ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪರಿಚ್ಛೇದ. ದಲನಿ ಏನು ಮಾಡಿದಳು ? 1 ಮಹಾಕಾಯ ಪುರುಷನು ನಿಶ್ಯಬ್ದವಾಗಿ ದಲನಿಯ ಪಕ್ಕದಲ್ಲಿ ಬಂದು ಕುಳ ತುಕೊಂಡನು. ದಲನಿಯು ಅಳುತಲಿದ್ದವಳು ಭಯಪಟ್ಟು ಅಳುವನ್ನು ನಿಲ್ಲಿಸಿ ನಿಮ್ಮಂದೆಯಾಗಿದ್ದಳು. ಆಗಂತಕನೂ ನಿಶ್ಯಬ್ದವಾಗಿದ್ದನು. ಇವರಿಬ್ಬರೂ ಹೀಗಿರುತ್ತೆ ಬೇರೆ ಕಡೆಯಲ್ಲಿ ದಲಿನಿಯನ್ನು ಸರ್ವನಾಶ ಮಾಡುವ ಮತ್ತೊಂದು ಕಾರವು ನಡೆಯುತಲಿತ್ತು. - ಮಾಂಗೀರನಿಂದ ಮಹಮ್ಮದ ತಕಿಗೆ ಬಂದ ಪರವಾನೆಯಲ್ಲಿ, ಇಂಗ್ಲೀಷರ ಹಡಗಿನಲ್ಲಿ ರುವ ದಲಿನಿಯನ್ನು ಕರೆದುಕೊಂಡು ಅವಳನ್ನು ಮಾಂಗೀರಿಗೆ ಕಳುಹಿಸಬೇಕೆಂದು ಅಪ್ಪಣೆಯಾಗಿತ್ತು. ಮಹಮ್ಮದ ತಕಿದು, ಮನಸ್ಸಿನಲ್ಲಿ, ಇಂಗ್ಲೀಷರು ಬಂದಿ ಅಥವಾ ಹತರಾದರೆ ದಲನಿಯು ತನ್ನ ಕೈಗೆ ಬೀಳುವುಳೆಂದು ತಿಳಿದವನಾಗಿ ಅವಳ ವಿಚಾರವಾಗಿ ತನ್ನ ಅನುಚರರಿಗೆ ಯಾವ ಅಪ್ಪಣೆಯನ್ನೂ ಮಾಡಲಿಲ್ಲ. ಅನಂತರ ಇಂಗ್ಲೀಪರಮೇಲೆ ಬಿದ್ದು ಅವರನ್ನು ಹತಮಾಡಿ ಹಡಗಿನಲ್ಲಿ ನೋಡಲಾಗಿ, ಅದರಲ್ಲಿ ದಲನಿಯು ಇರಲಿಲ್ಲ. ಆಗ ಮಹಮ್ಮದ ತಕಿಯು ಭಯಪಟ್ಟು ತನಗೆ ಏನೋ ವಿಪತ್ತುಂಟಾಗುವುದೆಂದು ಯೋಚಿಸಿದನು, ತನ್ನ ಶೈಥಿಲ್ಯ ಮತ್ತು ಅಜಾಗರೂಕತೆಯನ್ನು ಕುರಿತು ನಬಾಬನು ತನ್ನ ಮೇಲೆ ಕೋಪಗೊಂಡು ಏನು ಉತ್ಪಾತವನ್ನುಂಟುಮಾಡುವನೋ ಎಂಬ ಭಯ ದಿಂದ ಭೀತನಾಗಿ ಮಹಮದ ತಕಿಯು ಧೈರೈಗೊಂಡು ನಬಾಬನಿಗೆ ವಂಚಿಸಬೇ ಕೆಂದು ಸಂಕಲ್ಪ ಮಾಡಿಕೊಂಡನು. ಆಗ ಯುದ್ಧವು ಆರಂಭವಾಗುತ್ತಲೆ, ಇಂಗ್ಲೀ ಪರು ಮಿರಜಾಫರನನ್ನು ತೆರೆಯಿಂದ ಬಿಡಿಸಿ ಪುನಃ ಗದ್ದಿಗೆಯಮೇಲೆ ಕುಳ್ಳಿರಿಸುವುದೆಂದ ಜನ ರವವಿತ್ತ, ಇಂಗ್ಲೀಷರು ಯುದ್ಧದಲ್ಲಿ ಜಯಿಸಿದರೆ ಈ ವಂಚನೆಯು ಮಾರಕಾಸಿ ಮನಿಗೆ ತಿಳಿದರೂ ಅವನು ಮಹಮ್ಮದ ತಕಿಗೆ ಯಾವ ಕೆಡಕನ್ನೂ ಮಾಡಲಾರನು. ಆಸಾ ತತಃ, ಬದುಕಿಕೊಂಡರೆ ಅದೇ ಲಾಭವಾಗಿ ತೋರಿತು. ಒಂದುವೇಳೆ ವಿಾರಕಾಸೀನನು ಜಯಿಸಿದರೂ ಅವನಿಗೆ ಈ ಪವಂಚನೆಯ ವಿಚಾರವು ತಿಳಿಯದಿರುವಹಾಗೆ ಏನಾದರೂ ಬಂದುಪಾಯವನ್ನು ಮಾಡಿಕೊಳ್ಳಬಹುದು, ಆಗವನು ಕೂರವಾದ ಯಾವದೊಂದು ಅಪ್ಪಣೆಯನ್ನೂ ಮಾಡಲಾರನೆಂಪೇಪಕಾರವಾದ ದುರಭಿಸಂಧಿಯನ್ನು ಮಾಡಿಕೊಂಡು ಮಹಮ್ಮದ ತಕಿಯು ಆ ರಾತ್ರಿಯೇ ಬಂದು ಸುಳ್ಳು ಸುದ್ದಿಯನ್ನು ಬರೆದು ನಬಾಬನ ಎಳಿಗೆ ಕಳುಹಿಸಿದನು.