ಪುಟ:ಚಂದ್ರಮತಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ಮೊದಲನೆಯ ಪ್ರಕರಣ, ತಾಯ್ತಂದೆಗಳು ತಮ್ಮ ಮಕ್ಕಳಿಗೆ ಕಲಿಸದೆ ಬಿಡುವುದು ಧರ್ಮವಲ್ಲವು. ಕಳೆಗಳನ್ನು ಬೆಳೆಯಗೊಡಿಸಿದರೆ ಸಸ್ಯಗಳಿಗೇ ಅವಾಯವುಂಟಾಗಿ ಫಲವು ಲಭಿಸಲಾರದೆಂಬುದನ್ನರಿತು ಹೊಲದ ಯಜಮಾನನು ಯುಕ್ತಕಾಲಗಳಲ್ಲಿ ಕಳೆಯನ್ನು ಕಿತ್ತು ಹಾಕಿ ಸಸ್ಯಗಳನ್ನು ಕಾಪಾಡುವಂತೆಯೇ, ಮಕ್ಕಳಿಗೆ ಕಲಿಸುವ ವಿದ್ಯೆಯು ದುಷ್ಕಾರ್ಯಗಳಿಗೆ ಉಪಯೋಗಕರವಾಗದಂತೆ ಅವರ ನ್ನು ಜಾಗರೂಕತೆಯಿಂದ ನೋಡಿಕೊಂಡು ಯುಕ್ತಕಾಲಗಳಲ್ಲಿ ಶಿಕ್ಷೆರಕ್ಷೆ ಗಳನ್ನು ಮಾಡುತ್ತೆ ಅದರ ಫಲವನ್ನನುಭವಿಸುವುದಕ್ಕೆ ಪ್ರಯತ್ನಿಸಬೇಕು. “ ಸಸಿಯಾಗಿಬಾಗದುದು ಮರವಾಗಿ ಬಾಗೀತೇ? ” ಎಂಬ ನಾಣ್ಣುಡಿಯನ್ನು ಜ್ಞಾಪಕದಲ್ಲಿರಿಸಿ, ದುರ್ಮಾರ್ಗದಲ್ಲಿರುವ ಮನಸ್ಸನ್ನು ಸನ್ಮಾರ್ಗಕ್ಕೆ ತಿರು ಗಿಸಬೇಕಾದರೆ ಬಾಲ್ಯದಶೆಯೇ ಉತ್ತಮವಾದ ಕಾಲವೆಂದರಿತು ಹಾಗೆಮಾ ಡುವುದಕ್ಕೆ ಪ್ರಯತ್ನಿಸಬೇಕು. ಬಾಲ್ಯದಲ್ಲಿ ಕಲಿತ ದುರ್ಗುಣವೇ ಆಗಲಿ ಸುಗುಣನೇ ಆಗಲಿ ವಯಸ್ಸಾದ ಬಳಿಕ ಮಾರ್ಪಡಲಾರದು. ಒಂದುವೇಳೆ ಮಾರ್ಪಟ್ಟರೂ ಎಷ್ಟೊಶ್ರಮದಿಂದ ಸಾಧ್ಯವಾದಿತು. ಆದುದರಿಂದ ಬಲಕ ರನ್ನಾಗಲಿ ಬಾಲಿಕೆಯರನ್ನಾಗಲಿ ಚಿಕ್ಕಂದಿನಲ್ಲಿಯೇ ಯುಕ್ತ ಪ್ರವರ್ತನ ವುಳ್ಳವರನ್ನಾಗಿ ತಿದ್ದುವುದಕ್ಕೆ ಮಾತಾಪಿತೃಗಳು ಶಕ್ತಿವಂಚನೆಯಿಲ್ಲದೆ ಶ್ರಮಪಡುವುದು ಅತ್ಯವಶ್ಯಕವಾದ ಕರ್ತವ್ಯವಾಗಿರುವುದು. ಅದರಲ್ಲಿಯೂ ಬಾಲರ ವಿಷಯಕ್ಕಿಂತ ಬಾಲೆಯರ ವಿಷಯದಲ್ಲಿ ಹೆಚ್ಚಾದಶ್ರಮವನ್ನು ವಹಿಸಬೇಕು. ನಿರಂತರವೂ ಗಂಡುಮಕ್ಕಳು ತಾಯ್ತಂದೆಗಳ ಮನೆಯ ಲ್ಲಿಯೇ ಇರತಕ್ಕವರು. ಹೆಣ್ಣು ಮಕ್ಕಳಾದರೋ ಎಂದಾದರೂ ಮತ್ತೊ ಬೃರ ಮನೆಗೆ ಹೋಗಿ ಸೇರತಕ್ಕವರಾಗಿರುವರಲ್ಲದೆ ನಿರಂತರವೂ ತವ ಮನೆಯಲ್ಲಿ ಇರತಕ್ಕವರಲ್ಲ. ಆದುದರಿಂದ ಸಾಕಿದವರು ತಮಗೆ ಅಪಖ್ಯಾತಿಯು ಬಾರದಂತೆ, ಹೆಣ್ಣು ಮಕ್ಕಳು ಅತ್ತೆಯಮನೆಗೆ ಹೋಗುವ ಕಾಲವು ಸವಿಾಪಿಸುವುದಕ್ಕೆ ಮೊದಲೇ ಅವರನ್ನು ಉತ್ತಮಗುಣವುಳ್ಳವ ರನ್ನಾಗಿಯೂ, ತಿಳಿವುಳ್ಳವರನ್ನಾಗಿಯೂ ಮಾಡಿರಬೇಕು. ತಮ್ಮ ಪುತ್ರಿ ಯರಿಗೆ ಮೊದಲು ಸುಗುಣಗಳನ್ನು ಕಲಿಸಿ ಜ್ಞಾನವತಿಯರನ್ನಾಗಿ ಮಾಡದೆ ಸಂಸಾರಸಾಗರದಲ್ಲಿ ಈಜುವುದಕ್ಕೋಸುಗ ಅವರನ್ನು ಪುರುಷರ ಮನೆ ಗಳಿಗೆ ಕಳುಹಿಸುವಂತಹ ತಾಯ್ತಂದೆಗಳು, ಈಜುಕಲಿಯದವರನ್ನು ಸಮು