ಪುಟ:ಚಂದ್ರಶೇಖರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಭಾಗ ಅದನ್ನೆಲ್ಲಾ ಅವರೇ ಹೇಳಬಲ್ಲರು. ಎರಡೂ ಸಮಾನ, ಜಲವೂ ಚಂಚಲ : ಈ ಭುವನ ಚಾಂಚಲ್ಯ ವಿಧಾಯಿನಿಗಳಾದ ರಮಣಿಯರ ಹೃದಯವೂ ಚಂಚಲ, ಜಲದಲ್ಲಿ ಕತಮಾಡಿ ದರೆ ಗುರುತಾಗುವುದಿಲ್ಲ. ಯುವತಿಯರ ಹೃದಯದಲ್ಲಿ ಕೃತನಾಡಿದರೆ ಗುರುತಾಗಿ ನಿಲ್ಲುವುದೇನು ? - ಪುಪ್ಪರಿಣಿಯು ಶ್ಯಾಮಲವಾದ ಜಲದಲ್ಲಿ ಸ್ವರ್ಣಮಯವಾದ ಸೂರೈಕಿರಣಗಳು ಸೇರಿಹೋಗಿ ನೋಡುತ್ತಿದ್ದ ಹಾಗೆ ಎಲ್ಲಾ ಶ್ಯಾಮಲವರ್ಣವಾಗಿ ಹೋಯಿತು, ತಾಳೆನು ರಗಳ ಅಗ ಭಾಗಗಳು ಮಾತ್ರ) ಸ್ವರ್ಣಪತಾಕೆಗಳಂತೆ ಪ್ರಕಾಶವಾಗುತಲಿದ್ದವು. ಸುಂದರಿ-ಅಕ್ಕ ! ಸಾಯಂಕಾಲವಾಯಿತು. ಇನ್ನು ಇಲ್ಲಿ ಇರಕೂಡದು, ನಡೆ, ಮನೆಗೆಹೋಗಬೇಕು. ಕೈವಲಿನಿ-ಯಾರೂ ಇಲ್ಲ. ವೆಲ್ಲವಲ್ಲಗೆ ಬಂದು ಹಾಡನ್ನು ಹೇಳಬಾರದೆ. ಸುಂದರಿ-ದೂರಹೋಗು ! ಇದೇನು ಕೇಡು ! ನಡೆ, ಮನೆಗೆ. ಕೈವಲಿನಿದು ಹಾಡಿನಹಾಗೆ, ಇನ್ನು ಸದನಕ್ಕೆ ಹೋಗಲಾರೆ, ಸಖಿ ! ನನ್ನ ಮದನ ಮೋಹನನು ಬಂದನಾಗಲೆ ! ಎಂದಳು. ಸುಂದರಿ-ಸಾಕು, ಬಿಡು ! ಇದೇನು, ಬಂದುದು ಕೇಡು, ನಿನಗೆ ! ಮದನಮೋಹ ನನು ಮನೆಯಲ್ಲಿದ್ದಾನೆ, ನಡೆ. ರೈವಲಿನೀ-ಹೋಗಿ ಆತನಿಗೆ ನಿನ್ನ ಮದನಮೋಹಿನಿಯು ಭೀಮಾ ಪುಷ್ಕರಿಣಿಯು ನೀರು ಶೀತಲವಾಗಿದ್ದುದರಿಂದ ಅದರಲ್ಲಿ ಬಿದ್ದು ಸತ್ತು ಹೋದಳೆಂದು ಹೇಳು. ಸುಂದರಿ-ಹುಡುಗಾಟವನ್ನು ಬಿಡು, ಕತ್ತಲೆಯಾಗುತ್ತ ಬಂದಿತು-ನಾನು ಇನ್ನು ನಿಲ್ಲಲಾರೆ. ಈ ಹೊತ್ತು ಲಕ್ಷ್ಮೀದತಾಯಿದು ಇತ್ತಕಡ ಬಾರೋ ಕೆಂಪುಮೋರೆಯು ವನು ಬಂದಿದ್ದಾನೆಂದು ಹೇಳಿದ್ದಳು. ಶೈವಲಿನೀ -- ಅದರಿಂದ ನಿನಗೂ ನನಗೂ ಭಯವೇನು ? ಸುಂದರಿ - ಏನು ಹೇಳುತ್ತೀಯ ? ಏಳು, ಇಲ್ಲದಿದ್ದರೆ ನಾನು ಹೊರಟು ಹೋಗು ವೆನು. ಕೈವಲಿನೀ-ನಾನು ಏಳುವುದಿಲ್ಲ.-ನೀನೇ ಹೋಗು. ಸುಂದರಿಯು ಕೋಪಗೊಂಡು ಕೊಡದಲ್ಲಿ ನೀರುತುಂಬಿಕೊಂಡು ಪುಷ್ಕರಿಣಿ ಮೆಟ್ಟುಗಳ ಮೇಲೆ ಬಂದು ನಿಂತುಕೊಂಡು, ಪುನಃ ಶೈವಲಿನಿಯಕಡೆ ತಿರುಗಿಕೊಂಡು, ಏನೆ ! ನಿಜವಾಗಿ ನೀನೊಬ್ಬಳೇ ಈ ಸಂಧ್ಯಾಕಾಲದಲ್ಲಿ ಪುಷ್ಕರಿಣಿದು ಘಾಟಿಯಲ್ಲಿರು ವಿಯೋ ? ಎಂದಳು, ಶೈವಲಿನಿಯು ಏನೊಂದುತ್ತರವನ್ನೂ ಕೊಡಲಿಲ್ಲ ; ತಾಳೆಮರದ ಕಡೆಗೆ ಕೈಬೆರಳು ನಿರ್ದೆಶಮಾಡಿ ತೋರಿಸಿದಳು, ಸುಂದರಿಯು ಬೆರಳು ನಿರ್ದೆಶಮಾಡಿದಕಡೆ ನೋಡಲಾಗಿ, ಪುಷ್ಕರಿಣಿಯ ಆಚೆಯದಡದಲ್ಲಿ ಒಂದು ತಾಳೆಮರದ ಬುಡದಲ್ಲಿ, ಸರನಾಶ ! ಸುಂದ