ಎರಡನೆಯ ಭಾಗ. ೪೧ ದಳನಿಯು ಕೋಧದಿಂದ ಕಂಪಿತಕಳೆಬರವುಳ್ಳವಳಾಗಿ ಎದ್ದು ನಿಂತುಕೊಂಡು ಗಳ ದಶು ವಿನಿಂದ ನಿರುದ್ದವಾಗಿ ವಿಸ್ತಾರಿತವಾದ ಲೋಚನಗಳುಳ್ಳವಳಾಗಿ, ನೀನು ನಿಪಾತವಾಗಿ ಹೋಗು { ಅಶುಭಕ್ಷಣದಲ್ಲಿ ನಾನು ನಿನ್ನ ಸೋದರಿಯಾಗಿ ಹುಟ್ಟಿದೆನು. ಅಶುಭಕ್ಷಣ ದಲ್ಲಿ ನಿನ್ನ ಸಹಾಯಕಳಾಗಿರುವೆನೆಂದು ಪ್ರತಿಜ್ಞಾಬದ್ದೆಯಾದೆನು, ಹೆಂಗಸರಿಗೆ ಎಂತಹ ಸ್ನೇಹ, ದಯೆ, ಧರ್ಮವು ಇವೆ ಎಂಬುದು ನೀನು ಅರಿಯಾಲಾರೆ, ನೀನು ಈ ಯುದ್ಧ ದಿಂದ ನಿವೃತ್ತನಾದರೆ ಒಳ್ಳೆಯದು, ಇಲ್ಲದಿದ್ದರೆ, ಇಂದು ಮೊದಲ್ಗೊಂಡು ನಿನಗೂ ನನಗೂ ಇರುವ ಸಂಬಂಧವು ಹರಿದುಹೋದಹಾಗೆ ೩೪. ಸಂಬಂಧವೆಂದು ಹೇಳಲೇ ತಕ್ಕೆ? ಇಂದು ಮೊದಲ್ಗೊಂಡು ನಿನಗೂ ನನಗೂ ಶತು ಸಂಬಂಧವಿರುವುದು, ನೀನು ನನಗೆ ಪರಮ ಶತ್ರುವೆಂದು ತಿಳಿಯುವೆನು, ನಾನು ನಿನಗೆ ಪರಮ ಶತ್ರುವೆಂದು ತಿಳಿ . ಈ ರಾಜಾಂತಃಪುರದಲ್ಲಿ ನಿನ್ನ ಪರಮ ಶತು ನೂಬ್ಬಳು ಬರುವಳೆಂದು ತಿಳಿದಿರು ಎಂದು ಹೇಳಿದಳು. ಹೀಗೆಂದು ಹೇಳಿ ದಳನೀ ಬೇಗಂ ಅಲ್ಲಿಂದ ಬೇಗನೆ ಹೊರಟು ಹೋದಳು. ದಳನಿಯು ಹೊರಗೆ ಹೊರಟುಹೋಗುತ್ತಲೆ ಗುರಗಣಖಾನನು ತನ್ನೊಳುತಾನೇ ದಳನಿಯು ಪುನಃ ತನ್ನವಳಲ್ಲವೆಂದೂ, ಅವಳು ಮಾರಕಾಸಿವನಿಗೆ ಸೇರಿದವಳೆಂದೂ ಸೋದರಿದೆಂದೇನಾದರೂ ನಾನು ಅವಳಲ್ಲಿ ಸ್ನೇಹವುಳ ವನಾದರೂ ಆಗಬಹುದು, ಆದರೆ ಅವಳು ಮಾರಕಾಸೀವನಲ್ಲಿ ಹೆಚ್ಚು ಸ್ನೇಹ ವುಳ್ಳವಳಾಗಿದ್ದಾಳೆ, ಸಹೋದರನು ಸ್ವಾಮಿದು ಅಮಂಗಳಾಕಾಂಕ್ಷಿಯೆಂದು ತಿಳಿದಮೇಲೆ ಅವನ ಮಂಗಳಾರ್ಥವಾಗಿ ಸಹೋದರನಿಗೆ ಅಮಂಗಳವನ್ನುಂಟುಮಾಡುವಳೆಂದೂ, ಅದು ಕಾರಣ ಅವಳು ದುರ್ಗದೊಳಗೆ ಹೋಗಲು ಬಿಡಕೂಡದೆಂದೂ ಯೋಚಿಸಿ, ನೃತ್ಯನನ್ನು ಕರೆದನು. ಒಬ್ಬ ಶಸ್ತ್ರ ಧಾರಿಯಾದ ನೃತ್ಯನು ಬಂದು ನಿಂತನು. ಗ.ರಗಣಖಾನನ ಅವನ ಮುಖಾಂತರವಾಗಿ ದಳನಿಯನ್ನು ಕೋಟೆಯೊಳಗೆ ಬಿಡದಿರಲು ಪಹರೆಯವರಿಗೆ ಹೇಳಿ ಕಳುಹಿಸಿದನು. ನೃತ್ಯನು ಅಶ್ವಾರೂಢನಾಗಿ ಮುಂಚಿತವಾಗಿ ಕೋಟೆಯ ಬಾಗಿಲಿಗೆ ಹೋಗಿ, ತಿಳಿಸಿದ ಪ್ರಕಾರ, ದಳನಿಯು ಅಲ್ಲಿಗೆ ಬರುತ್ತಲೆ ಒಳಗೆ ಹೋಗಕೂಡದೆಂದು ಪಹರೆದವರು ಅವಳಿಗೆ ತಿಳಿಸಿದರು. ಕೆಳ ದಳನಿಯು ತನ್ನ ವಾದ ಲತೆವಹಾಗೆ ಭೂತಲದಲ್ಲಿ ಕುಳಿತುಕೊಂಡಳು. ಕಣ್ಣುಗಳಿಂದ ಧಾರೆಯು ಸುರಿಯಲಾರಂಭವಾಯಿತು, ಅನಂತರ, ಅವಳು, ಅಣ್ಣ! ನನಗೆ ನಿಲ್ಲುವುದಕ್ಕೆ ಸ್ಥಾನವನ್ನು ಮಾಡದೆ ಹೋದೆಯೆಂದಂದುಕೊಂಡಳು. - ಹತ್ತಿರದಲ್ಲಿದ್ದ ಕುಲಸಂ, ಹಿಂದಿರುಗಿ ಸೇನಾಪತಿಯ ಮನೆಗೆ ಹೋಗೆಂದಳು. ದಳ ನೀ-ಬೇಕಾದರೆ ನೀನು ಹೋಗು ಗಂಗೆಯ ತರಂಗಗಳ ಮಧ್ಯದಲ್ಲಿ ನನಗೆ ಸ್ಥಳವು ಸಿಕ್ಕುವುದು. 6
ಪುಟ:ಚಂದ್ರಶೇಖರ.djvu/೪೯
ಗೋಚರ