ಒಂಭತ್ತನೆಯ ಪರಿಚ್ಛೇದ ನಿಂತನು. ಆಗಂತುಕನು ನಗುಮೊಗನಾಗಿ, “ ನಾನು ನಿನ್ನ ನೋ ಹುಡುಕುತ್ತ ಬರುತಿದ್ದೆನು, ನೀನು ಬಾದಷಹನ ಸೆರೆಮನೆಯಿಂದ ಬಿಡುಗಡೆಯಾಗಿ ಇಲ್ಲಿಗೆ ಬರ:ತಿದ್ದೆ ಯೆಂದು ಮೊದಲೇ ತಿಳಿದಿದ್ದೆ ನು. ನಿನಗೆ ನನ್ನ ಗುರುತಿಲ್ಲವೆಂದು ತೋರುತ್ತದೆ. ನೀನು ಸ್ವಲ್ಪ ಹೊತ್ತು ಇಲ್ಲಿ ನಿಂತಿದ್ದರೆ ಕೂಡಲೇ ಬರುವೆನು ೨೨ ಎಂದು ಹೇಳಿದನು, ಕೃಷಿಕನು ನೋಡುತಿದ್ದ ಹಾಗೆ ಆಗಂತುಕನು ಸ್ವಲ್ಪ ದೂರ ಹೋಗಿ ತನ್ನು ಡುಪನ್ನು ಮಾರುಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದನು. ಅವನ ಸೈನಿಕ ವೇಷವು ಕಳಚಿ ಬಿದ್ದು ನಾರಿಯ ಉಡುಪು ಕಂಡುಬಂದಿತು ! ಕಬ್ಬಿಣದ ಕವಚವು ವಕ್ಷದಿಂದ ಸರಿದು ಅದಕ್ಕೆ ಬದುಲಾಗಿ ರವಿಕೆಯಿಂದ ಬಿಗಿದು ಕಟ್ಟಿದ್ದ ಉಬ್ಬಿದೆ ದೆಯಮೇಲೆ ಮುತ್ತಿನಹಾರವು ಹರಿದಾಡುತಿತ್ತು, ಕಟಿಬಂಧದಿಂದ ಕತ್ತಿಯು ಸರಿದು ಬಿದ್ದು ಚಿನ್ನ ದೊಡ್ಯಾಣವು ಕಳಿಸಿತು. ಚರ್ಮದ ಪಾದುಕೆಯು ಕಾಲಿಂದ ದೂರ ಕಳಚಿ ಬಿದ್ದು ಚರಣದಲ್ಲಿ ಗೆಜ್ಜೆ ನಾಡಗವು ಶಬ್ದ ಮಾಡಿತು. ಇದ್ದಕ್ಕಿದ್ದಹಾಗೆ ಪಗಡಿಯಿಂದ ಕೇಶಪಾಶವು ಹೊರಗೆ ಹೊರಟು ಚಂದ್ರವದನ ವನ್ನೂ ನೀಲೋತ್ಪಲದಂತಿದ್ದ ಕಣ್ಣುಗಳನ್ನೂ ಉಬ್ಬಿದೆದೆಯನ್ನೂ ಆಲಿಂಗನ ಮಾಡಿ ಹಿಂಭಾಗದಿಂದ ಹರಿದು ಸ್ಥಳಕಮಲಗಳೆರಡರಮೇಲೂ ಬಿದ್ದು ಹಾರಾ ಡಿತು. ಹಾ ! ಎಂತಹ ಚಿತ್ರ ! ಆ ಮಸೀಮಯವಾದ ಮೇಘದ ಮೇಲೊ ಪ್ಪಿದ್ದಾ ದಿವ್ಯ ಚಂದ್ರನನ್ನು ಕೃಷಿಕನು ಮತ್ತೊಂದು ತಡವೆ ನೋಡಿದ್ದನಲ್ಲವೆ ! ಸ್ವಪ್ತ ದಲ್ಲಿ ಕಂಡಿದ್ದ ಸ್ವರ್ಗಲೋಕದ ರಮಣಿಯ ನಿರ್ಜನವಾದ ಸಮಭೂಮಿ ಯಲ್ಲಿ ಯೂ ಕಾಳಿಂದಿ ನದಿಯ ತೀರದಲ್ಲಿ ಸ್ಪಷ್ಟ ದಲ್ಲಿ ಯೂ ಚಾಗ್ರತಾವಸ್ಥೆ ಯಲ್ಲಿ ಯೂ ನೋಡಿದ್ದಾ ಹೆಣ್ಮಣಿಯೂ ಇವಳೇ ಅಹುದಲ್ಲವೆ ! ಅದೇ ಮೋಹಿನಿಮೂರ್ತಿ ! - ರಮಣಿಯು ಲೀಲಾಜಾಲವಾಗಿ ಎದುರಿಗಿದ್ದ ಶಾಲ್ಮಲಿಯ ಮರದ ಎತ್ತರ ವಾದ ಕೊಂಬೆಯಮೇಲೆ ಹತ್ತಿ ತನ್ನ ಸೈನಿಕ ಉಡುಪನ್ನು ಆ ಕೊಂಬೆಗೆ ಕಟ್ಟಿ ವ.ರದಿಂದಿಳಿದು ಕೃಷಿಕನ ಬಳಿ ಬಂದು ನಿಂತು ನಗುನಗುತ, < ಈಗ ನನ್ನ ನ್ನು ಗುರ್ತಿಸುವಿಯಾ ? ಹೇಳು, ನೋಡೋಣ, ನಾನಾರು ? ಎಂದು ಕೇಳಿದಳು ತಾವು ಅದೇ ಸುರಲೋಕದ ಸುಂದರಿ ! 99
ಪುಟ:ಕೋಹಿನೂರು.djvu/೫೩
ಗೋಚರ