ಪುಟ:ಕೋಹಿನೂರು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪರಿಚ್ಛೇದ ೨೫ wwwmvvw ಬಾಹುಗಳಲ್ಲಿ ಬಲವುಂಟು ! ದುರ್ಗಾದಾಸನಲ್ಲದಿದ್ದರೆ * ಭಂ, ಭಂ ಹರ ೨೨ ನಿನಾದದಿಂದ ಹಿಂದೂಗಳ ಪ್ರಾಣ ಶೂನ್ಯವಾಗಿದ್ದಾ ದೇಹವನ್ನು ಮತ್ತಾರು ಅಮೃತರಸವನ್ನು ಸರಿಸಿ ಸಜೀವವಾಗಿ ಮಾಡಬಲ್ಲವರಾಗಿದ್ದರು ? - ಕೃಷಿಕನು ಆಶ್ಚರ್ಯದಿಂದಾ ವೀರದೇಹವನ್ನು ನೋಡುತಿದ್ದನು. ದುರ್ಗಾ ದಾಸನು, ೧೯ ಅಣ್ಣ ! ಭಯವಿಲ್ಲ. ನಿನ್ನಾ ಶೆಯು ಪೂರ್ತಿಯಾಗುವುದು, ಈಗ ಬಾ-ನಮ್ಮ ರಾಜಮಹಿಷಿಯ ಸಂದರ್ಶನ ಮಾಡಿಸಿ ಅವರಿಗೆ ನಿನ್ನ ಪರಿಚಯ ವನ್ನು ಅರುಹುವೆನು ೨೨ ಎಂದು ಹೇಳಿ, ದುರ್ಗಾದಾಸನು ಕೃಷಿಯುವಕನ ಕೈಯನ್ನು ಹಿಡಿದುಕೊಂಡು ಮಸಜೀದಿನೊಳಗೆ ಕರೆದುಕೊಂಡು ಹೋದನು. ಮಸಜೀದಿನ ಮಧ್ಯದಲ್ಲೊಂದು ದೊಡ್ಡ ಅಂಗಳ, ಅಂಗಳದಲ್ಲಿ ವನಪುಷ್ಪಗಳ ಕಾನನ- ಪೂರ್ವದಲ್ಲಿ ಅದೇ ಪುಷೋದ್ಯಾನವಾಗಿದ್ದು ಈಗ ವನಪುಷ್ಪಗಳ ಕಾದಾಗಿ ಪರಿಣಮಿಸಿದೆಯೆಂದು ತೋರುತ್ತದೆ, ವಿವಿಧ ವರ್ಣಗಳುಳ್ಳ ವಿವಿಧ ಪರಿಮಳಗಳುಳ್ಳ ಅನಾಘಾತವಾಗಿದ್ದ ಪುಷ್ಪಗಳಾ ನಿರ್ಜನಕಾನನದಲ್ಲಿ ನೀರವ ವಾಗಿ ಅರಳಿ ನಿರ್ಜನದಲ್ಲಿ ನೀರವವಾಗಿ ಪರಿಮಳವನ್ನು ಬೀರಿ ನಿರ್ಜನದಲ್ಲಿ ನೀರವ ಭಾಷೆಯಲ್ಲಿ ಎಷ್ಟೋ ಪ್ರೇಮಭರಿತವಾದ ಮಾತುಗಳನ್ನಾಡುತಿದ್ದುವು! ಮೇಲೆ ಆಕಾಶದಲ್ಲಿ ಶಶಾಂಕನು ನೀರವವಾಗಿ ಕಿರಣಗಳನ್ನು ಬೀರಿ ಅರಳಿದಾ ಪುಷ್ಪದಳಗಳ ಪರಿಮಳದಲ್ಲಿ ನೀರವವಾಗಿ ಅಮೃತವನ್ನು ಹೊದ್ದು ನೀರವವಾಗಿ ನಗುತಿದ್ದನು ! ಆ ನಿರ್ಜನ ನೀರವ ಕುಸುಮ ಕಾನನದಲ್ಲಿ ಇಬ್ಬರು ರಮಣಿ ಯರು ನೀರವವಾಗಿ ನಿಂತಿದ್ದರು. ದುರ್ಗಾದಾಸನು ಹುಡುಗನನ್ನು ಕುರಿತು, 4 ವೀರಬಾಲಕ ! ಅಭಿವಾದನ ಮಾಡು-ನಿನ್ನೆದುರಿಗೆ ಯೋಧಪುರದ ರಾಜಮಹಿ ಪಿಯಾದ ರಾಣಿ ಅರುಂಧತಿದೇವಿಯ ಅವರ ಪಾರ್ಶ್ವದಲ್ಲಿ ಅಂಬರದ ರಾಜ ಕುಮಾರಿ ಅ೦ಬಾಲಿಕೆಯ ನಿಂತಿರುವರು ೨೨ ಎಂದು ಹೇಳಿದನು. ಕೃಷಿಕಯುವಕನು ನೋಡಲಾಗಿ, ಎದುರಿಗೆ ನಿರಾಭರಣೆಗೂಗಿ ಪಟ್ಟವು ವನ್ನು ಟ್ಟು ರಾಜಮಹಿಷಿ-ಅವಳ ಪಾರ್ಶ್ವದಲ್ಲಿ -ಆಹಾ ! ಎಷ್ಟು ಸುಂದರ! ಶಿಲೆಯಲ್ಲಿ ಕಡಿದ ಸರಸ್ವತಿಯ ಮೂರ್ತಿಯಹಾಗೆ, ಪಟದಲ್ಲಿ ಚಿತ್ರಿಸಿದ ಭುವನೇ ಶ್ವರಿಯಹಾಗೆ, ಭಕ್ತಜನರೆದುರಿಗೆ ನಿಂತ ಜಗದ್ಧಾತ್ರಿಯ ಪ್ರತಿಮೆಯಹಾಗೆ, ಆಹಾ ! ಇದೂ ಸ್ವಷ್ಟ ವೇ ! ಒಂದು ದಿನ ಕೃಷಿಕನು ಶೈಶವದಲ್ಲಿ ಎಂಟು ವರ್ಷಕ್ಕೆ ಮೊದಲು, ಅಹೇರಿಯಾ ಉತ್ಸವದ ದಿನ ರಾಜಸಮುದ್ರ ಕೆರೆಯ ಕಟ್ಟೆಯಮೇಲೆ