ಪುಟ:ಚಂದ್ರಶೇಖರ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಭಾಗ. ೧೬೬ ಕುಲಸಂಬಿಯು ವಿಸ್ತಾರಿತಲೋಚನವುಳ್ಳವಳಾಗಿ ಗರ್ದನ ಮಾಡುತ್ತ, ನನ್ನ ಸಾಕ್ಷಿ ಯೆ ! ಮೇಲೆ ತಲೆಯೆತ್ತಿ ನೋಡು, ನನ್ನ ಸಾಕ್ಷಿಯು ಜಗದೀಶ್ವರನು ! ನಿನ್ನ ಎದೆಯ ಮೇಲೆ ಕೈಯಿಟ್ಟುಕೊಂಡು ನೋಡು, ನನ್ನ ಸಾಕ್ಷಿ ನೀನೇ ! ಇನ್ನೂ ಯಾರಸಾಕ್ಷವಾ ದರೂ ಬೇಕಾಗಿದ್ದರೆ, ಈ ಫಿರಂಗಿಯನ್ನು ಕೇಳಿನೋಡು, ಎಂದಳು. ನಬಾಬ - ಏನು ಫಿರಂಗಿ ! ಈ ಬಾಂದಿಯು ಹೇಳುವುದೆಲ್ಲಾ ಸತ್ಯವಾದುದೆ ? ನೀನೂ ಅಮಿಯಟನ ಸಂಗಡ ಇದ್ದೆಯನ್ನೈ, ಇಂಗ್ಲೀಷರು ಸತ್ಯವನ್ನು ಹೊರತು, ಬೇರೆ ಹೇಳುವುದಿಲ್ಲ. ಭಾಸ್ಕರನು ತಿಳಿದುದನ್ನೆಲ್ಲಾ ಸರಿಯಾಗಿ ಹೇಳಿದನು, ಅದರಿಂದ ಎಲ್ಲರೂ ದಳನಿಯು ಅನಿಂದನೀಯ ಎಂದು ತಿಳಿದರು. ತಕಿಯು ಮುಖತಗ್ಗಿದವನಾಗಿದ್ದನು. ಆಗ ಚಂದ್ರಶೇಖರನು ಮುಂದಾಗಿ ಬಂದು, ಧರ್ಮಾವತಾರವೆ ! ಬಾಂದಿಯು ಮಾತು ನಿಜವಾದುದೆಂಬುದಕ್ಕೆ ನಾನೂ ಸಾಕ್ಷಿ, ನಾನೇ ಆ ಬ್ರಹ್ಮಚಾರಿ, ಎ:ದನು. ಕುಲನಂಬಿಯು ಆಗ ಗುರ್ತಿಸಿ, ಇವನೇ ಹದು, ಎಂದಳು. ಅನಂತರ ಚಂದ್ರಶೇಖರನು, ರಾಜನೆ ! ಈ ಫಿರಂಗಿದು ಸತ್ಯವಾದಿಯಾಗಿದ್ದರೆ ಇವ ನನ್ನು ಒಂದೆರೆಡು ಪ್ರಶ್ನೆ ಮಾಡಬೇಕೆಂದನು. ನಬಾಬನು ಅವನ ಅಭಿಪ್ರಾಯವನ್ನು ತಿಳಿದವನಾಗಿ, ನೀನೇ ಪ್ರಶ್ನೆ ಮಾಡು, ದ್ವಿಭಾ ಪಿಯಿಂದ ಹೇಳಿಸುತ್ತೇವೆ, ಎಂದನು. ಚಂದ್ರಶೇಖರ-ನೀನು ಚಂದ್ರಶೇಖರನ ಹೆಸರನ್ನು ಕೇಳಿದ್ದೇನೆಂದು ಹೇಳಿದೆ. ನಾನೇ ಆ ಚಂದ್ರಶೇಖರ, ನೀನು ಅವನ - ಚಂದ್ರಶೇಖರನ ಮಾತು ಪೂರೈಸುವುದರೊಳಗಾಗಿ ಫಾಸ್ಟರನು, ತಾವು ತೊಂದರೆ ತೆಗೆದುಕೊಳ್ಳುವ ಕೆಲಸವಿಲ್ಲ. ನಾನು ಸ್ವತಂತ್ರ), ಮರಣಕ್ಕೆ ಹೆದರುವುದಿಲ್ಲ. ಇಲ್ಲಿ ಕೇಳುವ ಪ್ರಶ್ನೆಗೆ ಉತ್ತರವನ್ನು ಕೊಡುವುದೂ ಬಿಡುವುದೂ ನನ್ನ ಇಪ್ಪ, ನಿಮ್ಮ ಪ್ರ ಶ್ನೆಗೆ ನಾನು ಉತ್ತರವನ್ನು ಕೊಡುವುದಿಲ್ಲವೆಂದನು. ನವಾಬನು, ಹಾಗಾದರೆ ಶೈವಲಿನಿಯನ್ನು ಕರೆದುಕೊಂಡು ಬರಬೇಕೆಂದು ಹೇಳಿದನು. ಶೈವಲಿನಿಯು ಬಂದಳು. ಫಾಸ್ಟರನು ಮೊದಲು ಶೈವಲಿನಿಯನ್ನು ಗುರ್ತಿಸಲಾರದೆ ಹೋದನು. ಕೈವಲಿನಿಯು ರುಗೆ ಯಾಗಿ, ತೀರ್ಣೆಯಾಗಿ ಮಲಿನವಾದ ಜೀರ್ಣವಾದ ಬಟ್ಟೆಯನ್ನು ವೃದ್ದಳು, ಅರಂಜಿತ ಕುಂತಲವುಳ್ಳವಳಾಗಿ ರೂ 3ಧೂಸರಿತೆಯಾಗಿದ್ದಳು. ಮೈಯಲ್ಲಿ ಕೊಳೆ, ತಲೆಯಲ್ಲಿ ಧೂಳೆ, ಕೂದಲು ಕ ದರಿತ್ತು, ಬಾಯಿಯಲ್ಲಿ ಉನ್ನಾ ದೆದು ನಗುವು, ಕಣ್ಣುಗಳಲ್ಲಿ ಹುಚ್ಚರ ಜಿಜ್ಞಾಸಾವೃಂಜಕವಾದ ದೃಷ್ಟಿ, ನೋಡಿ ಫಾಸ್ಟರನು ನಡುಗಿದನು. “ನಬಾಬ-ಇವಳನ್ನು ಬಲ್ಲೆಯಾ ? ಭಾಸ್ಟರ-ಬಲ್ಲೆ. ನಬಾಬ-ಇವಳು ಯಾರು ?