ಪುಟ:ಚಂದ್ರಮತಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎರಡನೆಯ ಪ್ರಕರಣ, ೧೧ ಒಬ್ಬರು ಮಾಡಿದಲ್ಲದೆ ಒಂದು ವಸ್ತುವಾಗುವುದಿಲ್ಲವೆಂದು ನೀನು ತಿಳಿದು ಕೊಂಡಿರುವೆಯೆಂಬುದು ನಿನ್ನ ಮಾತಿನಿಂದಲೇ ಸ್ಪಷ್ಟವಾಯಿತು. ಆದ ಕಾರಣದಿಂದಲೇ ಈಗ ನೀನು ಮುಡಿಯಲ್ಲಿಟ್ಟುಕೊಂಡಿರುವ ತಾವರೆಯ ಹೂವನ್ನೂ ಒಬ್ಬರು ಮಾಡದಿದ್ದ ಪಕ್ಷದಲ್ಲಿ, ಇದೂ ಇರುತ್ತಿರಲಿಲ್ಲ. ಚಂದ್ರ-ಹಾಗಾದರೆ ಇದನ್ನು ಮಾಡಿದವರಾರೋ ಆವರನ್ನು ನನಗೆ ತೋರಿಸುವಿರಾ? ಗುರು--ಆ ಮಹಾನುಭಾವನು ನಮ್ಮ ಕಣ್ಣುಗಳಿಗೆ ಕಾಣಿಸತಕ್ಕೆ ವನಲ್ಲ. ಅವನು ಕಾಣಿಸದಿದ್ದರೂ ಈಗ ಇಲ್ಲಿಯೇ ಇದ್ದು ನಾವಾಡುತ್ತಿ ರುವ ಮಾತುಗಳನ್ನೆಲ್ಲ ಕೇಳುತ್ತಲೇ ಇರುವನು. ಆತನಿಲ್ಲದ ಸ್ಥಳವಾ ವುದೂ ಇಲ್ಲ. ಆತನು ಮಾಡಿರುವ ವಸ್ತುಗಳೆಲ್ಲವೂ ಸರ್ವೋತ್ತಮ ಗಳಾಗಿಯೇ ಇರುವುವು. ಆತನೇ ಎಲ್ಲಕ್ಕೂ ಅಧಿಪತಿಯಾಗಿರುವನು. ನಾವು ಮಾಡಿದ ವಸ್ತುಗಳು ಎಷ್ಟು ಸೊಗಸಾದುವುಗಳಾಗಿದ್ದರೂ, ಆತನು ಮಾಡಿರುವ ವಸ್ತುಗಳೊಡನೆ ಹೋಲಿಸಿನೋಡಿದರೆ ಕೋಟ್ಯಂರದಲ್ಲಿ ಒಂದಂಶಕ್ಕೂ ಸರಿಬಾರವು. ಈ ವಟದಲ್ಲಿ ಬರೆಯಲ್ಪಟ್ಟಿರುವ ಕಮಲವು ಎಷ್ಟು ಮನೋಹರವಾಗಿರುವುದಾದರೂ, ಈಶ್ವರನಿರಿತವಾದ ಆ ಕಮಲ ದೊಡನೆ ಹೋಲಿಸಿದರೆ ಸ್ವಲ್ಪವೂ ಸರಿಬಾರದು. ಬಣ್ಣದಲ್ಲಿಯೂ, ರೂಪ ದಲ್ಲಿಯೂ ಸ್ವಲ್ಪ ಮಾತ್ರ ಸರಿಬರಬಹುದಾದರೂ, ಅದರಲ್ಲಿರುವ ತಂಪೂ, ಮಾರ್ದವವೂ, ಪರಿಮಳವೂ, ಮಕರಂದವೂ, ಇದರಲ್ಲೆಲ್ಲಿರುವುವು ? ಅದನ್ನು ನಾವು ಸುಮ್ಮನೆ ನೋಡಿ ಸಂತೋಷಪಡಬೇಕಾಗಿರುವುದಲ್ಲದೆ, ಅದರಂತೆ ಇದನ್ನು ಮುಡಿಯಲ್ಲಿಟ್ಟು ಕೊಳ್ಳುವುದಕ್ಕೂ, ಔಷಧಾದಿಗಳೊಡನೆ ಉಪಯೋಗಿಸುವುದಕ್ಕೂ ಹೇಗೆ ತಾನೆ ಆದೀತು ? ಹೀಗೆ ನಮಗೆ ಮಹೋಪ ಯೋಗಿಗಳಾಗುವಂತೆ ಸಮಸ್ತ ಪದಾರ್ಥಗಳನ್ನೂ ಸೃಷ್ಟಿಸಿರುವ ಸರ್ವೆಶ್ವರನ ವಿಚಿತ್ರ ಸೃಷ್ಟಿಗೆ ಆಶ್ಚರ್ಯಪಡುತ್ತೆ ನಾವು ಆತನ ವಿಷಯದಲ್ಲಿ ಭಕ್ತಿ ಕೃತಜ್ಞತೆ ಗಳುಳ್ಳವರಾಗಿರಬೇಕು. ಚ೦ದ್ರ-ತಾವು ಹೇಳಿದ ಆ ಸರ್ವೆಶ್ವರನೆಂಬ ಚಿತ್ರಕಾರನು ಮಾಡಿದ ಪದಾರ್ಥಗಳು ಮತ್ತಾವುವಿರುವುವು ?