ಪುಟ:ಗಿಳಿವಿಂಡು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 47 ಯುಗಾದಿಯ ನೆನಪು 12 ನಿನ್ನ ಹೆಸರಳಿದು ನೀರಾದುದಾ ಪ್ರಭವಂ ಜೀವನಸ್ಥವಮೆನ್ನ ಸಂಸ್ಥೆ ವಿಸಿ ನಿನ್ನ ! ಇಂದೆನ್ನವೀಚಿಸುವ ವೀಚಿಯೂ ವಿಭವಂ ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ! ಆ ಯುಗಾದಿಯಲಿ ನೀನೆನ್ನ ಕಣ್ಮಣಿಮೆ ಈ ಯುಗಾದಿಯಲಿ ನೀನೆಲ್ಲಿ ? ನಾನೆಲ್ಲಿ ? ನನ್ನೆದೆಯಮಾಸೆಗಿನ್ನಶು ತರ್ಪಣಮೆ

  • ಹಬ್ಬ ಮಿನ್ನೆನಗೆ ನಿನ್ನೊಡಗೂಡುವಲ್ಲಿ | ಕೊನೆಯ ತವರ್ಮನೆಗಕಟ ! ನೀ ತೆರಳುವಂದು

ತಿಂಗಳಾರರ ಮುನ್ನ ಮುಟ್ಟ ಮಡಿಸೀರೆ ಕಡೆಗಾಯ್ತ ? ಇನ್ನುಡೆಯನೆಂತೀವೆನೆಂದು ನೆನವ ನೂಲಂ ಮೀಸಲಿಡುವೆನಿದೆ ನೀರೆ ! ಸರ್ವಮಂಗಲೆ ! ಸರ್ವಶಂಗಾರವೆತ್ತು ಕೆಚ್ಚೆರಂಕದಿನೆನ್ನ ಹಚ್ಚಿ ಕುಂಕುಮವಂ, ನೆನವ ಬಾಗಿನವನೆನಗುವಿಂದ ತೆತ್ತು, ಮುಡಿದು ಮುಡಿಗೆನ್ನ ಸುರಿಕಂಬನಿಯ ಸುಮನಂ- 16 ಮದವಳಿಗೆ ಲಗ್ನವೇದಿಕೆಯಂತೆ, ಚಿತಿಯ ಪೊಗುತಗ್ನಿಯಂ ಮನ್ಮನೋರಣೆಯಿನಾಂತು, ನಮ್ಮೆಕ ಗಾರ್ಹಪತ್ಯವತವ ಸತಿಯ ಧರ್ಮದಿಂದುದ್ಯಾಪಿಸಿದೆ ನೀ ಸಮಂತು. ನಿನ್ನಯ ಚಿತಾಗ್ನಿಯಾಗಳಿನೆದೆಯೊಳೆನ್ನ

  • ಬೇಯೆ ಬಾಂಗಿನೆಯೆ ಬೈಗಿನ ಬೆಂಕಿಯಂತೆ ಮೂಡಿಂದುವಂತೆ 1 ಕರೆಯಕ್ಕರೆಯ ಜೊನ್ನ

ದುಮ್ಮನದ ಗುಮ್ಮನೆರಕೆಯಿಳುಂಕಿಪಂತೆ.