ಪುಟ:ಕೋಹಿನೂರು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ ಮಾಡುವುದಕ್ಕೆ ಮರೆತುಹೋದುದು ಬಾರಿಬಾರಿಗೂ ಅವಳಿಗೆ ನೆನಪಿಗೆ ಬಂದು ಮನಸ್ಸು ಕಳವಳಗೊಳುತಿದ್ದಿತು. ರಮಣಿಯು ಹೊರಟುಹೋದ ಬಳಿಕ ಫಕೀರನು ಪುನಃ ಕಣ್ಣು ವ ಎಚ್ಚಿ ಕೊಂಡು ಧ್ಯಾನದಲ್ಲಿ ಮಗ್ನನಾಗಿದ್ದನು. ಸ್ವಲ್ಪ ಹೊತ್ತಾದ ಬಳಿಕ ಕಣ್ಣು ತೆರೆದು ನೋಡಿದನು. ಬಹುಸಂಖ್ಯೆ ಮುಸಲಮಾನ ಸೈನ್ಯದವರು ಕೃಷಿಕಯು ವಕನಿಗೆ ಕೈಕೋಳವನ್ನು ತೊಡಿಸಿ ಹಿಡಿದುಕೊಂಡು ಮಂದಿರದ ಬಳಿಗೆ ಬಂದರು. ಸೈನ್ಯಕ್ಕೆ ನಾಯಕನಾಗಿದ್ದ ಅಫಜುಲಖಾನನನ್ನು ಸಂಬೋಧಿಸಿ, ಫಕೀರನು, “ ನೀವು ನನ್ನನ್ನು ರಾಜದ್ರೋಹಿಯೆಂದು ಶಿಕ್ಷಿಸುವುದಕ್ಕೆ ಬಾದಷಹನ ಬಳಿಗೆ ಕರೆದುಕೊಂಡು ಹೋಗಲು ಬಂದಿರುವುದನ್ನು ನಾನು ಬಲ್ಲೆ ನು. ಹೊರಡಿಬಲಪ್ರಕಾಶದಿಂದ ಪ್ರಯೋಜನವಿಲ್ಲ, ನಾನೇ ಸಿದ್ದವಾಗಿದ್ದೇನೆ.೨೨ ಎಂದು ಹೇಳಿದನು. ಅಫಜುಲನು ತನ್ನ ಅನುಚರರನ್ನು ಕುರಿತು, “ ಈ ಕಾಫರ ಫಕೀರನ ಕಿವಿ ಗಿನಿದಾದ ನುಡಿಗಳನ್ನು ಕೇಳಿ ಮೋಸಹೋಗಬೇಡಿರಿ, ಇವನಿಗೂ ಸಂಕೋಲೆ ಗಳನ್ನು ತೊಡಿಸಿರಿ” ಎಂದು ಹೇಳಿದನು. ಫಕೀರನು ನಗುತ ತಾನಾಗಿಯೇ ಮುಂದಾಗಿ ಬಂದು ಕೊಳವನ್ನು ತೊಡಿಸಿಕೊಳ್ಳುವುದಕ್ಕೆ ಕೈನೀಡಿದನು. ಏ ಳ ನ ಯ ಸ ರಿ ಚೇ ದ . ಪ್ರಭಾತದಲ್ಲಿ ಅಜJಾರನಗನದಲ್ಲಿ ಬಾದಷಹನ ದರಬಾರು, ರಾಚಪ್ಪ ಸಾದದ ಮುಂದುಗಡೆ ದರಬಾರಿನ ಮಹಲು ಅಲಂಕರಿಸಲ್ಪಟ್ಟಿದೆ, ಬಿಳೀ ಶಿಲೆ ಯಿಂದ ನಿರ್ಮಿತವಾದ ವಿಶಾಲವಾದ ಸ್ವಂಭರಾಶಿಯು ಕಾಂತಿಮಯವಾದ ಮಣಿಮುಕ್ತಾಭರಣಗಳಿಂದ ಶೋಭಿತವಾಗಿದೆ. ಅದರ ಮೇಲುಗಡೆ ವಜ್ರಗಳ ಗೊಂಚಲುಗಳಿಂದ ಖಚಿತವದ ಚಂದ್ರಾ ತಪಗಳು ಲಂಬಾಯಮಾನವಾಗಿವೆ. ನೋಡಿದರೆ ನಕ್ಷತ್ರಗಳಿಂದ ಮಂಡಿತವಾಗಿದ್ದ ಗಗನತಲವನ್ನು ಮುಟ್ಟಿ ಪ್ರಕಾಶ ಮಾನವಾದ ಮುತ್ತು ಹೂವಿನ ಮರವು, ಪದ್ಮರಾಗದ ಪುಷ್ಪಗಳಿಂದಲೂ ಅಯ