ್ವವು ನಾಶವೆಂದು ಹೇಳಲವಶ್ಯವಿಲ್ಲ. ಅತಿಗರ್ವೇಣ ರಾವಣ ಎಂಬಂತೆ, ಮಹಾಬಲಿಷ್ಟನ ಅತ್ಯಂತ ವೈಭವಶಾಲಿಯೂ ಆದ ರಾವಣನ ನಾಶವು, ಅಗರ್ವದಿಂದಲೇ ಆಯಿತೆಂದು ಶ್ರೀ ಮದ್ರಾಮಾಯಣದಿಂದ ಗೊತ್ತಾಗುವರು. ಅದ ರಂತೆ :: *ಸಭಾಲಿಯಾದ ಭಾವಸಾಬ ಅತಿಗರ್ವದ ಬಾಧೆಯಿಂದ ಮೂರಾ ಷ್ಟ್ರದ ಉಟ್ಕರ್ಷವು ಕುತಂಬುದು ನಮ್ಮ ಈ ಕುರುಕ್ಷೇತ್ರದ ಕಾದಂಬರಿಯಿಂದ ಗೊತ್ತಾಗುಹುದಾಗಿದೆ. ರಾವಣನೂ, ಭಾವೂಸಾಹೇಬನ ಹಿಂದಿನವರಾದ್ದರಿಂದ, ಅವರ ಮಾತು ಹೋಗಲಿ, ಇದೆ ಈಗ ಮುಗಿಯುತಿರುವ ಜರ್ಮನಿಯ ಕೇಸರಬಾದ ಶಹನ ಗರ್ವದ ಬಾಧೆಯು, ಜಗತ್ತನ್ನೇ ಜನ ಬಾಧಿಸುತ್ತಿರುವದು!

ಆದರೂ ಶ್ರೀರಾಮ ರಾವಣನ ಗರ್ವವೂ, ಅಬದಾಲಿಯಿಂದ ಭಾವೂಸಾಹೇ ಬನ ಗರ್ವವೂ ಅಡಗಿಹೋದಂತೆ, ನಮ್ಮ ಸಾರ್ವಭೌಮ ಸರಕಾರದ ವಿವೇಕದ ಸಾಮ ರ್ಥ್ಯದಿಂದ, ಕೇಸರಬಾದಶಹನ ಗರ್ವವು ಅಡಗಿಹೋಗಿರುವದರಿಂದ, ಇಡಿಯ ಜಗತ್ತೇ ಸುಖದ ಹಾದಿಯ ಹಿಡಿದಿರುವದೆಂದು ಹೇಳಬಹುದು. ಈ ಭಾಗ್ಯೋದಯದ ಶ್ರೇಯ ಸ್ಸಿಗೆ ನನ್ನ ಸಾರ್ವಭೌಮ ಸರಕಾರವು ದೊಡ್ಡ ಪ್ರಮಾಣದಿಂದ ಪಾಲುಗಾರವಾಗಿರುತ್ತ ದೆಂದು ನಾವು ಸಂತೋಷದಿಂದ ಹೇಳುವೆವು.

ನಮ್ಮ ಸರಕಾರದ ಈ ಔದಾರ್ಯದ ಕೃತಿಯ ಒಂದು ಬಗೆಯ ಸ್ಮಾರಕಕ್ಕಾ ಗಿಯೇ ಈ “ಕುರುಕ್ಷೇತ್ರವೆಂಬ ಕಾದಂಬರಿಯನ್ನು ಸುರುವು ಬರೆಸಿರುವನೆಂದು ನಾವು ತಿಳಿಯುತ್ತೇವೆ. ನಮ್ಮ ಸಾರ್ವಭೌಮಸರಕಾರದ ಕೃಪಾಛತ್ರದಲ್ಲಿ ಉತ್ತರೋ ತ್ತರ ನಮ್ಮ ಉತ್ಕರ್ಷವಾಗುತ್ತ ಹೋಗಿ, ನಮ್ಮ ಕೃತಜ್ಞತೆಗೆ ಸರಕಾರವು ಹೆಚ್ಚು ಹೆಚ್ಚು ಪಾತ್ರವಾಗುವಂತೆ ಅನುಗ್ರಹಿಸಲೆಂದು ಶ್ರೀ ಸದ್ಗುರುವನ್ನು ನಾವು ಪ್ರಾರ್ಥಿಸುವೆವು.

ಯೋಗ್ಯತಾಸಂಪನ್ನ, ಮಹಾರಾಷ್ಟ್ರ ಲೇಖಕರಾದ ಮ.ರಾ.ರಾ. ನಾಗೇಶ ವಿನಾಯಕ ಬಾಪಟರವರ “ಪಾನಿಪತಚಿಮೋಹೀಮ" ಎಂಬ ಕಾದಂಬರಿಯು ನಮ್ಮ ಈ ಕಾದಂಬರಿಯ ಮೂಲಧನವಾಗಿರುವದು. ಅತಿ ಅವಸರಪ್ರಸಂಗದಲ್ಲಿ ನಮ್ಮ ಸನ್ಮಾ ನನೀಯ ಬಾವಟಸಾಹೇಬರವರಿಂದ ನಮ್ಮ ಧಾರ್ಮಿಕ ಸಂಸ್ಥೆಗಾದ ಸಹಾಯಕ್ಕಾಗಿ ನಾವು ಅತ್ಯಂತ ಕೃತಜ್ಞರಾಗಿರುವೆವು.

ನಮ್ಮ ಮಿತ್ರರಾದ ರಾ.ರಾ.ರಾಮಚಂದ್ರ ಕೃಷ್ಣ ದೇಶಪಾಂಡೆಯವರು ಯೋಗ್ಯತಾಸಂಪನ್ನರಿದ್ದು, ನಮ್ಮ ಸಂಸ್ಥೆಯಲ್ಲಿ ಲೇಖನಕಾರ್ಯವನ್ನು ಮಾಡಹತ್ತಿರು ತ್ತಾರೆ. ಅವರ ಈ ಸ್ತುತ್ಯಕಾರ್ಯದ ಅಭಿನಂದನಕ್ಕಾಗಿಯೇ ನಾವು ಬುದ್ಧಿಪೂರ್ವಕ ವಾಗಿ ಅವರ ಹೆಸರನ್ನು ಈಕಾದಂಬರಿಯು ಲೇಖಕರೆಂದು ನಮ್ಮ ಜತಗೆ ಉಲ್ಲೇಖಿಸಿರು ವೆವು. ನಮ್ಮ ಈ ಮನೋದಯದಂತೆ ಅವರಿಂದ ಕನ್ನಡಿಗರ ಸೇವೆಯು ಘಟಿಸುವಂತೆ ಶ್ರೀ ಗುರುವು ಅನುಗ್ರಹಿಸಲಿ.

“ಸದ್ಯುರು" ಆಫೀಸ,
ಹಾವೇರಿ,
ತಾ||೮-೧೧-೧೯|

ಕನ್ನಡಿಗರ ಸೇವಕ,
ವೇ. ತಿ. ಕುಲಕರಣಿ
ಗಳಗನಾಥ.