Mಳಿ ಒಳಿ ಚನ್ನಬಸವೇಕವಿಜಯಂ (ಕಾಂಶ - [ ಅಧ್ಯಾಯ ವಿಷವನ್ನು ಕಾರುವುದಕ್ಕಾರಂಭಿಸಿತು. ಧಗಧಗ ಛಟಲ್ಲಿ ಟಿಲ್ಯುಗಿಲೆಂದು ವಿಷಾಗ್ನಿಯು ಭೋರ್ಗರೆದೆದ್ದು ಎಲ್ಲ ಕಡೆಯೂ ಪ್ರಸರಿಸುತ್ತ ಬಂದಿತು. ವಿಷ್ಣು ಬ್ರಹ್ಮರು ತಮ್ಮ ತಮ್ಮ ವಾಹನವನ್ನೇರಿ ಓಡಿದರು. ಉಳಿದ ದೇವದಾನವರೆಲ್ಲ ತಮ್ಮ ಗತಿಯೇನೆಂದು ಚಿಂತಿಸುತ್ತ ದಿಕ್ಕು ದಿಕ್ಕಿಗೆ ಕೆಡೆ ದೋಡಿದರು, ಕ್ಷಣಕಾಲದಲ್ಲಿ ಆ ಮಹಾ ಕಾಲಕೂಟದ ಬೇಗೆಯು ಸಕಲಲೋಕವನ್ನೂ ವ್ಯಾಪಿಸಿ ಸುಡುತ್ತಿದ್ದಿತು. ಅಯ್ಯೋ ! ವಿಶಾ ಪಕ್ಕೆ ಗುರಿಯಾಗಿ ಐಶ್ವಥ್ಯವನ್ನು ನೀಗಿಕೊಂಡು ಮರುಳನಾಗಿರುವ ಇಂ ದ್ರನ ಮಾತನ್ನು ನಂಬಿ ದೇವರಾಕ್ಷಸರನ್ನೆಲ್ಲ ಕೂಡಿಸಿ ಸಮುದ್ರವನ್ನು ಕ ಡೆದು ಜಗತ್ತಿಗೆ ಹೀಗೆ ಕೇಡನ್ನುಂಟುಮಾಡಬಹುದೆ ? ಅಯ್ಯೋ ಪಾಪಿಗ ೪ರಾ ! ಸೃಷ್ಟಿ ರಕ್ಷಣಕತ್ರರಾದ ನೀವಾದರೂ ಈ ವಿಪತ್ತನ್ನು ಪರಿಹರಿಸ ಬಾರದೆ ? ಎಂದು ಬ್ರಹ್ಮ ವಿಷ್ಣುಗಳನ್ನು ಕುರಿತು ಜಗತ್ತಿನವರೆಲ್ಲರೂ ಮೊರೆಯಿಟ್ಟರು, ಕೆಲವರು ಇಂದ್ರನ ಶಿವದ್ರೋಹವನ್ನು ಕುರಿತು ವಾ ಚಾಮಗೋಚರವಾಗಿ ಬೈದರು. ಕೆಲವರು ಶಿವನನ್ನು ಪ್ರಾರ್ಥಿಸಿದರು. ಕೆಲವರು ದಿಕ್ಕು ದಿಕ್ಕಿಗೆ ಓಡಿ ಎಲ್ಲ ಉಳವಿಲ್ಲದೆ ತರಹರಿಸುತ್ತಿದ್ದರು. ಇಂದ್ರಾದಿ ದೇವತೆಗಳೆಲ್ಲರೂ ಶಿವನಿಂದಲೇ ಇದರ ಪರಿಹಾರವಾಗಬೇಕೆಂ ದು ಯೋಚಿಸಿ, ಗುಂಪುಕೂಡಿ ಕೈಲಾಸಕ್ಕೆ ಹೋಗಿ, ಶಿವನಿದಿರಿಗೆ ನಿಂತು ಅಡ್ಡ ಬಿದ್ದು, ಎಲೈ ಸಕಲಲೋಕಶರಣ್ಣನೇ ! ಕೃಪಾಮಯನೇ ! ನಿನ್ನ ಹೊರತು ರಕ್ಷಕರು ಬೇರೊಬ್ಬರಿಲ್ಲ; ನಾವೆಲ್ಲರೂ ವಿಷಾಗ್ನಿ ಭೀತಿಯಿಂದ ಕಂಠಗತಪ್ರಾಣರಾಗಿರುವೆವು; ನಿನ್ನ ಪಾದಕಮಲಕ್ಕೆ ಏನೊ? ದ್ರೋಹ ವನ್ನು ಮಾಡಿದ್ದು ದರಿಂದ ನಮಗೀವಿಪತ್ತು ಸಂಭವಿಸಿರುವುದು, ನಮ್ಮ ಪ ರಾಧವನ್ನು ಮನ್ನಿಸಿ ಕಾಪಾಡು, ಎಂದು ಪ್ರಾರ್ಥಿಸಿಕೊಂಡರು. ಆಗ ಶಂಕರನು ವಿಷವನ್ನು ನಾನೀಗಳೇ ಪರಿಹರಿಸದಿದ್ದರೆ ಜಗತ್ತೆಲ್ಲ ಹಾಳಾಗು ವುದೆಂದು ಯೋಚಿಸಿ, ಅವರಿಗೆಲ್ಲ ಅಭಯದಾನ ಮಾಡಿ, ತಾನು ಮಾತ್ರ ತೀಸಮೇತನಾಗಿ ವೃಷಭವಾಹನವನ್ನೇರಿ ನಡೆಗೊಂಡು, ದಾರಿಯುದ್ದಕ್ಕೂ ವಿಷದ ಬೇಗೆಯಿಂದ ಬೇಯುತ್ತಿರುವವರನ್ನೂ, ಚೀರುತ್ತಿರುವವರನ್ನೂ, ಶಿವನೇ ಕಾಪಾಡು ಎಂದು ಮೊರೆಯಿಡುತ್ತಿರುವವರನ್ನ, ಕರುಣಾಕ ಟಾಕ್ಷದಿಂದ ನೋಡುತ್ತ, ಹೆದರಬೇಡಿರೆಂದು ಸಕಲ ದಿವಿಜದನುಜಮಾನ
ಪುಟ:ಚೆನ್ನ ಬಸವೇಶವಿಜಯಂ.djvu/೧೧೭
ಗೋಚರ