ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೆದೆಗೆ ಬಿದ್ದ ಎಮ್ಮೆ ಮತ್ತು ಓಡಿ ಬಂದ ಕೋಣ
೧೯

ಹೋಗುತ್ತಾಳೆಯೋ, ಅಲ್ಲೆಲ್ಲ ಬೆನ್ನು ಬಿಡದೆ ತಿರುಗತೊಡಗಿದೆ.
ನನ್ನದೊಂದು ಬಗೆಯ ಚಿಂತೆಯಾದರೆ, ಅಜ್ಜಿಯದು ಇನ್ನೊಂದು ಬಗೆಯ ಚಿಂತೆ. ಎಂದರೆ ಎಮ್ಮೆ ರಾತ್ರಿ ಮಲಗಿಕೊಂಡರೆ ಬೆದೆ ಹೊರಟು ಹೋಗುತ್ತದೆಯಲ್ಲಾ, ಅದಕ್ಕಾಗಿ ರಾತ್ರಿಯೆಲ್ಲಾ ಜಾಗರಣೆ ಮಾಡಬೇಕು ಎಂಬ ಚಿಂತೆ ಅಜ್ಜಿಗೆ ಅಡಸೋಗಿನ ಹಾಗೆ ನಾನು ಮಧ್ಯ ಪ್ರವೇಶಿಸಿ ಅಜ್ಜಿಗೆ ಸಹಾಯ ಮಾಡಲು ಹವಣಿಸುತ್ತಿದ್ದೆ.

"ಆಯಿ (ಅಜ್ಜಿ) ನೀ ಎಲ್ಲೆರ ಹೋಗಿ ಬರಂಗಿತ್ತಂದ್ರ
ಹೋಗಿ ಬಾ, ನಾನು ನೋಡತಿರ್ತಿನಿ"

ಎಂದು ಹೇಳುತ್ತಿದ್ದೆ.

"ಹಂಗಾರ ಎಮ್ಮಿ ಮಲಗಿದ್ರೆ ಹೊಡ್ಡ ಎಬ್ಬು"

ಎಂದು ಹೇಳಿ ಹೋಗುತ್ತಿದ್ದಳು. ಎಮ್ಮೆ ಮಲಗಿದಾಗ ನಾನು ಎಷ್ಟು ಹೊಡೆದರೂ ಏಳುತ್ತಲೇ ಇರಲಿಲ್ಲ. ಆ ಕಾರಣಕ್ಕಾಗಿ ಆ ಎಮ್ಮೆ ಮಲಗುವ ಮುನ್ನವೇ

"ಆಯಿ...... ಬೇss....... ಆಯಿs ಬಾರಬೇ......."

ಎಂದು ಗಟ್ಟಿಯಾಗಿ ಕಿರುಚುತ್ತಿದ್ದೆವು. (ಜೊತೆಗೆ ನನ್ನ ಸಹೋದರರೂ ಇರುತ್ತಿದ್ದರು). ನಮ್ಮ ಗಲಾಟೆಗೆ ಹೆದರಿ ಎಮ್ಮೆ ನೆಲಕ್ಕೆ ಮೈ ತಾಗಿಸುತ್ತಿರಲಿಲ್ಲ. ರಾತ್ರಿಯೆಲ್ಲಾ ಅಜ್ಜಿ ದನದ ಹಟ್ಟಿಯ ಕಂಬಕ್ಕೆ ಕುಳಿತು ಕಾಯುತ್ತಿದ್ದಳು. ನಾನು ಅಜ್ಜಿಯ ಸುತ್ತಲೂ ತಿರುಗಿ ಅಲ್ಲಿಯೇ ಅಜ್ಜಿಯ ಶರಗು ಹಿಡಿದುಕೊಂಡು ಮಲಗುತ್ತಿದೆ. ಏಕೆಂದರೆ ನಸುಕಿನಲ್ಲಿಯೇ ನನ್ನನ್ನು ಬಿಟ್ಟು ಹೊರಟು ಹೋದರೆ ಎಂಬ ಚಿಂತೆ.
ನಸುಕಿನಲ್ಲಿಯೇ ಪಯಣ ಆರಂಭವಾಯಿತು. ಅಜ್ಜಿ ಬೇಡವೆಂದು ಹೇಳಿದರೂ ಹಟಮಾಡಿ ಮನವೊಲಿಸಿದ್ದೆ. ಕೊಂಟೋಜಿ, ಬಸರಗೋಡ ಹಳ್ಳಿಗಳು ಸ್ವಲ್ಕು ದೂರವಿದ್ದರೂ, ಆ ಊರುಗಳು ನಮಗೇನು ಹೊಸವಲ್ಲ. ಅಲ್ಲಿಯ "ಜಾತ್ರೆ", "ಓಕುಳಿ" ಅತ್ಯಂತ ಹೆಸರಾದವು. ಜಾತ್ರೆಯ ಸಮಯದಲ್ಲಿ ಊಟ ಹಾಕುತ್ತಿದ್ದರು. ಆ ಊಟಗಳಿಗೆ ತಪ್ಪಿಸಿಕೊಳ್ಳದೆ ಅಜ್ಜಿಯೊಂದಿಗೆ ಹಾಜರಾಗುತ್ತಿದ್ದವು. ಹೀಗಾಗಿ ನಾನು ಆ ಹಳ್ಳಿಗಳವರೆಗೆ ನಡೆಯಬಲ್ಲೆ ಎಂದು, ಹಿಂದೆ ನಡೆದು ಹೋದ ಸಂದರ್ಭಗಳನೆಲ್ಲ ನೆನಪಿಸಿ ಒಪ್ಪಿಸಿದ್ದೆ.
ಕೊಂಟೋಜಿಗೆ ಹೋಗಲು ಡಾಂಬರು ರಸ್ತೆ ಇತ್ತು. ಬಸರಗೋಡಕ್ಕೆ ಅಂತಹ ರಸ್ತೆ ಇರಲಿಲ್ಲ. ಅದೊಂದು ಅದ್ಭುತ ರಸ್ತೆ ಚಕ್ಕಡಿಗಳು ಹೋಗಿ ಹೋಗಿ ಈ ಕಗ್ಗ ರಸ್ತೆಯಲ್ಲಿ ರೈಲು ಹಳಿ ಹಾಕಿದಂತೆ "ಕಾಚಾ" ಬಿದ್ದು ಹೋಗಿದ್ದವು. ಆ ತಗ್ಗಿನ ರೈಲು ರಸ್ತೆಯಲ್ಲಿ "ಪೌಡರ್" ನಂತಹ ಮಣ್ಣು. ಆ ಪೌಡರ್‌ನಲ್ಲಿ ಕಾಲಿಟ್ಟು ನಡೆಯುವುದು ಎಂದರೆ ಹಿಮದಲ್ಲಿ ನಡೆದಷ್ಟು ಸಂತೋಷ ಹೆಜ್ಜೆ ಹಾಕಿದಾಗ ಕಾಲ ಬೆರಳುಗಳ ಸಂದಿಯಿಂದ "ಪುತ್ತುಕ್ಕ್"ನೇ ಮಣ್ಣು ಹೊರಬರುತ್ತಿತ್ತು. ಬೆಳಗಿನ ಜಾವದಲ್ಲಿ ನಡೆದರಂತೂ ತಂಪಾಗಿ