೧೦೭ ಗಣ ನಾಲ್ಕನೆಯ ಭಾಗ. ಸಕೃತಸ್ಥವಾಗಿದ್ದೀತು ? ಎಂದು ಬೋಧೆಯಾಗುವುದು, ದೇಹವು ಒಡೆದುಹೋಯಿತುಮನಸ್ಸು ಒಡೆದುಹೋಯಿತು-ರವಲಿನಿದು ಅಪಹೃತವಾದ ಚೇತನವುಳ್ಳವಳಾಗಿ, ಅರ್ಧ ನಿದ್ರಾಭಿಭೂತೆಯಾಗಿ ಅರ್ಧ ಜಾಗ ತಾವಸ್ಥೆಯಲ್ಲಿದ್ದಳು, ಗುಹೆಯ ತಲದಲ್ಲಿದ್ದ ಕಲ್ಲು ಬಂಡೆಯಿಂದ ಬೆನ್ನೆಲ್ಲಾ ನೋಯುತಲಿತ್ತು. ಚೈತನ್ಯವು ಸಂಪೂರ್ಣವಾಗಿ ವಿಲುಪ್ತವಾಗುತ್ತ ಬಂದಿತು, ಶೈವಲಿನಿಗೆ ಇದಿರಿಗೆ ಒಂದು ದೊಡ್ಡದಾದ ನದಿಯ ಕಣ್ಣಿಗೆ ಬಿದ್ದ ಹಾಗಾಯಿತು, ಆದರೆ ನದಿಯಲ್ಲಿ ನೀರಿರ ಲಿಲ್ಲ, ಅದರಲ್ಲಿ ರಕ್ತವು ಎರಡು ದಡಗಳ ಮೇಲೂ ಹರಿದು ಹೋಗುತಲಿದ್ದ ಹಾಗಿತ್ತು. ಅದರಲ್ಲಿ ಮೂಳೆಗಳು, ಗಣಿತವಾದ ನರ ದೇಹಗಳು, ಮನುಷ್ಯನ ಮುಂಡ ಮುಂತಾ ದವು ತೇಲಿಹೋದಹಾಗಿದ್ದವು, ಕುಂಭೀರಾಕೃತಿಯುಳ್ಳ ಜೀವಜಂತುಗಳು ಚರ್ಮಮಾಂಸ ರಹಿತವಾಗಿ ಕೇವಲ ಬೃಹದಾಕಾರವಾದ ಅನ್ಸಿಗಳುಳ್ಳ ವಾಗಿ ಭಯಂಕರವಾದ ಉಜ್ವಲ ನಾದ ಕಣ್ಣುಗಳನ್ನು ತೆರೆದುಕೊಂಡು ಅಲ್ಲಲ್ಲಿ ಓಡಾಡುತ್ತ ತೇಲಿಹೋಗುವ ಕೊಳೆತು ಹೋದ ಶವಗಳನ್ನು ಹಿಡಿದು ತಿನ್ನು ತಲಿದ್ದವುವೆಂದು ತೋರುವುದು, ಮತ್ತು ತನ್ನನ್ನು ಪರ್ವತದಮೇಲೆ ಎತ್ತಿಕೊಂಡುಹೊದ ಮಹಾಪುರುಷನು ಅವುಗಳನ್ನೆಲ್ಲಾ ಹಿಡಿದು ತಂದು ಆ ನದಿಯ ತೀರದಲ್ಲಿ ದಡದ ಮೇಲೆ ಹಾಕಿದಹಾಗೆ ಕಾಣುವುದು, ಅಲ್ಲಿ ಬಿಸಿಲು ಇರಲಿಲ್ಲ - ಬೆಳದಿಂಗಳು ಇರಲಿಲ್ಲ - ನಕ್ಷತ್ರಗಳು ಇರಲಿಲ್ಲ - ಮೇಘವಿರಲಿಲ್ಲ - ಸ್ವಲ್ಪವೂ ಬೆಳಕಿಲ್ಲ ಮತ್ತು ಅಂಧಕಾರವು ಇಲ್ಲದ ಹಾಗೂ ಇರಲಿಲ್ಲ – ಎಲ್ಲಾ ಕಣ್ಣಿಗೆ ಕಾಣಿ ಸುವುವು. ಆದರೆ ಅಸ್ಪದವಾಗಿ ಕಾಣಿಸುವುವು. ರಕ್ತದ ನದೀ, ಹೊಳೆತುಹೋದ ಸವಗಳು, ತೇಲಿಹೋಗುತಲಿದ್ದ ಕಂಸಾಳ ವಲೆಗಳು, ಅಸ್ಥಿರವಾದ ಕುಂಭೀರಗಳು, ಇವೆಲ್ಲವೂ ಭೀಷಣವಾದ ಅಂಧಕಾರದಲ್ಲಿ ೫ಣ್ಣುಗಳಿಗಿರಿಗೆ ಕಾಣಿಸುತಲಿದ್ದವು. ನದಿಯ ತೀರದಲ್ಲಿ ಮರಳು ಇಲ್ಲ ಅದಕ್ಕೆ ಬದಲಾಗಿ ಕಬ್ಬಿಣದ ಸೂಜಿ ದಳಗಳು ತುದಿಮೇ ಲಾಗಿ ಬಿದ್ದಿದ್ದವು. ಆ ಮಹಾಕಾರವುಳ್ಳ ಮಹಾಪುರ ಪನು ಕೈವಲಿನಿಯನ್ನು ಅಲ್ಲಿ ಕುಳ್ಳಿರಿಸಿ ನದಿಯನ್ನು ಸಾರಾಗೆಂದು ಹೇಳಿದನು. ಅವನು ಪುನಃ, ನಿನಗೆ ಈಜುವು ದಕ್ಕೆ ಬರುವುದರಿಂದ ಈಜಿಕೊಂಡು ಹೋಗು ಗಂಗೆಯಲ್ಲಿ ಸತಾಪನ ಸಂಗಡ ಅನೇಕಾ ವರ್ತಿ ಈಜುತಲಿದ್ದೆ ಎಂದು ಹೇ'ದನುಶೈವಲಿನಿಯು, ಈ ರಕ್ತಪ್ರವಾಹದ ನದಿಯಲ್ಲಿ ಈಜುವುದು ಹೇಗೆ? ಎಂದಳು. ಮಹಾಕಾರವುಳ್ಳ ಪುರುಷನು ತನ್ನ ಕೈಯಲ್ಲಿ ತ್ಯ ವನ್ನು ಹೊಡೆಯುವುದಕ್ಕೆ ಎತ್ತಿದ್ದನು. ಕೈವಲಿನಿಯು ಅದು ಜ್ವಲಿಸುವ ಕಬ್ಬಿಣದ ಬೆತ್ಯವಾಗಿತ್ತೆಂದು ತಿಳಿದುಕೊಂಡಳು. ಅವಳು ಸಾವಕಾಶವಾಗಿದುದನ್ನು ಕಂಡು ಮಹಾಕಾರಪುರುಷನು ಅವಳ ಬೆನ್ನಿನ ಮೇಲೆ ಆ ಚಿತ್ರದಿಂದ ಹೊಡೆದನು. ಆ ಪ್ರಹರ ದಿಂದ ಅವಳ ಮೈಯೆಲ್ಲಾ ಉರಿಯುಲಾರಂಭವಾಯಿತು, ಆ ಪೆಟ್ಟನ್ನು ತಡೆಯಲಾರದೆ ಆ ರಕ್ತಮಯವಾದ ನದಿಯಲ್ಲಿ ಧುಮುಕಿದಳು, ಅದರಲ್ಲಿದ್ದ ಅಣ್ಣಮಯವಾದ ಕುಂಭೀ ರಗಳು ಅವಳನ್ನು ಬೆನ್ನಟ್ಟಿ ಕೊಂಡು ಬಂದವು. ಆದರೆ ಅವಳನ್ನು ಹಿಡಿದುಕೊಳ್ಳಲಿಲ್ಲ.
ಪುಟ:ಚಂದ್ರಶೇಖರ.djvu/೧೧೩
ಗೋಚರ