ಪುಟ:ಕ್ರಾಂತಿ ಕಲ್ಯಾಣ.pdf/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ೩೭೫ “ಕೃತ್ಯ ನಡೆದ ಹೊನ್ನಮ್ಮನ ಚಾವಡಿಯ ಬಾಗಿಲುಮುಚ್ಚಿ ಭಟರನ್ನು ಕಾವಲಿಟ್ಟಿದ್ದೇನೆ. ಕರ್ಣದೇವರಸರು ಬರುವವರೆಗೆ ನಾವಾರೂ ಒಳಗೆ ಹೋಗುವಂತಿಲ್ಲ.” “ಕರ್ಣದೇವರಸರು!” -ಅಚ್ಚರಿಗೊಂಡವನಂತೆ ಮಾಧವ ನಾಯಕನು ಪ್ರಶ್ನಿಸಿದನು. “ಅಹುದು. ಅವರೇ ಈಗ ಕಲ್ಯಾಣದಲ್ಲಿರುವ ಪ್ರಭುಗಳ ಬಂಧು.” -ಹೆಗ್ಗಡೆ ಉತ್ತರ ಕೊಟ್ಟನು. ಮಾಧವ ನಾಯಕನು ಕೆಲವು ಕ್ಷಣಗಳು ಯೋಚಿಸುತ್ತಿದ್ದು, “ಹೊನ್ನಮ್ಮನ ಚಾವಡಿಯೆಂದರೆ ಎಲ್ಲಿ? ಅದು ಅರಮನೆಯ ಒಂದು ಭಾಗವೆ?” ಎಂದು ಕೇಳಿದನು. “ಸರ್ವಾಧಿಕಾರಿ ಚಾವಡಿಗೆ ಅದು ಇನ್ನೊಂದು ಹೆಸರು. ವಾರಕ್ಕೆ ಮೊದಲು ಅಲ್ಲಿ ನಡೆದ ಒಂದು ಘಟನೆಯಿಂದಾಗಿ ಪರಿವಾರದ ಜನ ಈಗ ಆ ಚಾವಡಿಯನ್ನು ಆ ಹೆಸರಿಂದ ಕರೆಯುತ್ತಾರೆ.” ಘಟನೆಯೇನೆಂದು ಮಾಧವ ನಾಯಕನು ಪ್ರಶ್ನಿಸಲಿಲ್ಲ. ನಾರಣ ಕ್ರಮಿತನ ಮುಖಾಂತರ ಅವನಿಗೆ ಆ ವಿಚಾರ ತಿಳಿದಿತ್ತು. ಈ ಮಾತುಗಳು ನಡೆಯುತ್ತಿದ್ದಂತೆ ಮೇನೆಯೊಂದು ಅಲ್ಲಿಗೆ ಬಂದಿತು. ಕರ್ಣದೇವನು ಕೆಳಗಿಳಿದು, “ಹೆಗ್ಗಡೆಯೆಲ್ಲಿ?” ಎಂದು ಭಟರನ್ನು ಪ್ರಶ್ನಿಸಿದನು. ಹೆಗ್ಗಡೆ ಕೈಮುಗಿದು ತಲೆಬಾಗಿ ಎದುರಿಗೆ ನಿಂತನು. ಅವನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ಮಾಧವ ನಾಯಕನ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರ ಕೊಟ್ಟ ಹೆಗ್ಗಡೆ, ಕರ್ಣದೇವನ ಎದುರಿಗೆ ಮಾತಾಡಲೂ ಅಶಕ್ತನಾದನು. ಅದರ ಕಾರಣವಿಷ್ಟೆಪ್ರಭುಶೃತ್ಯರ ಆತ್ಮೀಯತೆಯಲ್ಲಿ ಕರ್ಣದೇವನಿಗೆ ಒಂದು ಸ್ಥಾನವಿತ್ತು. ಮಾಧವ ನಾಯಕನು ಅದಕ್ಕೆ ದೂರವಾಗಿದ್ದನು. ಜಗತ್ತಿನ ದೃಷ್ಟಿಯಿಂದ ಕರ್ಣದೇವ ಚತುರನಲ್ಲದಿದ್ದರೂ ಹೆಗ್ಗಡೆಯ ದುಃಖದ ಕಾರಣವನ್ನು ಸುಲಭವಾಗಿ ಅರ್ಥಮಾಡಿಕೊಂಡರು. ಸಹಾನುಭೂತಿಯಿಂದ ಹೆಗ್ಗಡೆಯ ಬೆನ್ನುತಟ್ಟಿ “ಅಳಬೇಡಿರಿ, ಹೆಗ್ಗಡೆಗಳೆ. ಅಣ್ಣನವರೆಲ್ಲಿದ್ದಾರೆ ತೋರಿಸಿರಿ,” ಎಂದು ಹೇಳಿ ಮಾಧವ ನಾಯಕನ ಕಡೆ ತಿರುಗಿ, “ನೀವೂ ಸಂಗಡ ಬನ್ನಿರಿ, ದಂಡ ನಾಯಕರೆ” ಎಂದನು. ಹೆಗ್ಗಡೆ ಅವರಿಬ್ಬರನ್ನೂ ಸರ್ವಾಧಿಕಾರಿ ಚಾವಡಿಗೆ ಕರೆದುಕೊಂಡು ಹೋಗಿ