ಪುಟ:ಕ್ರಾಂತಿ ಕಲ್ಯಾಣ.pdf/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೫೩


ಸಮಾಧಾನಕ್ಕಾಗಿ ಶಾಸ್ತಿಯ ಸುಳ್ಳು ಕಥೆ ಹೇಳಿದೆ. ನೀನು ಅನುಮತಿ ಪತ್ರವಿಲ್ಲದೆ ಮಹಾದ್ವಾರವನ್ನು ಪ್ರವೇಶಿಸಿದಾಗ ನಾನು ಭಾವಿಸಿದೆ, ರಾಜಮುದ್ರೆ ಇರಲಿ ಇಲ್ಲದಿರಲಿ, ಸಂತೆಯಲ್ಲಿ ಚಿನ್ನ ಸಲ್ಲುವುದು ಎಂದು. ಹೆಣ್ಣಿನ ಚತುರತೆ ಎಲ್ಲ ಸಂದರ್ಭಗಳಲ್ಲಿಯೂ ಉಪಯುಕ್ತವಾದ ವಸ್ತು,”

-ಎಂದು ಅಗ್ಗಳನು ನಕ್ಕನು. ಉಷಾವತಿಯೂ ನಕ್ಕಳು.
ಶಾಸ್ತಿಯ ವಿಚಾರ ಅಷ್ಟಕ್ಕೆ ಮುಗಿಯಿತು.

ಉಷಾವತಿ ತನ್ನ ಬಿಡಾರಕ್ಕೆ ಹೋಗಿ ಸ್ನಾನಾದಿಗಳನ್ನು ಮುಗಿಸಿಕೊಂಡು ಬಂದಾಗ ಅಗ್ಗಳನು ಅಲ್ಲಿರಲಿಲ್ಲ. ಹೊರಗೆ ಹೋಗಿ ನೋಡಿದಳು. ಎಲ್ಲಿಯೂ ಅವನು ಕಾಣಲಿಲ್ಲ.

ಕೊಂಚ ಹೊತ್ತಿನ ಮೇಲೆ ಅಗ್ಗಳನು ಹಿಂದಿರುಗಿ, “ಮಾಚಿದೇವರು ಹೇಳಿ ಕಳುಹಿಸಿದ್ದರು, ನೋಡಲು ಹೋಗಿದ್ದೆ. ಗಣಾಚಾರಿ ಶರಣರ ರಕ್ಷಕ ತಂಡ ಈ ದಿನವೇ ಕರ್ಹಾಡಕ್ಕೆ ಹೋಗುವುದು. ಪ್ರೇಮಾರ್ಣವನ ಸಂಗಡ ನೀನೂ ಹೋಗಬೇಕು,” ಎಂದನು.

ಉಷಾವತಿ ಹೇಳಿದಳು : “ನಾನು ಯಾವಾಗಲೂ ಸಿದ್ಧಳಾಗಿದ್ದೇನೆ. ಕುಮಾರನನ್ನು ವಿಜಯಾರ್ಕ ದೇವರಿಗೆ ಒಪ್ಪಿಸಿದರೆ ನನ್ನ ಹೊಣೆ ಪೂರೈಸುವುದು.”

“ಸಂದೇಶವನ್ನು ಓದಿದಾಗ ಪ್ರಭುಗಳೇನು ಹೇಳಿದರು?”
“ಆ ವಿಚಾರಗಳೊಂದೂ ನನಗೆ ತಿಳಿಯದು.”
“ಸ೦ದೇಶದಲ್ಲಿ ರಾಣಿಯವರು ಏನು ಹೇಳಿದ್ದರೆಂಬುದನ್ನು ತಿಳಿದಿರಬೇಕಲ್ಲವೆ?”

ಆ ವಿಚಾರ ತಿಳಿದರೂ ತಿಳಿಯದಿದ್ದಂತೆ. “ಸಂದೇಶದ ನುಡಿಗಳನ್ನು ಬಹಿರಂಗ ಪಡಿಸುವ ಸಾಮರ್ಥ್ಯ ನನಗಿರುವುದಿಲ್ಲ.”

ಕವಿಸಹಜವಾದ ಅಗ್ಗಳನ ಕುತೂಹಲ ಹಾಗೆಯೇ ಉಳಿಯಿತು.
“ಹೊರಗೆ ನಡೆಯುತ್ತಿರುವ ಧನಧಾನ್ಯ ದಾಸೋಹ ಮುಗಿಯಿತೆ?”
-ಉಷಾವತಿ ಆಸಕ್ತಿಯಿಂದ ಕೇಳಿದಳು.

“ಇನ್ನೇನು ಮುಗಿಯುತ್ತ ಬಂದಂತೆ. ಧನಧಾನ್ಯಗಳನ್ನು ಒಟ್ಟಿಟ್ಟ ಮೊಗಶಾಲೆಗಳು ಬರಿದಾಗುತ್ತ ಬಂದಿವೆ. ನಾಳೆ ಪುನಃ ಪ್ರಾರಂಭವಾಗುವುದು.”

“ದಾಸೋಹದ ಕಾರಣ?”

ಅಗ್ಗಳನು ಹೇಳಿದನು : “ಅಪರಿಗ್ರಹ, ಅಸಂಗ್ರಹ, ಇವು ಶರಣಧರ್ಮದ ಎರಡು ಆಧಾರಸ್ತಂಭಗಳು. ಯಾರಿಂದಲೂ ಏನನ್ನೂ ದಾನವಾಗಿ