ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಐದನೆಯ ಪ್ರಕರಣ.
೨೭

ತೆರೆದು ನೋಡಿದಾಗ ಸತ್ತುಬಿದ್ದಿದ್ದಿತು. ಆಗ ನನಗೆ ಅದರಕಾರಣವೇನೆಂಬುದು ತಿಳಿಯಲಿಲ್ಲ. ಇದೂ ಅಲ್ಲದೆ ನೆನ್ನೆ ನಾನು ಕಣ್ಣುಮುಚ್ಚಾಟವನ್ನು ಆಡುವಾಗ ಹೊಸಗಾಳಿಯು ಬರುವುದಕ್ಕೆ ಸಂಪೂರ್ಣವಾಗಿ ಆವ ಕಾಶವೇ ಇಲ್ಲದಿರುವ ನಮ್ಮ ನಡುಮನೆಯಲ್ಲಿ ಒಂದು ಗಳಿಗೆಯಹೊತ್ತು ಅವಿತುಕೊಂಡಿದ್ದು ತರುವಾಯ ಹೊರಕ್ಕೆ ಬರಲು ದೇಹವೆಲ್ಲಾ ಬೆವರೇರಿ ಉಸಿರಾಡುವುದಕ್ಕೂ ಆಗದಂತೆ ಕಷ್ಟವಾದುದಕ್ಕೆ ಇದೇಕಾರಣವಾಗಿರಬಹು ದಲ್ಲವೇ?

ಗುರು ಅಹುದು. ಶುದ್ದವಾಯುವು ಇಲ್ಲವಾದರೆ ಜೀವಜಂತುಗಳ ಆರೋಗ್ಯಕ್ಕೆ ಹಾನಿಯುಂಟಾಗುವುದು ಮಾತ್ರವೇ ಅಲ್ಲದೆ, ಬೆಂಕಿಯೂ ಉರಿಯಲಾರದು.

ಚಂದ್ರ-ನಾಲ್ಕು ತಿಂಗಳ ಕೆಳಗೆ ಒಂದಾನೊಂದುದಿನ ನಮ್ಮದೇವತಾರ್ಚನೆಯ ಪೆಟ್ಟಿಗೆಯಲ್ಲಿ ದೀಪವನ್ನು ಉರಿಯುತ್ತಿದ್ದಂತೆಯೇ ಬಿಟ್ಟು ಬಾಗಿಲನ್ನೆಳೆದು ಚಿಲುಕವನ್ನು ಹಾಕಿದೆವು. ಅಷ್ಟರೊಳಗಾಗಿ ಅದರಲ್ಲಿದ್ದ ಗಂದದ ಬಟ್ಟಲು ಬೇಕಾಗಲು ಬಾಗಿಲನ್ನು ತೆರೆದು ನೋಡಿದಾಗ ಹಣತೆಯಲ್ಲಿ ಎಣ್ಣೆಯೂ ಬತ್ತಿಯೂ ವಿಶೇಷವಾಗಿದ್ದರೂ, ದೀಪವು ಆರಿಹೋಗಿದ್ದುದನ್ನು ಕಂಡು ನನಗೆ ಎಷ್ಟೋ ಆಶ್ಚರ್ಯವಾಯಿತು. ನಾವು ಉಸಿರಾಡುವುದರಿಂದ ಮಾತ್ರವೇ ಅಲ್ಲದೆ ಮತ್ತಾವುದರಿಂದಲಾದರೂ ಗಾಳಿಯು ಕೆಟ್ಟುಹೋಗಿ ವಿಷಸ್ವಭಾವವುಳ್ಳುದಾಗುವುದುಂಟೇ?

ಗುರು—ಬಚ್ಚಲ ನೀರಿಂದ ಹೊರಕ್ಕೆಬರುವ ದುರ್ಗಂಧವೂ, ಸತ್ತ ಜಂತುಗಳ ಶರೀರವು ಕೊಳೆತು ನಾರುವಾಗ ಉಂಟಾಗುವ ದುರ್ವಾಸನೆಯೂ, ಹಸುಗಳನ್ನು ಕಟ್ಟುವಸ್ಥಳದಲ್ಲಿ ಹುಟ್ಟುವ ರೊಚ್ಚಿನ ದುರ್ವಾಸನೆಯೂ, ಕಾಯಿಪಲ್ಲೆಯ ಸೆಗಣಿಯಕುಪ್ಪೆ ಮೊದಲಾದುವು ಕೊಳೆಯುವುದರಿಂದ ಹುಟ್ಟುವ ಕೆಟ್ಟ ಗಂಧವೂ, ಗಾಳಿಯನ್ನು ವಿಷಯುಕ್ತವನ್ನಾಗಿಮಾಡಿ, ನಮ್ಮ ದೇಹಾರೋಗ್ಯಕ್ಕೆ ಭಂಗವನ್ನುಂಟುಮಾಡುವುವು. ಬೆಂಕಿಯುರಿಯುವದರಿಂದಲೂ, ವಾಸಸ್ಥಳವನ್ನು ತೇವವಾಗಿಟ್ಟುಕೊಂಡಿರುವುದರಿಂದಲೂ, ಮನೆಯ ಸಮಿಪದಲ್ಲಿಯೇ ಮಲಮೂತ್ರಾದಿಗಳನ್ನು ವಿಸರ್ಜಿಸುವುದ