ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೨

ಗೌರ್ಮೆಂಟ್ ಬ್ರಾಹ್ಮಣ


ಇನ್ನಷ್ಟು ಹೆಚ್ಚಾಗುತ್ತಿತ್ತು. ದುಃಖಿಸುವುದು ಪ್ರಾರಂಭವಾದಾಗ ಕತ್ತಿ "ಕರ್ಕ್ಕ'ನೇ ತಲೆಯನ್ನು
ಕೊರದು ಬಿಡುತ್ತಿತ್ತು. ಅಳುವು ಇನ್ನಷ್ಟು ಹೆಚ್ಚಾದಾಗ "ಸುಮ್ಮನಾಗಲೆ" ಎನ್ನುತ್ತ
ತಲೆಯನ್ನು ಬೋಳಿಸಿದ ಭಾಗಕ್ಕೆ "ಟಂಣ್ಣ'ನೇ ಹೊಡೆತ ಬೀಳುತ್ತಿತ್ತು. ಮತ್ತೆ ದುಃಖ
ಶಿಖರಕ್ಕೆ ಏರುತ್ತಿತ್ತು. ಸಿಂಬಳ ಸೋರುತ್ತಿತ್ತು. ತಲೆ ಬೋಳಿಸುವುದು ಮುಗಿಯುವುದರೊಳಗೇ
ಸತ್ತು ಹುಟ್ಟಿದಂತಾಗುತ್ತಿತ್ತು. ತಲೆ ಬೋಳಿಸಿಕೊಳ್ಳುವುದು ಎಂದರೆ ಅಗ್ನಿ ಪರೀಕ್ಷೆಯೇ
ಸರಿ! ಸಮರದಲ್ಲಿ ಸೋತು ಗಾಯಗೊಂಡು ಬಂದ ಕೈದಿಯ ಸ್ಥಿತಿಯೇ ನಮ್ಮದಾಗಿರುತ್ತಿತ್ತು.
ಮಣ್ಣಿನೊಂದಿಗೆ ಆಡುವುದೆಂದರೆ ಚೆಲ್ಲಾಟ, ಅಲ್ಲಿಯ ಚೆಲ್ಲಾಟವೇ ಇಲ್ಲಿ ಪ್ರಾಣ ಸಂಕಟ
ತರುತ್ತಿತ್ತು. ಕತ್ತಿ ಎಷ್ಟೇ ಹರಿತವಾಗಿದ್ದರೂ, ತಲೆಯಲ್ಲಿ ಬಿದ್ದ ಮಣ್ಣಿಗೆ ಸಿಕ್ಕು
ಮೊಂಡಾಗುತ್ತಿತ್ತು.

ಒಂದು ದಿನ ಮುಂಚಿತವಾಗಿಯೇ "ನಾಳೆ ನಿಮ್ಮೆಲ್ಲರು ತಲೆ ಬೋಳ್ಳತೀನಿ"
ಎನ್ನುವ ಸೂಚನೆಯ ಮಾತು ಕೇಳಿದಾಕ್ಷಣವೇ ನಮ್ಮ ಜಂಘಾ ಬಲವೇ ಅಡಗಿ
ಹೋಗುತ್ತಿತ್ತು. "ಒಂದು" "ಎರಡಕ್ಕೆ' ಹೋದಂತೆ ಅನುಭವವಾಗುತ್ತಿತ್ತು. ಮುನ್ನವೇ
ಸಿಗುವ ಸೂಚನೆಯ ಈ ಸಂದರ್ಭವೇ ತುಂಬ ಭಯಾನಕ ಎನಿಸಿ ಬಿಡುತ್ತಿತ್ತು.
ಎಂದಾದರೊಮ್ಮೆ ನಮ್ಮ ಹಿರಿಯರು ಒಂದೆರಡು ಕಡೆಗಳಲ್ಲಿ ತಲೆ ಕಚ್ಚಾಗುವಂತೆ
ಬೋಳಿಸಿದರೆ ಅವರಿಗೆ ಹೆಮ್ಮೆಯೋ ಹೆಮ್ಮೆ!

