ಪುಟ:ಕೋಹಿನೂರು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಹಿನುರು ಬಾದಷಹಸು ಅಫಜುಲನನ್ನು ಪುನಃ ಕಾಲಿಂದೊದ್ದು ಹೇಳತೊಡಗಿ ಡೆನು :-“ ಏಳು, ಗುಲಾಮ ! ಎದ್ದೇಳು ! ರಾಕ್ಷಸ ಸಮಾಜದ ರಾಕ್ಷಸ ಅನುಚರ ! ಪ್ರೇತಯಜ್ಞದ ಪೂರ್ಣಾಹುತಿಯನ್ನು ಪೂರ್ತಿಗೊಳಿಸು | ಅದೋ, ಕೇಳು, ಧೂಶದಲ್ಲಿ ಹಿಂದೂಗಳ ಘೋರ ಗರ್ಜನೆಯು ಗಗನವನ್ನು ಮುಟ್ಟುತ್ತಿದೆ. ಮಹಾರಾಷ್ಟ್ರರ ಭೀಷಣ ಕೋಲಾಹಲವನ್ನೂ ರಾಜು ತಾನರ ಮೇಘ ಗರ್ಜ ನೆಗೆ ಸಮನಾದ ಹುಂಕಾರವನ್ನೂ ಸಂಚಾಬರ ಶ್ರವಣ ಭೇದಿಯಾದ ಕಲರವ ವನ್ನೂ ಹೋಗಿ, ನಿರಸ್ತ ಮಾಡಲೆತ್ನಿಸಿ ನೋಡೋಣ, ಹೊರಡು, ಕಾಫರನ ರಕ್ತದಲ್ಲಿ ಮುಸಲಮಾನರ ಜಾತಿಯ ಹರಿಗಲು ನಡಿಸೋಣ ! ಪರಿಣಾಮದಲ್ಲಿ ಹೇಗಾದರೂ ಆಗಲಿ-ಚರಿತ್ರೆ ಗ್ರಂಧಗಳಲ್ಲಿ ರಕ್ತದ ಅಕ್ಷರದಲ್ಲಿ ಅವರಂಗಜೇಬಸ ಹೆಸರು ಬರೆದಿಡಲ್ಪಡುವುದು, ಯುಗಯುಗಾಂತರದಲ್ಲಿ ಯೂ ಇತಿಹಾಸವನ್ನು ಬರೆಯುವವನು ಭಯದಿಂದ ಕಣ್ಣೀರು ತುಂಬಿದವನಾಗಿ ಅಲಂಗೀರ ಜಾದಷಹಸ ನಿಷ್ಟುರವಾದ ರಾಕ್ಷಸ ಲೀಲೆಯನ್ನು ವರ್ಣನೆ ಮಾಡುವನು. ಇನ್ನೂ ರು ವರ್ಷಗಳ ತರುವಾಯು ದೂರ ದಕ್ಷಿಣದಲ್ಲಿ ಮೈಸೂರು ರಾಷ್ಟ್ರದಲ್ಲಿ ಜಿ. ವೆಂಕಟಾಚಾರ್ಯನೆಂಬೊಬ್ಬ ಬ್ರಾಹ್ಮಣ ಕವಿಯು ಮೈಗುಡಿಗಟ್ಟಿ ಕಣ್ಣೀರು ಸುರಿಸಿಕೊಂಡು ಅವರಂಗಷಯನ ಹೆಸರಿನಲ್ಲಿ ಒಂದು ಚಿಕ್ಕ ಆಖ್ಯಾಯಿಕೆಯನ್ನು (Novelette) ಬರೆದಿಡುವನು ! 99 ಗಗಸ ಒ೦ ಭತ್ತ ನೆ ಯ ಪ ರಿ ಜೈ ದ. ಸಾಯಂಕಾಲಕ್ಕೆ ಮೊದಲು ಕೃಷಿಕನು ಅರಾವಳಿಗಿರಿದು ಕಿಬ್ಬಿಯಲ್ಲಿ ಒಬ್ಬೊಂಟಿಗನಾಗಿ ಕುಳಿತು ಚಿಂತೆಯಲ್ಲಿ ಮಗ್ನನಾಗಿದ್ದನು. ರಾಠೋರ ಸೇನಾ ಪತಿ ದುರ್ಗಾದಾಸರು ಪರ್ವತದಮೇಲೆ ಸಮತಲ ಭೂಮಿಯಲ್ಲಿರುತ್ತಿದ್ದ ಕೆಂದು ಕೇಳಿದ್ದನು, ಆದರೆ ಅಲ್ಲಿಗೆ ಹೋಗುವುದಕ್ಕೆ ಹಾದಿಯ; ಗೊತ್ತಿಲ್ಲ ಸ್ವಲ್ಪ ಹೊತ್ತಿನಲ್ಲೊಬ್ಬ ಕುದುರೆ ಸವಾರನು ಅವನಿದ್ದ ಸ್ಥಳಕ್ಕೆ ಬರುತಿದ್ದುದನ್ನು ನೋಡಿ ದನು, ಬರುತ್ತ ಸವಾರನು ಹಾಡುತ್ತ ಬಂದನು ದುರ್ಗಕ್ಕೆ ಹೋಗುವ ಹಾದಿ ಯನ್ನು ಕೇಳಿ ತಿಳಿಯಲು ಯುವಕನು ಬರುತಿದ್ದ ಸವಾರನಿಗೆದುರಾಗಿ ಹೋಗಿ