ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧. ಸುಜಾನ ಸ್ವಾರ್ಥದ ಸಡಗರವು ಆಗಿ ಇ೦ಥ ಘನವಂತನಾದ ಸುಜಾ ನದರ್ಶನಕ್ಕಾಗಿ ಉಮೆಯು ಹೋಗಿ ಆತನ ದಿವಾಣಖಾನೆಯನ್ನು ಪ್ರವೇಶಿಸಿದಾಗ, ಅಲ್ಲಿ ಆತನಿದ್ದಿಲ್ಲ. ಆತನ ದಿವಾಣನಾದ ಕಾಶೀರಾಜಪಂಡಿತನು ಗದ್ದಮಳದ ಕುತನಿಯ ಗಾದಿಯ ಮೇಲೆ ಲೋಡಿಗೆ ಆತು ಕುಳಿತಿದ್ದನು. ಕಾಶೀರಾಜಪಂಡಿತನು ದಕ್ಷಿಣದ ಬ್ರಾಹ್ಮಣನು, ಆತನ ವಯ ಸ್ಸು ಮೂವತ್ತರ ಹೊರಗೊಳಗೆ ಇರಬಹುದು. ಆತನ ನಿಲುವಿಕೆ ಗಿಡದರ, ಮೈ ಕಟ್ಟು ತೆಳ್ಳಗೆ, ಆತನ ಅಚ್ಚ ಕರಿಗುಡ್ಡಿಯ ದೊಡ್ಡ ಕಣ್ಣುಗಳು ತೇಜಃಪುಂಜವಾ ಗಿದ್ದು, ತುಟಿ, ಮೂಗುಗಳು ಸುಂದರವಾಗಿದ್ದವು. ಸಾದಗಪ್ಪಿನ ಆ ಬ್ರಾಹ್ಮಣನ ಮುಖದಲ್ಲಿ ಸ್ವಲ್ಪ ಮೈಲಿಯ ಕಲೆಗಳಿದ್ದವು. ಆತನಿಗೆ ಮರಾಠಿ, ಫಾರ್ಸಿ, ಹಿಂದಿ, ಸಂಸ್ಕೃತ ಈ ನಾಲ್ಕು ಭಾಷೆಗಳು ಚನ್ನಾಗಿ ಬರುತ್ತಿದ್ದವು. ಆತನ ನಸ್ಯ ಏರಿಸುವ ಚಟವು ಬಲು ಬಲಿಷ್ಠ ವಾಗಿತ್ತು. ಆತನು ಎಂಥ ಮಹತ್ವದ ಕೆಲಸದಲ್ಲಿಯೇ ತೊಡಗಿರಲಿ, ಆತನಿಗೆ ಎಷ್ಟು ಅವಸರದ ಕೆಲಸವೇ ಇರಲಿ, ನಸ್ಯವ ಏರಿಸದಿದ್ದರೆ ಕೆಲಸವಾಗುತ್ತಿದ್ದಿಲ್ಲ. ಸಾಧಾರಣ ಪಾವುನಸ್ಯ ಹಿಡಿಯುವಬೆಳ್ಳಿಯ ಡಬ್ಬಿ ಯನ್ನು ತುಂಬಿ ಇಟ್ಟುಕೊಳ್ಳದಿದ್ದರೆ ಆತನ ಕೆಲಸವಾಗಲಿಕ್ಕೆ ದೊಡ್ಡ ತೊಂದರೆಯಾಗು ತಿತ್ತು. ಇಂಥ ಆ ಬ್ರಾಹ್ಮಣ ಮುತ್ಸದ್ದಿಯು ಈಗ ಗಲಗಿನ ಲೆಕ್ಕಣಿಕೆಯನ್ನು ದತಿಯಲ್ಲಿ ಎದ್ದಿ, ಯಾವದೋ ಒ೦ದು ಮಸೂದೆಯನ್ನು