ನನ್ನ ಅಣ್ಣಂದಿರಿಬ್ಬರೂ ಕಾಲೇಜಿಗೆ ಹೋಗುವ ದಿನಗಳು. ನಮ್ಮ ತಂದೆ (ಚಿಕ್ಕಪ್ಪ)
ಕೂದಲು ಕತ್ತರಿಸುವ ಒಂದು 'ಜೀರೋ ಮಶೀನ್" ತಂದರು ಆ ಮಶೀನ್ ಮೂಲಕ
ಕೂದಲು ಕತ್ತರಿಸಲು ನಮ್ಮ ಇಬ್ಬರೂ ಸಹೋದರರಲ್ಲಿಯೇ ಸ್ಪರ್ಧೆ. ಅವರಿಬ್ಬರ ಜಗಳವನ್ನು
ನೋಡಲು ನಮಗೆ ಮೋಜು ಎನಿಸುತ್ತಿತ್ತು. ತಂದೆಯವರು ಅದನ್ನು ತುಂಬ
ಜಾಗರೂಕತೆಯಿಂದ ಬಳಸಬೇಕು ಎಂದು ಎಚ್ಚರ ನೀಡಿದ್ದರು. ಆದರೆ ಇವರಿಬ್ಬರ ಜಗಳದಲ್ಲಿ
ಆ ಮಶೀನ್ ಒಬ್ಬನ ಕೈಯಿಂದ ಕಿತ್ತುಕೊಳ್ಳುವಾಗ ಅದು ಗೋಡೆಗೆ ತಾಗಿ ಅದರ
ಹಲ್ಲುಗಳೆಲ್ಲ ಉದುರಿದವು. ಮೊದಲ ಚುಂಬನದಲ್ಲಿಯೇ ಹಲ್ಲು ಕಳೆದುಕೊಂಡವರಂತೆ,
ಈ ಮಶೀನ್ ಮೊದಲ ಪ್ರಯೋಗಕ್ಕೆ ಬರುವ ಮುನ್ನವೇ ಹಲ್ಲುಗಳನ್ನು ಕಳೆದುಕೊಂಡಿತು.

ತಂದೆಯವರು ಬೈದು ಅದಕ್ಕೆ ಮತ್ತೊಂದು ಹೊಸ ಹಲ್ಲಿನ ಪ್ಲೇಟು ತಂದು ಹಾಕಿದರು.
ಅದರ ಪ್ರಯೋಗ ನಮ್ಮ ತಲೆಯ ಮೇಲೆ ನಡೆದಾಗ, ಆ ಮಾನವ ಮೊಂಡ ಕತ್ತಿಯ
ಸಹವಾಸ ಬೇಕಿತ್ತು. ಇದು ಅದಕ್ಕಿಂತಲೂ ಭಯಾನಕವಾಗಿತ್ತು. ನಮ್ಮ ಸಹೋದರರಿಗೆ
ಅದನ್ನು ಕೈಯಲ್ಲಿ ಸರಿಯಾಗಿ ಹಿಡಿದು ಒಂದೇ ಗತ್ತಿನಲ್ಲಿ ಅದುಮಿ ಹೊರ ತೆಗೆಯಲು
ಬರುತ್ತಿರಲಿಲ್ಲ. ಕತ್ತರಿಸುವುದಕ್ಕೆ ಪ್ರಾರಂಭಿಸಿ ಒಮ್ಮೆಲೇ ಮಶೀನ್ ಮೇಲಕ್ಕೆ ಎತ್ತಿ
ಬಿಡುತ್ತಿದ್ದರು. ಆಗ ಹುಲ್ಲು ಕಿತ್ತಿದಂತೆ ಒಮ್ಮೆಲೇ ತಲೆಯ ಕೂದಲು ಕಿತ್ತಲು