ಪುಟ:ಕ್ರಾಂತಿ ಕಲ್ಯಾಣ.pdf/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೩೭೦

ಕ್ರಾಂತಿ ಕಲ್ಯಾಣ

ಸಲಹೆಯನ್ನು ತಾನು ನಿರಾಕರಿಸಿದ ಕಾರಣ.... ಆ ಅಗ್ನಿ ಕನ್ಯೆ ಕಾಮೇಶ್ವರಿ....ಹೊನ್ನರಾಶಿಯ ಮೇಲೆ ನಿಂತ ಆ ಜ್ವಲಂತಮೂರ್ತಿ....ಕಿಡಿಂಯುಗುಳುವ ಅವಳ ಕಣ್ಣುಗಳು ಆಗ ಬಿಜ್ಜಳನನ್ನು ನಿಶ್ಲೇಷಿತನನ್ನಾಗಿ ಮಾಡಿದ್ದವು.

ಬಿಜ್ಜಳನ ಚಿಂತನೆ ಪ್ರವಾಹವಾಗಿ ಹರಿದು ಸನ್ಯಾಸಿ ಹೇಳಿದ ಒಂದೊಂದು ನುಡಿಯನ್ನೂ ನೆನಪಿಗೆ ತಂದಿತು. ಐನೂರ್ವರ ಮಹಾಸಂಘ ತನ್ನನ್ನು ನಾಸ್ತಿಕನನ್ನಾಗಿ ಪರಿಗಣಿಸಿದ ಕಾರಣವೇನು? ಭುಜಬಲಚಕ್ರವರ್ತಿ, ನಿಶ್ಯಂಕಮಲ್ಲ, ಶನಿವಾರಸಿದ್ದಿ, ಈ ಬಿರುದುಗಳಿಗೆ ಅವರು ಮಾಡಿದ ಅರ್ಥ ಉಚಿತವೆ? ಬಿಜ್ಜಳನು ತನ್ನನ್ನು ತಾನೇ ಪ್ರಶ್ನಿಸಿಕೊಂಡನು. ಕಾವೇರಿದ್ದ ಅವನ ಬುದ್ದಿಜ್ವಾಲೆಯು ಉತ್ತರಕೊಟ್ಟಿತು.

ದೈವಬಲವನ್ನು ನಿರಾಕರಿಸಿ, ತನ್ನ ಪುರುಷ ಪ್ರಯತ್ನದಿಂದ ಎಲ್ಲವನ್ನೂ ಸಾಧಿಸುವ ವಿಶ್ವಾಸವುಳ್ಳವನು, ಸಾಧಿಸಿದವನು, ಭುಜಬಲಚಕ್ರವರ್ತಿ.

ಅಂಕೆಶಂಕೆಯಿಲ್ಲದೆ ಸ್ಟೇಚ್ಛೆಯಿಂದ ನಡೆಯುವವನು ನಿಶ್ಯಂಕಮಲ್ಲ. ನನ್ನ ಜೀವನದ ಎಲ್ಲ ಘಟನೆಗಳು ಇದರ ನಿದರ್ಶನ.

ಶನಿಗ್ರಹ ಸಾಧನೆಯಲ್ಲಿ ತೊಡಗಿ ಸಿದ್ದಿ ಪಡೆದವನು ಶನಿವಾರ ಸಿದ್ದಿ. ರಾಜ್ಯಾಪಹಾರದ ಸಿದ್ಧಿಗಾಗಿ ತಾನು ಪ್ರಾರಂಭಿಸಿದ ಶನಿದೇವತೆಯ ರಹಸ್ಯ ಪೂಜೆಯ ವಿಚಾರ ಐನೂರ್ವರ ಮಹಾಸಂಘಕ್ಕೆ ತಿಳಿದದ್ದು ಹೇಗೆ? ತನ್ನನ್ನು ನಾಸ್ತಿಕನೆಂದು ಹೇಳಲು ಆ ರಹಸ್ಯಪೂಜೆ ಕಾರಣವಾಗಿರಬಹುದೆ?

ಶನಿಗ್ರಹವನ್ನು ಕುರಿತ ಪುರಾಣಕಥೆ ಬಿಜ್ಜಳನ ಮನೋಭೂಮಿಯಲ್ಲಿ ಸುಳಿಯಿತು. ವಿಶ್ವಕರ್ಮನ ಮಗಳಾದ ಸಂಜ್ಞಾದೇವಿ ಸೂರ್ಯನ ಪತ್ನಿ, ವೈವಸ್ವತ, ಯಮ, ಯಮುನೆ, ಇವರು ಅವಳಿ ಮಕ್ಕಳು. ಮುಂದೆ ಅವಳು ಸೂರ್ಯನ ತೇಜಸ್ಸನ್ನು ಸಹಿಸಲಾರದೆ ತನ್ನಂತೆಯೇ ಒಬ್ಬ ಸ್ತ್ರೀ ವ್ಯಕ್ತಿಯನ್ನು ಕಲ್ಪಿಸಿ, ಅವಳನ್ನು ಸೂರ್ಯನ ಬಳಿಬಿಟ್ಟು ತಾನು ತಂದೆಯ ಮನೆಗೆ ಹೋದಳು. ಸಂಜ್ಞಾದೇವಿಯ ನೆರಳಿನಂತಿದ್ದ ಆ ಕೃತಕ ಹೆಣ್ಣಿನ ಹೆಸರು ಛಾಯಾದೇವಿ ಎಂದು. ಸೂರ್ಯನಿಂದ ಅವಳಿಗೆ ಸಾವರ್ಣಿ ಮತ್ತು ಶನೈಶ್ಚರ ಎಂಬಿಬ್ಬರು ಮಕ್ಕಳು ಹುಟ್ಟಿದರು. ಛಾಯೆಗೆ ತನ್ನ ಮಕ್ಕಳಲ್ಲಿ ಹೆಚ್ಚು ಮಮತೆಯಿತ್ತು. ಸಂಜ್ಞಾದೇವಿಯ ಮಕ್ಕಳನ್ನು ಅವಳು ಉಪೇಕ್ಷಿಸಿದಳು. ಯಮ ಇದನ್ನು ಸಹಿಸಲಾರದೆ ತಂದೆಗೆ ಹೇಳಿದ. ಧ್ಯಾನದೃಷ್ಟಿಯಿಂದ ಮೋಸ ನಡೆಯಿತೆಂದು ತಿಳಿದ ಸೂರ್ಯ, ಛಾಯೆಯನ್ನೂ ಅವಳ ಮಕ್ಕಳನ್ನೂ ತ್ಯಜಿಸಿದ. ಶನಿ ಕೋಪದಿಂದ ತಂದೆಯ ವಿರೋಧಿಯಾಗಿ ನಿಂತು, ಸೂರ್ಯ