ಪುಟ:ಗಿಳಿವಿಂಡು.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

99

  • ಉ ಮ ರ್

ಖ ಯಾ ಮ್ » ಕ್ರಿ. ಶ ೧೨ನೆಯ ಶತಕದಲ್ಲಿದ್ದ ' ಉಮರ್ ಖಯ್ಯಾಮ್' (Omar Khayyam)ಎಂಬೊಬ್ಬ ಪಾರಸೀಕ ಕವಿಯ ರುಬಾಯಿಯಾತ್! (Rabalyat) ಎಂಬ ಲೋಕ ಪ್ರಿಯವಾದೊಂದು ಕವಿತೆ ಇದ. ' ರುಬಾ ಯಿಯಾತ್ ' ಎಂಬುದು ' ರುಬಾಯಿ' (Rabai) ಎಂಬ ಅರಬೀ ಶಬ್ದದ ಬಹುವಚನವು, ' ರುಬಾಯಿ' ಎಂದರೆ ಈ ಕ-ಕ-ಖ-ಕ • ಎಂಬಂತೆ ಅಂತ್ಯಾಕ್ಷರ ಪ್ರಾಸವುಳ್ಳ ಒಂದು ಬಗೆಯ ಚೌಪದಿಯ ಹೆಸರಷ್ಟ: ಈ ಕವಿತೆ ಆ ಚೌಪದಿಯಲ್ಲಿ ರಚಿಸಲ್ಪಟ್ಟಿದೆ ಅದನ್ನು Fitzgerald ಎಂಬೊಬ್ಬ ಆಂಗ್ಲ ಕವಿ ನಾಲ್ಕು ಸಲವೇನೋ ಇಂಗ್ಲಿಷು ಭಾಷೆಯಲ್ಲಿ ಪರಿವರ್ತಿಸಿದನು. ಈ ಕನ್ನಡ ಅನುವಾದದಲ್ಲಿ ಆತನ ಆಂಗ್ಲ ಭಾಷಾಂ ತರದ ಪ್ರಥಮಾವೃತ್ತಿಯನ್ನು (ಕ್ರಿ. ಶ. 1859) ಅನುವರ್ತಿಸಿ, ಅದರಲ್ಲಿಯ ೭೫ ಪದ್ಯಗಳ ಮೊತ್ತದಿಂದ ೫೦ನ್ನಷ್ಟೆ ಆಯ್ತು ಕನ್ನಡಿಸಿದೆ. ಈ ಮನೋಹರವಾದ ಕವಿತೆಯಲ್ಲಿಯ ಹಲ ಮಾತುಗಳು ಅಸಭ್ಯ ವೆಂದು ತೋರಬಹುದು; ಆದರೆ ಹಾಗಲ್ಲ, ಅವು ಲಾಕ್ಷಣಿಕ ಪದಗಳಷ್ಟ. ಅವು ಕವಿಸಮಯಾನುಸಾರವಾಗಿ ವ್ಯಂಗ್ಯಾರ್ಥದಲ್ಲಿ ಪ್ರಯೋಗಿಸಲ್ಪಟ್ಟಿವೆ; ಅವುಗಳ ಅರ್ಥವು ಹೀಗಿದೆ (೧) ಕಳ್ಳು, ಮದಿರೆ, ಮಧು, ದ್ರಾಕ್ಷೆ, ಇತ್ಯಾದಿ-ಪರಮಾತ್ಮನಲ್ಲಿ ಅನನ್ಯ ಭಕ್ತಿ, ಅಥವಾ ದಿವ್ಯಜ್ಞಾನ; (೨) ತಿಳಿ, ಬಿಂದಿಗೆ, ಕುಡಿಕೆ, ಕೊಡ, ಇತ್ಯಾದಿ=ಮನುಷ್ಯನ ಹೃದಯ; (೩) ಕಳ್ಳಂಗಡಿ=ದೇವರನ್ನು ಸಾಧಿಸ ಲಿಕ್ಕೆ ಬೇಕಾದ ಏಕಾಂತತೆ, ಅಥವಾ ದೇವರನ್ನು ಅನನ್ಯಭಾವದಿಂದ ಸಾಧಿಸುವವರ ಒಡನಾಟ; (೪) ಕೋಳಿ=ಮನಸ್ಸಾಕ್ಷಿ, ಅಥವಾ ಹೃದ ಯದ ಜಾಗೃತಿ; (೫) ಇನಿಯೆ, ಅರಸಿ, ಸಜ್ಜೆ, ಇತ್ಯಾದಿ=ಮಾರ್ಗ ದರ್ಶಕ, ಗುರು ಅಥವಾ ಸಹಕಾರಿ; (೬) ಮಧುಮಾಸ, ಸುಗ್ಗಿ=ಜೀವನ ಸಾರ್ಥಕ್ಯವನ್ನು ಮಾಡಿಕೊಳ್ಳತಕ್ಕ ಕಾಲ; (೭) ಕುಂಬಾರನ ಅಂಗಡಿ= ಈ ಜಗತ್ತು; (೮) ಮ ಡಲು (ಮಣ್ಣಿನ ಪಾತು)=ಮನುಷ್ಯನೇ ಮೊದಲಾದ ಜೀವಿಗಳು; (೯) ಮತಿ (ಬುದ್ದಿ) ಲೌಕಿಕ ಜ್ಞಾನವನ್ನು