ಎರಡನೆಯ ಪರಿಚ್ಛೇದ ೧೧೫ 5+AAAAAhhh **d AAAA # A # # # # hh bynny- 2 *hhhhh sw>< \\\n4 ೧nwww ಕರ್ಣಾವತಿಯು ಕಾಗದವನ್ನೋದಿ ಹತಾಶಹೃದಯೆಯಾಗಿಯೂ ವರ್ಮಾಹತ ಪ್ರಾಣವುಳ್ಳವಳಾಗಿಯೂ ಚಿಂತಿಸುತ್ತಿದ್ದ ಸಮಯದಲ್ಲಿ ಬಾಗಿಲ ಶರೆದುಕೊಂಡು ಕಮಲಾದೇವಿಯು ಕೊಟಡಿಯೊಳಗೆ ಒಂದಳು, ಅವಳು ಆಶ್ಚರ್ಯದಿಂದ ಕರ್ಣಾವತಿಯ ಮುಖವನ್ನು ನೋಡಿ, “ ಇದೇನಕ್ಕ ! ಬರೆದೋದುವುದಕ್ಕೆ ಇದೇ ಸಮಯ ! ಅಮರನಿಗೆ ಮದವಣಿಗನ ಉಡುಪಿಗೋ ಸ್ಕರ ನಮ್ಮ ತೌರುಮನೆಯಿಂದ ತರಿಸಿರುವ ಸೊಗಸಾದ ಹೊಸ ಉಡುಪುಗಳನ್ನು ನಿಮಗೆ ತೋರಿಸಿಲ್ಲ. ನೋಡುವುದಕ್ಕೆ ಇಷ್ಟವಿದ್ದರೆ ಬೇಗನೆ ನನ್ನ ಸಂಗಡ ಬರಬಹುದು ! ಎಂದು ಹೇಳಿದಳು. ಕಮಲಾದೇವಿಯು ಪ್ರತ್ಯುತ್ತರಕ್ಕೆ ಹೊತ್ತು ಕೊಡದೆ ಬಲವಂತದಿಂದ ಕರ್ಣಾವತಿಯ ಸೆರಗನ್ನು ಹಿಡಿದು ಜಾಗ್ರತೆಯಾಗಿ ತನ್ನ ಕೊಟಡಿಯ ಹತ್ತಿರ ದಲ್ಲಿದ್ದ ಪುಷೋದ್ಯಾನಕ್ಕೆ ಕರೆದುಕೊಂಡುಹೋದಳು. ಅಲ್ಲಿ ಅನೇಕ ಮಂದಿ ಹೆಂಗಸರು ಅಮರನನ್ನು ಸುತ್ತಿಕೊಂಡು ನಿಂತಿದ್ದರು. ಕಮಲಾದೇವಿಯು ನಗುತ ನಗುತ, ಅತುಳ ಆನಂದದಿಂದ ತಾನೇ ಸ್ವಂತವಾಗಿ ಕುಮಾರನಿಗೆ ಮಹಾ ವಯೌಲ್ಯವುಳ್ಳ ರತ್ನ ರಾಜಿ ಶೋಭಿತವಾದ ಉಡುಪುಗಳನ್ನು ತೊಡಿಸಿ ವಜ್ರಖಚಿತ ವಾದ ಸಿರಪೇಷನ್ನು ಕಟ್ಟಿದ್ದ ರುಮಾಲನ್ನು ತಲೆಯಲ್ಲಿಟ್ಟ, ಬಳಿಕ ರಮಣಿಯರ ಮಂಡಲಿಯನ್ನು ಸಂಬೋಧಿಸಿ, “ ನೀವೆಲ್ಲಾ ರೆಪ್ಪೆ ಇಕ್ಕದೆ ನೋಡಿರಿ, ಇಂತಹ ಭುವನಮೋಹನನಾದ ವರನನ್ನು ಜಗತ್ತಿನಲ್ಲಿ ಮತ್ತೆಲ್ಲಾ ದರೂ ಕಂಡಿದ್ದೀರಾ ! ನಾನು ಮೊದಲು ಹೇಳಿದಹಾಗೆ ಅಂಬರದ ರಾಜಕುಮಾರಿಯು ಪೂರ್ವಜನ್ಮದಲ್ಲಿ. ಅನೇಕ ತಪಸ್ಸು ಮಾಡಿರುವುದು ನಿಜವೋ ಸುಳ್ಳೋ ಯೋಚಿಸಿ ನೋಡಿರಿ. ಆದರೆ ಒಂದು ವಿಷಯದಲ್ಲಿ ಮಾತ್ರ ನನ್ನಾ ಶೆಯನ್ನು ದೇವರು ಪೂರ್ತಿಮೂಡ ಲಿಲ್ಲ ! ಈ ದಿನ ಇಂತಹ ಸುಖಸಂತೋಷದಲ್ಲಿ ನನ್ನ ತಂದೆಯ ವಂಶದ ರಾಜ ಗೌರವ ಧನವಾಗಿದ್ದ “ ಕೋ ಹಿನುರು 99 ರತ್ವ ವನ್ನು ಹುಡುಗನ ಲಲಾಟರಲ್ಲಿ (ಮುಖದಲ್ಲಿ ಬೆರಳನಿಟ್ಟು ತೋರಿಸಿತ್ತ) ಮುಡದಿದ್ದರೆ ನಮ್ಮ ಆಶೆಯೆಲ್ಲಾ ಪೂರ್ತಿಯಾಗುತ್ತಿತ್ತು ...' ಎಂದು ಹೇಳಿದಳು. ಕುಮಾರ ಅಮರಸಿಂಹನು ತಲೆಯನ್ನು ತಗ್ಗಿಸಿಕೊಂಡು ಲಜ್ಜೆಯಿಂದ, « ತಾಯಿ! ತಮ್ಮ ಆಶೆಯನ್ನು ಪೂರ್ತಿಗೊಳಿಸುವೆನು, ತನಗೆ (* ಕೋಹಿನೂರ 99 ನ್ನು ತಂದುಕೊಡುವೆನು ?” ಎಂದು ಹೇಳಿದನು. ---
ಪುಟ:ಕೋಹಿನೂರು.djvu/೧೨೩
ಗೋಚರ