ರ ಉದ್ದೇಶಗಳಲ್ಲಿ ಇದೊಂದು ಪ್ರಶಸ್ತವಾದ ಭಾಗವೂ ಅಡಕವಾಗಿದ್ದು ದ ಕ್ಯಾಗಿ ಕನ್ನಡಿಗರೆಲ್ಲರೂ ಕೃತಜ್ಞರಾಗಿರಬೇಕಾಗಿದೆ. ಇವರು ತಮ್ಮ ಗ್ರಂಥಕ್ಕೆ ಪುರಾಣವೆಂದು ಹೆಸರನ್ನಿಟ್ಟುದರಿಂದ ಅದರ ಸಾರ್ಥಕ್ಕಾಗಿ ಸೃಷ್ಟಿ, ಪ್ರತಿಸೃಷ್ಟಿ, ವಂಶ, ಮನ್ನಂತರ, ವಂಶಾನುಚರಿತನೆಂಬ ಪಂ ಚಲಕ್ಷಣಗಳು ಇದರಲ್ಲಿರುವಂತೆ ವಿಷಯನಿಯೋಜನವನ್ನು ಮಾಡಿತ್ತಾರೆ. ಮತ್ತೂ ಪಟ್ಟದಿಯ ಕಾವ್ಯವಾದುದರಿಂದ ಮಹಾಕಾವ್ಯದಲ್ಲಿರಬೇಕಾದ ಲಕ್ಷಣಗಳೂ ಪೂಗ್ಧವಾಗಿರಬೇಕೆಂಬುದಾಗಿ ಪುರ, ಸಮುದ್ರ, ಗಿರಿ, ಋತು, ಮೊದಲಾದ ಅಷ್ಟಾದಶ ಗಳವರ್ಣನಗಳನ್ನೂ ಸಂದರ್ಭಾನುಸಾರ ವಾಗಿ ಮಾಡಿರುತ್ತಾರೆ. ಅಂತಹ ಚೆನ್ನಬಸವೇಶ್ವರ ಪುರಾಣವು ಪದ್ಭಮಯವಾಗಿದ್ದು, ವೃತ್ಪ ನ್ಯರಿಗಲ್ಲದೆ ಭಾಷಾಜ್ಞಾನವುಳ್ಳಕನ್ನಡಿಗರೆಲ್ಲರಿಗೂ ಅರ್ಥವು ಸುಲಭವಾಗಿ ತಿಳಿ ಯದೆಯಿದ್ದುದರಿಂದಲೂ, ಗದಗ್ರಂಥಗಳ ಅವಶ್ಯಕತೆಯು ಈಗ ಹೆಚ್ಚಾಗಿ ರುವುದರಿಂದಲೂ, ನನ್ನ ಮೊದಲನೆಕೃತಿಯಾದ ಬಸವರಾಜವಿಜಯದ ಕಾರದಲ್ಲಿ ವಾಚಕರು ತೋರಿಸಿದ ಆಸಕ್ತಿಯಿಂದಲೂ, ಅದೇ ಚೆನ್ನ ಬಸ ವೇಶ್ವರ ಪುರಾಣಪ್ರತಿಪಾದಿತವಾದ ವಿಷಯಗಳನ್ನೆ ಲಲಿತವಾದ ಕನ್ನಡದ ಬಿಡುನಡಿಯ ರೂಪವಾಗಿ ಬರೆದು C ಚೆನ್ನಬಸವೇಶವಿಜಯ ” ಎಂಬ ಹೆಸರಿನಿಂದ ಈ ಗ್ರಂಥವನ್ನು ರಚಿಸಿರುತ್ತೇನೆ. ಮೂಲಗ್ರಂಥದಲ್ಲಿ ಹೆಚ್ಚಾ ಗಿದ್ದ ವರ್ಣನಭಾಗಗಳನ್ನು ಮಾತ್ರ ಸಂಕ್ಷೇಪಗೊಳಿಸಿ, ಉಳಿದಂಶಗಳ ನ್ನೆಲ್ಲ ಸರಿಯಾಗಿ ವಿಸ್ತರಿಸಿ, ಅವಶ್ಯಕವಾಗಿ ತೋರಿದ ಕಡೆಗಳಲ್ಲಿ (ಗ್ರಂಥ ಕರರ ಆಶಯವು ಕೆಡದಂತೆ) ವ್ಯಾಸೋಕ್ಷಪುರಾಣಗಳ ಸಹಾಯ ದಿಂದ ಬೇಕಾದಂಶವನ್ನಾರಿನಿ ಸೇರಿಸಿ, ಈ ಗ್ರಂಥವನ್ನು ಪೂರ್ಣಗೊಳಿಸಿ ರುತ್ತೇನೆ. ಅವತ್ಸರಮತಿಗಳಾದ ಮಹಾಶಯರು ಇದರಲ್ಲಿ ಗುಣೈಕಗ್ರಹ ಣವನ್ನು ಮಾಡಿ, ಸಂತೋಪಿಸಿ, ನನ್ನ ಶ್ರಮವನ್ನು ಸಾರ್ಥಕಗೊಳಿಸು ವರೆಂದು ನಂಬುತ್ತೇನೆ. ಯ೯, ಅರ್, ಕರಿಬಸವಶಾಸ್ತಿ. ಸುಜನವಿಧೇಯ, *ಕ*
ಪುಟ:ಚೆನ್ನ ಬಸವೇಶವಿಜಯಂ.djvu/೧೧
ಗೋಚರ