: ಕೋಹಿಸುರು ಕೃಷಿಕನಾ ನಿರರ್ಥಕವಾದ ಉದ್ಯಮದಿಂದ ನಿವೃತ್ತನಾಗಬಹುದೇ ಎಂದು ಯೋಚಿಸುತಿದ್ದ ಹಾಗೆ ಮಂದಿರದ ಮೇಲಣ ಅಂತಸ್ತಿನಿಂದ ಒಂದು ಗುಲಾಬಿಯ ಹೂವು ಅವನೆದೆಯಮೇಲೆ ಬಿದ್ದಿತು. ಕೃಷಿಕನು ತಲೆಯೆತ್ತಿ ಮೇಲೆ ನೋಡಿ' ದನು, ಮಂದಿರದ ಮೇಲಂತಸ್ತಿ ನೋಂದು ಪಾರ್ಶ್ವದಲ್ಲಿ ನಿಂತಿದ್ದ ವಿಲಾಸಕು ಮಾರಿಯು ಬಾಯಿಯನ್ನು ಸೆರಗಿನಿಂದ ಮುಚ್ಚಿ ಕೊಂಡು ನಗುತ್ತ ಸಂಜ್ಞೆಯಿಂದ ಕೊಡಗಲ್ಲಿಗೆ ಉತ್ತರದ ಕಡೆ ತೋರಿಸಿದಳು. ಕೃಷಿಕನು ಶೃಂಗಕ್ಕೆ ಉತ್ತರ ದಿಕ್ಕಿಗೆ ಹೋಗಿ ನೋಡಲಾಗಿ ಅತ್ತ ಮೇಲಕ್ಕೆ ಹತ್ತುವುದಕ್ಕೆ ಅಷ್ಟು ಕಡಿದಲ್ಲದ ದಾರಿಯು ಕಂಡಿತು, ಮನಸ್ಸಿನಲ್ಲಿ ಯೇ ವಿಲಾಸಕುಮಾರಿಗೆ ವಂದಿಸಿ ಸ್ವಲ್ಪ ಹೊತ್ತಿನಲ್ಲೇ ಜಾವಟೆಯ ಹತ್ತಿರ ಹೋದನು. ವಿಜಯಪಾಲನು ಮನಸ್ಸಿನಲ್ಲಿ, ಸೈನಿಕ ಯುವಕನು ನಿರಾಶನಾ ಕೈಲಾಗದೆ ಬೆಪ್ಪ ಮೊರೆ ಬಿದ್ದು ಸರು ಕೊಂಡು ಹೋದನೆಂದು ತಿಳಿದುಕೊಂಡನು. ಆದರೆ ಇದ್ದಕ್ಕಿದ್ದಹಾಗೆ ನಾಲ್ಕು ಕಡೆಯಲ್ಲಿ ಯ ಗದ್ದಲವಾದುದನ್ನು ಕೇಳಿ ತಲೆಯೆತ್ತಿ ಮೇಲೆ ನೋಡಿದನು. ಸೈನಿಕನು ಬಾವಟೆಯ ಹತ್ತಿರ ನಿಂತಿದ್ದು, ವಿಜಯದಾಲನು ಕ್ರೋಧದಿಂದಲೂ ಅಭಿಮಾನದಿಂದ ಕರೆಯನ್ನು ಚಬುಕಿನಿಂದ ಹೊಡೆದು ಬೆಟ್ಟವನ್ನು ಹತ್ತು ವುದಕ್ಕೆತ್ತಿ ಸಿದನು, ಪುನಃ ಗದ್ದಲವಾಯಿತು- ಮೇಲಿದ್ರ ಸೈನಿಕ ಯುವಕರು, * ಇದೋ, ನೋಡಿ, ಧ್ವಜಪಟವು ನನ್ನ ಕೈಯಲ್ಲಿದೆ ! !” ಎಂದು ಕೂಗಿ ಕೇಳಿದನು ವಿಜಯಪಾಲನ ಕುದುರೆಯು ಕಾಲೆಡವಿಬಿದ್ದ ಶಬ್ದವಾಯಿತು. ಸ್ಕೂಲ ಕಾಯನಾಗಿದ್ದ ವಿಜಯಪಾಲನು ಆತ್ಮರಕ್ಷಣೆಗೆಸಲುವಾಗಿ ಪ್ರಾಣಭಯದಿಂದ ಎರಡು ಕೈಗಳಿಂದ ಒಂದು ತುಂಡು ಬಂಡೆಯನ್ನು ಕಟ್ಟಿ ಕೊಂಡನು ! ನಾಲ್ಕು ಕಡೆಯಲ್ಲಿಯೂ ಚಪ್ಪಳಿ ತಬ್ಬವೂ ನಗುವಿನ ಕೋಲಾಹಲವೂ ಎದ್ದುವು. -- ಮೂ ರ ನ ಯ ಸ ರಿ ೬ ದ. ರಕ್ತಪತಾಕವನ್ನು ಕೈಯ್ಯಲ್ಲಿ ಹಿಡಿದುಕೊಂಡು ಪ್ರಫುಲ್ಲ ವದನವುಳ್ಳ ತರುಣ ಸೈನಿಕನು ರಮಣಿಗಳೆದುರಿಗೆ ನಿಂತಿದ್ದು, ರಾಜಕುವರಿ ಅಂಬಾರಿ ಕೆಯ ಕೈಯಲ್ಲಿ ಒಯಮಾಲೆ-ರಾಟಮಹಿಷಿ ಅತುಂಧತಿಯು ಮಾಲೆಯನ್ನು
ಪುಟ:ಕೋಹಿನೂರು.djvu/೬೪
ಗೋಚರ