ಪುಟ:ಕೋಹಿನೂರು.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪರಿಚ್ಛೇದ ೧೧೧

  • ಈ ಹೊತ್ತಿನವರಿಗೂ ನೀನು ಹೇಳಿದುದರಲ್ಲಿ ಯಾವುದನ್ನು ನಡೆಸಿ ಕೊಟ್ಟಿಲ್ಲ ? ೨೨

<< ಮಹಾರಾಜ ! ಈ ಮದುವೆಯನ್ನು ಬಹಳ ಸಂಭ್ರಮದಿಂದ ಮಾಡ ಬೇಕು, ರಾಜಸ್ಥಾನದಲ್ಲಿ ಅಂತಹ ಮದುವೆಯನ್ನು ಯಾವಾಗಲೂ ಯಾರೂ ಮಾಡಿದಹಾಗಿರಕೂಡದು, ನೋಡಿಯೂ ಇರಕೂಡದು, ಅವರನು ಬಡ ರೈತನ ಹಾಗೆ ಯವನ ಯುದ್ಧಕ್ಕೆ ಹೋಗಿದ್ದ ದುಃಖವು ನಿವಾರಣವಾಗಬೇಕಾದರೆ ನನ್ನ ಇಷ್ಟ ಪ್ರಕಾರ ಅನೇಕರು ಹರ್ಷೋತ್ಸವಗಳು ಸಂಭ್ರಮದಿಂದ ನಡೆಯ ಬೇಕು, ರಾಜಸ್ಥಾನದ ಸಮಸ್ತ ರಾಜರಿಗೂ ರಾಜಪರಿವಾರಗಳಿಗೂ ಲಗ್ನ ಪತ್ರಿಕೆ ಗಳು ಹೋಗಬೇಕು, ಎಲ್ಲರನ್ನೂ ಬರಮಾಡಬೇಕು, 99 - * ಒಳ್ಳೆಯದು, ಮತ್ತೇನು ? ೬೨ « ಮತ್ತೂ ಐನೂರು ಆನೆಗಳೂ, ಹತ್ತು ಸಾವಿರ ಕುದುರೆಗಳೂ ವರನನ್ನು ಕರೆದುಕೊಂಡು ಹೋಗುವ ವರಯಾತ್ರೆಯ ಮೆರವಣಿಗೆಯ ಸಂಗಡ ಹೋಗ ಬೇಕು, ನಮ್ಮ ತೌರುಮನೆಯಿಂದ ೯ ದಿಗ್ಗಜ ೨೨ ವೆಂಬ ಪಟ್ಟದಾನೆಯನ್ನೂ (* ದಾನವ ದಮನ ೨೨ ಎಂಬ ಪಟ್ಟದ ಕುದುರೆಯನ್ನೂ ತರಿಸಬೇಕು, ಈ ಸಮಸ್ತ ಆನೆಗಳಿಗೂ ಕುದುರೆಗಳಿಗೂ ಮುತ್ತಿನ ಹಾರಗಳಿಂದಲೂ ವಜ್ರದ ಹಾರ ಗಳಿಂದಲೂ ಅಲಂಕಾರ ಮಾಡಬೇಕು. ೨೨ 16 ದೇವಿ! ಈಗ ರಾಜಸ್ಥಾನದಲ್ಲಿ ಮೇಷ್ಟರ ಹಾವಳಿಯಿಂದುಳಿದಿರು ಇದು ಆನೆ ಕುದುರೆಗಳ ಹೊರತು ಮತ್ತೆ ಬೇರೆ ಯಾವುದೂ ಇಲ್ಲ. ಆನೆ ಕುದುರೆ ಗಳಿಗೆ ಕಡಮೆಯಿಲ್ಲ. ಆದರೆ ಮುತ್ತುಗಳನ್ನೂ ವಜ್ರಗಳನ್ನೂ ಎಲ್ಲಿಂದ ತರಬೇಕು ? 99 ಕಮಲಾದೇವಿಯು ಗರ್ವದಿಂದೆದ್ದು ನಿಂತು ಹೇಳಿದಳು :« ಏನು ಹೇಳೋಣಾಯಿತು ! ಎಲ್ಲಿ ದೊರಕುವುದೆ ? ಮಹಾರಾಣರ ವಂಶದಲ್ಲಿ ಹುಟ್ಟದೆ ಬಡವರ ವಂಶದಲ್ಲಿ ಹುಟ್ಟಲಿಲ್ಲವೇಕೆ ? ಅವಮಾನವಾಗುವುದೆಂತಲೇ ನಾನು ಯಾವಾಗಲೂ ನನ್ನಾ ಶೆಯಲ್ಲೊಂದನ್ನಾದರೂ ತಮ್ಮಲ್ಲಿ ಕೇಳಿ ಕೊಂಡಿಲ್ಲ. 99 ಮಹಿಷಿ ಕರ್ಣಾವತಿ ದೇವಿಯು ಕಮಲಾದೇವಿಯ ಕೈಹಿಡಿದೆಳೆದು ಅವಳ ಕಿವಿಯಲ್ಲಿ ಏನೋ ಹೇಳಿದಳು. ಕಮಲಾದೇವಿಯು ರಾಣಾ ಬಳಿ ಹೋಗಿ ಕುಳಿತುಕೊಂಡು ಪುನಃ ಹೇಳತೊಡಗಿದಳು :-( ಚೆನ್ನಾಗಿ ಹೇಳಿದಿರಿ, ಅಕ್ಕ !