ಪುಟ:ಕ್ರಾಂತಿ ಕಲ್ಯಾಣ.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೬೧


“ಅಹುದು, ಕಲ್ಯಾಣ ಮಹಾನಗರವಾದರೂ ಆ ಹೆಸರಿನ ಇಬ್ಬರು ಮಹಾತ್ಮರನ್ನು ತಳೆದಿರುವುದು ಸಾಧ್ಯವಲ್ಲ. ಈಗ ನೀನು ಹೋಗಬಹುದು.”

ಕಾರ್ಯಕರ್ತನು ವಂದಿಸಿ ಅಲ್ಲಿಂದ ಸರಿದಮೇಲೆ ಮಂಚಣ ತನ್ನ ವೃದ್ಧ ಪತ್ನಿಯನ್ನು ಕರೆದು, “ಪೂಜೆಗೆ ಕುಳಿತುಕೊಳ್ಳುವ ಮೊದಲು ನಾನು ಪುನಃ ಸ್ನಾನಮಾಡಬೇಕು,” ಎಂದನು.

“ಏಕೆ? ನೀವು ಸ್ನಾನಮಾಡಿ ಒಂದು ಗಳಿಗೆ ಕೂಡ ಮುಗಿದಿಲ್ಲ !"

"ಸ್ನಾನ ಮಾಡಿದ ಕೂಡಲೆ ಪೂಜೆಗೆ ಕುಳಿತಿದ್ದರೆ ಸರಿಯಾಗುತ್ತಿತ್ತು. ವಿಶ್ರಾಂತಿಗಾಗಿ ಇಲ್ಲಿಗೆ ಬಂದದ್ದರಿಂದ ಮನಸ್ಸು ದೇಹಗಳು ಮಲಿನವಾದವು.”

“ನಿಮ್ಮನ್ನು ನೋಡಲು ಬಂದಿದ್ದವರು ರಾಜಪುರೋಹಿತ ನಾರಣಕ್ರಮಿತರಲ್ಲವೆ? ಏನು ಹೇಳಿದರು ಆ ಮಂತ್ರವಾದಿ?”

“ಕ್ರಮಿತನು ಮಂತ್ರವಾದಿಯಲ್ಲದಿದ್ದರೂ ಅವನ ಮಾತುಕಥೆ ಅಭಿಚಾರದಷ್ಟೇ ಘೋರ, ಅಪವಿತ್ರ ! ನಾನು ಹಿಂದೆ ಒಂದು ವಿಚಾರ ಹೇಳಿದ್ದು ನೆನಪಿದೆಯೆ ?”

-ಮಂಚಣನ ನುಡಿಯಲ್ಲಿ ವಿಷಣ್ಣತೆ ಮೂಡಿತ್ತು.
“ಯಾವ ವಿಚಾರ?”
ಗೃಹಿಣಿ ಅಚ್ಚರಿಯಿಂದ ಪ್ರಶ್ನಿಸಿದಳು.

ಸಕಾಲದಲ್ಲಿ ಶಿವನ ಕರೆ ಬಾರದೆ ಹೋದರೆ ನಾವೇ ಹುಡುಕುತ್ತ ಹೋಗಬೇಕೆಂದು. ನಾವು ಬಹುದಿನದಿಂದ ನಿರೀಕ್ಷಿಸುತ್ತಿದ್ದ ಆ ಕಾಲ ಈಗ ಸನ್ನಿಹಿತವಾಗಿದೆ. ಅದಕ್ಕಾಗಿ ಎಲ್ಲವನ್ನೂ ಸಿದ್ಧಗೊಳಿಸಬೇಕಾಗುವುದು.”

ಕೆಲವು ಕ್ಷಣಗಳು ಗೃಹಿಣಿ ಅವಾಕ್ಕಾಗಿ ನಿಂತಳು. ಅನಂತರ ಸಂಯತ ಆವೇಗದ ದೃಷ್ಟಿಯೊಂದನ್ನು ಪತಿಯ ಮೇಲೆ ಬೀರಿ, “ಆಜ್ಞೆಯಂತೆ ಎಲ್ಲಾ ಸಿದ್ಧ ಮಾಡುತ್ತೇನೆ,” ಎಂದು ಹೇಳಿ ಒಳಗೆ ಹೋದಳು.

ಮರುದಿನ ಮುಂಜಾವಿನಲ್ಲಿ ಅನುಭವಮಂಟಪದ ಪ್ರಾರ್ಥನಾಸಭೆ ಮುಗಿಯುತ್ತಿದ್ದಂತೆ ವಟುವೊಬ್ಬನು ಮಂಚಣನ ಪತ್ರವನ್ನು ಮಾಚಿದೇವರಿಗೆ ತಂದುಕೊಟ್ಟನು.

“ಯಾರು ಇದನ್ನು ತಂದವರು?”

“ಯಾರೋ ಅಪರಿಚಿತ, ಗುರುಗಳೆ. ತುಸುಹೊತ್ತು ನಿಮಗಾಗಿ ಕಾದಿದ್ದ. ನೀವು ಬರಲಿಕ್ಕ ಹೊತ್ತಾಗ್ತದ ಅಂತ ಕೊಟ್ಟುಹೋದಾನ್ರಿ.”

ಮಾಚಿದೇವರು ಕಟ್ಟು ಬಿಚ್ಚಿ ಓದಿದರು. ಮಂಚಣ ಬರೆದಿದ್ದನು :
“ದುಃಖಾತಿರೇಕದ ಕೆಟ್ಟ ಸುದ್ದಿಯೊಂದನ್ನು ನಿಮಗೆ ತಿಳಿಸುವುದು ನನ್ನ