ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

iii


ಇನ್ನೊಮ್ಮೆ ನೋಡಿ ಈಗ ಮುದ್ರಿಸುವುದಕ್ಕೆ ಇತ್ತಲಾಗಿನ ಮಂಗಳೂರು ವಾರ್ತಾ ಪತ್ರಿಕೆಗಳಲ್ಲಿ ಕೋಟಿಚೆನ್ನಯರ ವಿಷಯವಾಗಿ ಒಂದೆರಡು ಲೇಖಗಳು ಪ್ರಕಟವಾದದ್ದೇ ಕಾರಣವಾಯಿತು.

ಅಕ್ರಮ, ವ್ಯರ್ಥ, ಪುನುರುಕ್ತ, ಅಪಾರ್ಥ, ಹತೋಪಮ್ಮೆ ಲೋಕನಯ ವಿರುದ್ದತೆ ಎ೦ಜಿ ವಶನದೋಷಗಳಲ್ಲಿ ಮೊದಲನೆಯ ಮೂರು ದೋಷಗಳು ಮಾತ್ರವೇ ಮೂಲಕಥೆಯಲ್ಲಿ ಇದ್ದುದರಿಂದ, ಅವನ್ನು ತೆಗೆದುಬಿಟ್ಟು ನನಗೆ ದೊರೆತಿದ್ದ ಪಾಠಾಂತರಗಳಲ್ಲಿಯ ಕಥಾಭಾಗಗಳೆಲ್ಲಾ ಒಂದನ್ನೊಂದು ಕೂಡುವಂತೆ ಮಾಡಿ ಕೋಟಿಚೆನ್ನಯರ ತುಳು “ಪಾಡ್ದೊನೆಯನ್ನು ಕನ್ನಡಿಸಿರುತ್ತೇನೆ". ಮೂಲದಲ್ಲಿದ್ದ ಒಂದೆರಡು ಅಸಹ್ಯ ಪ್ರಸಂಗಗಳನ್ನೂ ಚರ್ವಿತಚವ್ರಣವನ್ನೂ ಕಥಾನಾಯಕರ ಭೀಕರವಾದ ಕೌರವನ್ನೂ ಬಿಟ್ಟು ಬಿಟ್ಟು, ಬ್ರಾಹ್ಮಣ ಜೋಯಿಸನ ವೃತ್ತಾಂತವನ್ನೂ ಪಡುಮಳ ಬೀಡಿನ ದಹನ ಪ್ರಸ್ತಾಪವನ್ನೂ ಕಥೆಯ ಚೌಕಟ್ಟಿನಲ್ಲಿ ನೂತನವಾಗಿ ಸೇರಿಸಿರುತ್ತೇನೆ,

ಮಳೆಗಾಲದ ಹಗಲು ಹೊತ್ತಿನಲ್ಲಿ ತುಳುನಾಡಿನ ಒಕ್ಕಲಿಗನು ನಾಟಿ ಕೆಲಸವನ್ನು ಮುಗಿಸಿ, ಹೊತ್ತು ಮುಳುಗುವುದರೊಳಗೆ ತನ್ನ ತುಲ್ಲು ಮನೆಯನ್ನು ಸೇರಿಕೊಂಡು ಬೇಗನೆ ಊಟ ಮಾಡಿ, ಹೊಯ್ಕೆಂದು ಹೊರಗೆ ಹೊಯ್ಯುತಿದ್ದ ಕಾರತಿಂಗಳ ಮಳೆಯಿಂದ ರಾತ್ರಿಯ ಕತ್ತಲು ಭಯಂಕರವಾಗಿ ಕಾಣುತ್ತಿದ್ದಾಗ—— ಮಿಣಮಿಣನೆ ಉರಿಯುವ ಬೆಳಕಿನ ಬಳಿಯಲ್ಲಿ ಕುಳಿತುಕೊಂಡು ಆತನು ದುಡಿಯಿಂದ ತಾಳಹಾಕಿ ಬಾಯಿಂದ ರಾಗವೆತ್ತಿ ಹಾಡುವ ಪಾಡೋನೆಯನ್ನು ಕೇಳಿ ಉಂಟಾಗುವ ರಸಾಸ್ವಾದನೆಯು ಈ ಕನ್ನಡ ಕಥೆಯ ಒಣ ಮಾತುಗಳನ್ನು ಓದುವುದರಿಂದ ಉಂಟಾಗಲಾರದೆಂದು ನನಗೆ ಗೊತ್ತಿದ್ದರೂ, ತುಳುನಾಡಿನಲ್ಲಿ