ಹೀಗೆ ಹೋಳರಕನು ಲಕ್ಕೋಟಯಗತಿಮಾಡಿದ್ದನ್ನು ನೋಡಿ ಬೀರಬಲ್ಲನು ಬೆರಗಾದನು. ಮಲ್ಹಾರ ರಾಯನು ಲಕ್ಕೋಟೆಯನ್ನು ಒಡೆಯಲಿಲ್ಲ, ಓದಿ ನೋಡಲಿಲ್ಲ! ಇದರ ಅರ್ಥವೇ ಬಿರಬಲ್ಲನಿಗೆ ತಿಳಿಯದಾಯಿತು. ಆಗ ಹೋಳಕರನು ಸಿಟ್ಟಿನಿಂದ ಹಬ್ಬು ಗಂಟಿಕ್ಕಿ ಆ ದುಗುಡು ಬೀರಬಲ್ಲನಿಗೆ - 'ಇಂಥ ಚೀಟಿ-ಚೀಪಟಿಗಳನ್ನು ನನ್ನ ಕಡೆಗೆ ಕಳಿಸುತ್ತ ಬಂದೇಡೆಂದು ನಾನು ನಜೀಬನಿಗೆ ಹಲವು ಸಾರೆ ಹೇಳಿದ್ದೇನೆ; ಆದರೆ ಆತನು ತನ್ನ ಚಾಳಿಯನ್ನು ಬಿಡುವುದಿಲ್ಲ. ನನಗೆ ನೆಟ್ಟಗೆ ಓದಲಿಕ್ಕೆ ಬರುವದಿಲ್ಲ. ಕಾರಕುನರ ಕಡೆಯಿಂದ ಓದಿಸಿದರೆ ಗುಪ್ತ ಸಂಗತಿಗಳು ಹೊರಬೀಳುತ್ತವೆ.ಯಾರ ನಂಬಿಗೆಯೇನು?ಚೀಟ ಚಪಾಟಗಳಾದರೂ ಸಾಗಳಾದರೂ ಯಾತಕ್ಕೆ ಬೇಕು? ಮನಸ್ಸು ಒಂದಿದ್ದರಾಯಿತು, ನಡುವೆ ಚೀಟಿಯು ಯಾರ ಕೈಗಾದರೂ ಸಿಕ್ಕರೆ ಅರ್ಥವು ಹೊಗಿ ಆನರ್ಥವಾದೀತಲ್ಲ! ಹೇಳು ನಜೀಬನು ಬಾಯಿಮಾತು ಏನಾದರೂ ಹೇಳಿದ್ದರೆ ಹೇಳು" ಎಂದು ಕೇಳಲು,ಗಂಗಾದಾಸನು.
ಗಂಗದಾಸ—ನಜೀಬಸಾಹೇಬರು ಬಾಯಿಮಾತು ಹೇಳಿದ್ದು ಬೇರೆಯಿರುವದು; ಆದರೆ ನಂಬಿಗೆಗಾಗಿ ಅವರು ತಮ್ಮ ಹಸ್ತಾಕ್ಷರದ ಚೀಟಯನ್ನು ಕೊಟ್ಟಿದರು . ಅದರ ಮೇಲೆ ಅವರ ರುಜುವಿದ್ದಿಲ್ಲ.
ಮಲ್ಹಾರರಾವ_ಬೆಂಕಿಹಚ್ಚು ಆ ನಂಬಿಕೆಗೆ! ಇಂಥ ನಂಬಿಗೆಯು ಎಲ್ಲಿ ಯಾದರೂ ನಮ್ಮನ್ನು ಹಾಳುಮಾಡಿಬಿಟ್ಟೀತು . ಇನ್ನು ಹೀಗೆ ಮಾಡಬೇಡೆಂದು ರೋಹಿಲನಿಗೆ ಹೇಳು. ಇರಲಿ, ಆತನು ಬಾಯಿಮಾತು ಏನು ಹೇಳಿರುವನು?
ಗಂಗಬಾಸ _'ಕಟ್ಟಕಡೆಯ ಪ್ರಸಂಗವು ಸಮಿಪಿಸಿರುವದು. ನಾವೂ, ನೀವೂ ಹಳೆಯ ಗೆಳೆಯರು. ನಮ್ಮ ನಿಮ್ಮೊಳಗಾದ ಕರಾರುಗಳನ್ನು ನಾನು ನಿಜವೆಂದು ನಂಬಬೇಕೋ ಹೇಗೆಂಬದನ್ನು ಸ್ಪಷ್ಟವಾಗಿ ಹೇಳಿರಿ' ಎಂದು ನಜೀ ಬಸಾಹೇಬರು ಹೇಳಿದ್ದಾರೆ.
ಮಲ್ಹಾರರಾವ _ಏನಂದಿ? ಅತನ ಮೆಲಿನ ನಮ್ಮ ನಂಬಿಗೆಯು ಹಾರಿತೇ ಆತನಿಗೆ ಈ ಸಂಶಯವಾದರೂ ಹ್ಯಾಗೆ ಬಂದಿತು? ನನ್ನ ಮೇಲೆ ಭಾವುಸಾಹೇಬರ ಸಿಟ್ಟು ಇರುವದು. ನನ್ನಲ್ಲಿ ಅವರ ನಂಬಿಗೆ ಉಳಿದಿರುವದಿಲ್ಲ. ಹಲವು ಸಾರೆ ಅವರು ನನ್ನ ಮಾನಭಂಗಮಾಡಿರುವರು. ಗಾರದಿಯ ಮಾತು ಕೇಳಿ? ನನ್ನನ್ನು ತುಚ್ಛಕರಿಸುತ್ತಿರುವರು. ಜನಕೋಜಿ_ಮಹದಾಜಿಗಳು ನಿನ್ನೆ ಮೊನ್ನಿನ ಹುಡುಗರು. ಅವರು ನನ್ನ ಹಿರಿಯತನದ ಮಾನವನ್ನು ಕಾಯುವ ದಿಲ್ಲ. ಹಿಂದೆ ನಗೆಯಾಡುವರು. ಇದೆಲ್ಲ ನಿಜವಿದ್ದರೂ, ನಜೀಬನಿಗೆ ಈಗ ಪ್ರತ್ಯಕ್ಷ ಸಹಾಯ ಮಾಡುವದು ನನ್ನಿಂದಾಗುವದಿಲ್ಲ . ಈ ಮೊದಲೆ ನಾನು ಹೇಳಕಳಿಸಿದಂತೆ ನಡೆದುಕೊಳ್ಳದಿದ್ದರೆ, ಆತನ ನಾಲ್ವತ್ತೆರಡು ಕುಲಗಳು ನರಕದಲ್ಲಿ ಬೀಳುವವೆಂದು ನಜೀಬನಿಗೆ ಹೇಳು ಇದೇ ನನ್ನ ಕಟ್ಟಕಡೆಯ ಮಾತು.ನಾನಂತು ಆತನ ಹೇಳಿದಂತೆ ನಡೆದುಕೊಂಡೇ ನಡೆದುಕೊಳ್ಳುವೆನು.
ಈ ಮೇರೆಗೆ ಮಾತುಕಥೆಗಳಾಗಿ ಗಂಗಾದಾಸನು ಮಜರೆಮಾಡಿ ಹೊರಟ ಹೋದನು ಅಷ್ಟರಲ್ಲಿ ಒಬ್ಬ ಸೇವಕನು ಬಂದು_ "ಶ್ರೀಮಂತರು ತಮಗೆ ಈ