ತಿದ್ದುವ ಕೆಲಸದಲ್ಲಿ ಮಗ್ನನಾಗಿದ್ದನು. ಆತನು ತನ್ನೆ ದುರಿಗೆ ಬಂದು ನಿಂತಿದ್ದ ಪುರುಷವೇಷಧಾರಿ ಯಾದ ಉಮೆಯನ್ನು ಕುರಿತು ಕಾಶೀರಾಜಪಂಡಿತ-ಮಿರಝಾ ಸಾಹೇಬರೆಂಬವರು ನೀವೇ ಏನು ? ಶು ಳಿತುಕೊಳ್ಳಿರಿ. ನಿಮಗೆ ಮರಾಠಿಭಾಷೆಯು ಚನ್ನಾಗಿ ಬರುತ್ತದಲ್ಲವ ? ವಿರಝಾ-ರಾವಸಾಹೇಬ, ನನಗೆ ಮರಾಠಿಯು ನೆಟ್ಟಗೆ ತಿಳಿಯುವದಿಲ್ಲ. ನನಗೆ ಮಿರರಾ-ಜಾನ-ವಾರನನ್ನು ವರು. ಕಾಶೀರಾಜ ಪಂಡಿತ-ಹಾಗಾದರೆ ಮಿ ರ್ಝಾ ಸಾಹೇಬ, ನಿಮಗೆ ಫಾರ್ಸಿ ಭಾಷೆಯು ನೆಟ ಗೆ ಬರುತ್ತಿರಬಹುದು ? ಈ ಮಾತಿಗೆ ಬೇಗನೆ ಉತ್ತರಬಾರದ್ದನ್ನು ನೋಡಿ ಕಾಶೀರಾಜನು ತನ್ನ ಕಾರಕೂನರಿಗೆಲ್ಲ ಹೊರಗೆ ಹೋಗಹೇಳಿದನು. ಕೂಡಲೆ ಅವರು ದಪ್ತರಗಳನ್ನು ಹಾಗೇಬಿಟ್ಟು ಹೊರಗೆ ಹೋದರು. ಕಾಶೀರಾಜನು ಕಸು ವಿನಿಂದ ನಸ್ಯವನ್ನು ಏರಿಸಿ ಮೂಗು ಒರಿಸಿಕೊ೦ಡು-ನೀವು ಮಿರಝ;-ಜಾನ~ ವನನಿಸಿಕೊಂಡ ಬಳಿಕ, ನಿಮಗೆ ಫಾರ್ಸಿ ಭಾಷೆಯು ಬರಲೇಬೇಕು. ನಿಮಗೆ ಜನ್ಮಭಾಷೆಯ ಬರುವದಿಲ್ಲ. ನಿಮ್ಮ ಯಜಮಾನನ ಭಾಷೆಯಾದ ಮಹಾರಾಷ್ಟ್ರವೂ ಬರುವದಿಲ್ಲ. ಇದೇನು ಗೂಢವ ? ಹಾಗಾದರೆ ನಿಮಗೆ ಹಿಂದೀಭ .ಷೆಯು ಬರುವದೋ ?' - ಮಿರಝಾ-ಚೆ ಹುಜೂರ,ನನಗೆ ಹಿಂದೀ ಭಾಷೆಯು ನೆಟ್ಟಗೆ ತಿಳಿಯುತ್ತದೆ. ಕಾಶೀರಾಜಶ್ರೀಮಂತ ಭಾವುಸಾಹೇಬರವರು ನಮ್ಮ ಹೆಸರಿನಿಂದ ಪತ್ರ ವೇನಾದರೂ ಕೊಟ್ಟಿರುವರೋ ? ಮಿರಝಾ-ಕೊಟ್ಟಿರುವರು ಸರಕಾರ; ಬಂದವಾಡಿದ ಒಂದು ಲಕ್ಕೂಟ ಯನ್ನು ಶ್ರೀಮಂತರು ನನ್ನ ಕೈಯಲ್ಲಿ ಕೊಟ್ಟ ಸುವರು.