ಪುಟ:ಕೋಹಿನೂರು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1ಳಿ ಕೊಹಿನುರು ಸ್ಟಾರತದ ಪಲ್ಲವಗಳಿಂದಲೂ ಕೂಡಿದ ಕೊಂಬೆಗಳನ್ನು ಹರಡಿಕೊಂಡು ನಿಂತಿದ್ದ ಹಾಗೆ ತೋರುವುದು, ಮಧ್ಯದಲ್ಲಿದ್ದ ರತ್ನ ಸಿಂಹಾಸನಕ್ಕೆ ಕೆತ್ತಿದ್ದ ವಜ್ರಗಳು ಸೂರ್ಯಕಿರಣದಲ್ಲಿ ಪ್ರತಿಫಲಿತವಾಗಿ, ಮುತ್ತು ಖಚಿತವಾದ ಸ್ತಂಭಗಳ ಮೇಲಿದ್ದ ಮಣಿಮಯವಾದ ಚಂದ್ರಾತಪದ ತಲದಲ್ಲಿಯೂ ಸೇರಿದ್ದ ಸಭಾಸದರ ಉಷ್ಠಿ ಡೆಗಳಮೇಲೆಯೂ ವಿವಿಧವರ್ಣದ ಕಾಂತಿಯನ್ನು ಬೀರುತ್ತಿದ್ದವು, ದರಬಾರಿನ ಉಭಯಪಾರ್ಶ್ವಗಳಲ್ಲಿ ಯೂ ಸಮನಾದುಡುಪುಗಳಿಂದ ಶೋಭಿಸುತ್ತ ಉಸಿರಾಡ ದಿಲ ಮಿಸಕಾಡದೆಲೂ ಸೇನೆಯ ದಳವು ಚಿತ್ರದಲ್ಲಿ ಬರೆದಿದ್ದ ಹಾಗೆ ನಿಂತಿದ್ದಿ ತು. ಕಿತ್ಯ ಸಿಂಹಾಸನವು ಶೂನ್ಯವಾಗಿದ್ದಿತು. ಬಾದಷಹನು ಬಂದಿರಲಿಲ್ಲ. ಆ ಬಹು ಸಂಖ್ಯಕ ಸೇನೆಯ ದಳದವರೂ ಉಮಾಗಳೂ, ಬಾದಷಹನ ಆಗಮನವನ್ನು ನೀರವವಾಗಿ ನಿರೀಕ್ಷಿಸಿಕೊಂಡಿದ್ದಾರೆ. ಕಾವಲಿನವರ ಕಾವಲಲ್ಲಿದ್ದ ಕೃಷಿಕ ಯುವಕನು ಒಂದು ಪಾರ್ಶ್ವದಲ್ಲಿ ಮುಸಲಮಾನ ಫಕೀರನಬಳಿ ನಿಂತು, ಬಾದಷ ಹನ ವಿಚಿತ್ರವಾದ ದರಬಾರನ್ನು ನೋಡುತ್ತಿದ್ದನಲ್ಲದೆ, ಗಂಭೀರವಾದ ಮೂರ್ತಿ ಯನ್ನು ತಾಳ್ಳು ಸುವರ್ಣದೆ ಉತ್ಥ ಷಧಾರಿಗಳಾಗಿ ದಂಡೆಯಾದ ದಾಡಿಗಳಲ್ಲಿ ಕೈಬೆರಳಗಳನ್ನಿಟ್ಟು ಸಿಕ್ಕಿ ಬಿದ್ದಿದ್ದ ಕೂದಲನ್ನು ಬಿಡಿಸಿ ಸರಿಮಾಡಿ ನೀವಿಕೊಂಡು ತಮ್ಮ ತಮ್ಮ ಪದವಿಯ ಗರ್ವಕ್ಕೆ ತಕ್ಕ ಹಾಗೆ ಹಾಳಿತವಾಗಿ ದಿಟ್ಟದಿಂದ ನೀಟಾಗಿ ಕುಳಿತು ಮೌನವನ್ನು ತಾಳಿದ್ದ ಸಭಾಸದರ ಮಖಮಂಡಲವನ್ನು ದೃಷ್ಟಿಸಿನೋಡಿ ಡನು, ವಿಸ್ತೀರ್ಣವಾಗಿದ್ದ ಸಭಾಮಂಟಪದಲ್ಲೊಬ್ಬನಾದರೂ ಹಿಂದುವಾದ ವನು ಕುಳಿತಿರಲಿಲ್ಲ. ಇದ್ದಕ್ಕಿದ್ದ ಹಾಗೆ ನೀರವವಾಗಿದ್ದಾ ಸಭಾಮಂಡಲವನ್ನು ಕಡೆದು, ಒಮತಡವೆ ಮಾತ್ರ, ಸಮಸ್ವರದಲ್ಲಿ “ ಅಲ್ಲಾ ಅಖಬರ್ !” ಎಂದು ಗಂಭೀರವಾದ ಶಬ್ದವೊಂದೆದ್ದಿತು. ಆ ಶಬ್ದದೊಂದಿಗೆ ಸೈನ್ಯದಳದವರೂ ಉಮಾಗಳೂ ಒಂದೇ ತಡವೆಗೆದ್ದು ಒಟ್ಟಾಗಿ ಬೊಗ್ಗಿ ನೆಲವನ್ನು ಮಟ್ಟಿ ವಂದನೆ ಯನ್ನು ಮಾಡಿದರು. ಬಳಿಕ ಒಂದು ನಿಮಿಷದಲ್ಲೇ, ಸಭಾಸ್ಥಳವು ಪುನಃ ನೀರನವಾಯಿತು. ಕೃಷಿಕನು ನೋಡುತ್ತಿದ್ದ ಹಾಗೆ, ಮಹಾರ್ಘ ರತ್ನರಾಜಿ ಮಂದ ಭೂಷಿತನಾಗಿಯೂ ಗಿಡ್ಡನಾಗಿಯೂ ಇದ್ದ ಸಾಮ್ರಾಜನೊಬ್ಬನೇ ನಗುಮುಖನಾಗಿ ಮೌನವಾಗಿ ಬಂದು ರತ್ನ ಸಿಂಹಾಸನದ ಮೇಲೆ ಕುಳಿತು ಕೊಂಡು, ಅವರಂಜೇಬನು ಮುಹೂರ್ತ ಮಾತ್ರ ನನವಾಗಿದ್ದು ಚಳ: ಕದಲದೆ ನಿಶ್ಯಬ್ದವಾಗಿದ್ದಾ ಸಭಾಮಂಡಲವು ಸೆಲೆಕೊಡುವಹಾಗೆ, ಧೀರಗಂಭೀರ