ಪುಟ:ಗಿಳಿವಿಂಡು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಕಿತಳ ನಿನ್ನ ತನುವೆಂತು ? ದನಿಯೆಂತು ? ಮನೆಯೆಂತು ? ದೆಸೆದೆಸೆಯ ಸೋಸಿ ನಾ ಸೋತೆ ! ನೀ೦ ಭುವಿಯಾ ಹಾರುಹಕ್ಕಿಯೊ ? ಬರಿಯ ಕಾಣಿಕೆಯೊ ಕವಿಯಾ ? ಬಾರ, ತನಿ ಬಾನಹನಿ ಬಸಿದೆಸೆಯ ಬಂತು !' - * ಹೊರಗೆನ್ನರಸುವರೆ, ಮರುಳೆ ? ನಿನ್ನೊಳಗೆ ಮರೆಯನ್ನ | ಹೊರಹಕ್ಕಿಯಲ್ಲಿ ನಾನರಿಯಾ ? ನಿನ್ನೆದೆಯ ಮುಸುಕಿ ಮನನಂ ಮಸೆದು ಮೊಳಗೆ, ಕನಸು ಝಲ್ಲನ ಝಳಕೆ, ಸೋರ್ವ ಸೀವರಿಯಾ ಕುಡಿದು ಕಿಲಕಿಲ ಕೆಲೆವೆ ಕ೦ರದಿಂ ಕವಿಯ ಕಿವಿಯಾರ ಕಾಂಬೆಯಂದೆನ್ನ ಮೆಚ್ಚವಿಯಾ !? _12 'ಅಯ್ದ ಯ ರ ನಿತಯ್ದು ತಯಿ ತಾ ಕಾಲ೦' ಅಯ್ದ ಯ್ದು ರನಿತಯು ತಯ್ಲಿ ತಾ ಕಾಲಂ ನಿನ್ನ ನಿನ್ನವರಂದು ನನಗಿತ್ತ ದಿನದಿಂ; ವಿಧಿ ನಿನ್ನ ತುಡುಕಳಿಂದೆನ್ನ ಬಾಳ್ತನದಿಂ ಕತ್ತಲಿಸಿತೊಡನೆ ಮುಂದಣ ಚಕ್ರವಾಲಂ | ನಿನಗಾದುದಿಲ್ಲ ನಾ, ನೀನೆ ನನಗಾದೆ ನನ್ನ ಕೆಯ್ದಿಡಿದೆ ನೀನಳಲನನುಭವಿಸೆ ! ನಿನ್ನ ಚಲುವಲಿ ಪಿಪಾಸೆಯನೆನ್ನ ತವಿಪೆ ನಿನ್ನೆದೆಯನನ್ಯ ಪ್ರೇಮವನರಿಯದಾದೆ | ಇನ್ನಾದರೆನ್ನೆದಗೆ ಪ್ರೇಮದಾ ಭಿಕ್ಷೆ ಯಕ್ಷೀಯೆ- ನೀನಲ್ಲದಾರೀವರೆನಗೆ ? ನಿನ್ನ ಪ್ರೇಮದಲಿ ನನಗಾಜೀವ ದೀಕ್ಷೆ ಯನ್ನಿಡ, ಬಾರೆದೆಗೆ, ಬಾ ನಿನ್ನ ಮನೆಗೆ ! ನಿನ್ನ ಮುಡಿಗಿಡುವೆನೀ ಕಂಬನಿಯ ಮೊಲೆ ಯೆನ್ನೆದೆಯ ಮೀಸಲಂ, ತಳೆಯಿದಂ ನಲ್ಲಿ !