ಪುಟ:ಚಂದ್ರಮತಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ೦ದ್ರಮತಿ,

=

= = = = ಸಮುದ್ರನು ಚೆನ್ನಾಗಿ ತಿಳಿದವನಾಗಿದ್ದುದರಿಂದ, ಚಂದ್ರಮತಿಗೆ ಯಾವಾಗ ಲೂ ಶ್ರಮೆಯೆಂದು ತೋರದಂತೆ ಒಳ್ಳೆಯ ಮಾತುಗಳನ್ನಾಡಿ ಪ್ರೋತ್ಸಾಹ ಪಡಿಸಿ ಉಪಾಯವಾಗಿ ಓದಿಸುತ್ತೆ, ಸ್ವಲ್ಪ ಕಾಲ ಆಡುವುದಕ್ಕೆ ಬಿಟ್ಟು ಆ ಆಟದಲ್ಲಿಯೂ ಆವುದೋ ಒಂದು ಉಪಯುಕ್ತವಾದ ವಿಷಯವನ್ನೇ ಕಲಿ ಸುತ್ತಿದ್ದನು ; ಮಕ್ಕಳಿಗೆ ಗೊಂಬೆಗಳನ್ನು ನೋಡುವುದರಲ್ಲಿ ಅತ್ಯುತ್ಸಾಹ ವೆಂಬುದನ್ನರಿತು, ಗೋಡೆಯಲ್ಲಿ ಚಿತ್ರಪಟಗಳ ಬಳಿಗೆ ಅವಳನ್ನು ಆಗಾಗ ಕರೆದುಕೊಂಡುಹೋಗಿ, ಅಲ್ಲಿಯ ಕಲ್ಲುಕಂಭಗಳ ಮೇಲೆಯೂ ಕೆತ್ತಲ್ಪ ಟಿದ್ದ ವಿಗ್ರಹಗಳನ್ನು ತೋರಿಸಿ ಅವುಗಳ ವಿಷಯದಲ್ಲಿ ವಿನೋದಕರ ಗಳಾದ ಕೆಲವು ಕಥೆಗಳನ್ನು ಹೇಳಿ ತನ್ಮೂಲವಾಗಿಯೂ ನೀತಿಯನ್ನು ಕಲಿಸುತ್ತಿದ್ದನು. ಆ ಬಾಲೆಯು ಗ್ರಹಿಸಲಾರದಂತಹ ವಿಷಯವನ್ನೆಂದೂ ಆತನು ಹೇಳುತ್ತಿರಲಿಲ್ಲ ; ಹೇಳಿದುದರ ಅರ್ಧವೇ ತಿಳಿಯದಂತೆ ಕುರುಡು ಪಾಠವಾಗಿ ಒಂದು ಪದ್ಯವನ್ನಾಗಲಿ ಹಾಡನ್ನಾಗಲಿ ಹೇಳಿಕೊಡಲಿಲ್ಲ. ಓದಿ ಸಿದ ವ್ಯಾಕರಣಾದಿಲಕ್ಷಣಗಳೊಡನೆ ಭಾಷಾಭಿವೃದ್ಧಿಗೋಸುಗ ಲಕ್ಷ ಗಳನ್ನೂ ಕಲಿಸಿ ಓದಿದುದೆಲ್ಲವೂ ಪ್ರಯೋಜನಕರವಾಗುವಂತೆ ಮಾಡಿದನು. ಬುದ್ಧಿವಿಕಾಸವೂ, ವಿಭಾಗಜ್ಞಾನವೂ ಉಂಟಾಗಲೆಂಬ ಅಭಿಪ್ರಾಯದಿಂದ, ಸಾಧಾರಣವಾಗಿ ಗೃಹಕೃತ್ಯವನ್ನು ನಿರ್ವಹಿಸುವುದಕ್ಕೆ ಬೇಕಾಗುವುದಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಗಣಿತಶಾಸ್ತ್ರವನ್ನು ಕಲಿಸಿದನು. ಮುಂದೆ ಸಂಸಾರ ಭಾರವೆಲ್ಲ ಮೇಲೆ ಬಿದ್ದು ಅನೇಕ ಕಷ್ಟಗಳು ಸಂಭವಿಸಿ ಶರೀರವನ್ನು ಧರಿಸಿ ರುವುದೇ ದುಸ್ಸಹವಾಗಿ ತೋರುವಂತಹ ಕಾಲದಲ್ಲಿ ಮನಸ್ಸಿಗೆ ಉಲ್ಲಾಸ ನನ್ನೂ, ವಿಶ್ರಾಂತಿಯನ್ನೂ ಉಂಟುಮಾಡುವುದಕ್ಕೋಸುಗ ಗಾನವಿದ್ಯಾ ಭ್ಯಾಸವನ್ನು ಮಾಡಿಸಿ ಭಕ್ತಿರಸಪುಷ್ಟಗಳಾದ ಹಾಡುಗಳನ್ನೂ, ಪದ್ಯಗಳನ್ನೂ ಬಗೆಬಗೆಯ ರಾಗಗಳಿಂದ ಕಿವಿಗಿಂಪಾಗಿರುವಂತೆ ಹಾಡುವುದಕ್ಕೂ ಸಾಮರ್ಥ್ಯ ವನ್ನುಂಟುಮಾಡಿದನು. ಲೋಕದಲ್ಲಿ ಸಾಧಾರಣವಾಗಿ ಬಾಲಕರಾಗಲಿ ಬಾಲಕಿಯರಾಗಲಿ ತಾವು ಕಲಿತುದನ್ನು ಇತರರಿಗೆ ಕಲಿಸತಕ್ಕ ಆಶ್ಚರಕರ ವಾದ ಸ್ವಭಾವವುಳ್ಳವರಾಗಿರುವರಾದುದರಿಂದ, ಈಗ ಚಂದ್ರಮತಿಯೂ ತಾನು ಗುರುವೆಂದೆಣಿಸಿ ತನ್ನ ಒಡನಾಡಿಯರನ್ನಾಗಲಿ, ಅವರಿಲ್ಲದಿದ್ದರೆ ಗೊಂಬೆ ಮೊದಲಾದುವುಗಳನ್ನಾಗಲಿ ಶಿಷ್ಯರಂತೆ ಏರ್ಪಡಿಸಿಕೊಂಡು, ತಾನು