ಪುಟ:ಚೆನ್ನ ಬಸವೇಶವಿಜಯಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಲಂಧರಾಸುರನ ಕಥ ೧೨ ನೆ ಅಧ್ಯಾಯ. ಜ ಲ೦ ಧ ರಾ ಸು ರ ನ ಕಥೆ , --- ಎಕ್ಕೆ ಸಿದ್ದರಾಮೇಶನೆ ! ಬ೪ಕ ದೇವೇಂದ್ರನು ಶಿವಪಾದಪೂಜಾ ಫಲಾತಿಶಯದಿಂದ ದೇವಲೋಕವನ್ನಾಳುತ್ತ ಸುಖದಿಂದಿರುವಲ್ಲಿ, ರಾಕ್ಷ ಸರುಗಳು ದಾಯಾದಮತ್ಸರದಿಂದ ದೇವತೆಗಳ ಮೇಲೆ ಬಿದ್ದು, ಮಹಾಯು ದವನ್ನು ಮಾಡಿದರು, ಇಂದ್ರನು ಅವರೆಲ್ಲರನ್ನೂ ಗೆದ್ದು ನಿರಾತಂಕದಿಂ ದೆಷ್ಟೋ ಕಾಲ ವಿಭವದಿಂದಿದ್ದನು. ಹೀಗಿರುವಲ್ಲಿ ತನ್ನನ್ನು ಜಯಿಸುವ ರಾರೂ ಇಲ್ಲವೆಂಬ ಅಹಂಕಾರವು ಇಂದ್ರನಿಗೆ ಮೂಡಲು, ಯುದ್ದಕಾರ ವಿಲ್ಲದೆ ಸುಮ್ಮನೆ ಬೇಸತ್ತಿರುವುದು ಚೆನ್ನಾಗಿಲ್ಲವೆಂದು ಯೋಚಿಸಿ, ಶಿವ ನನ್ನು ಕೇಳಿ ಒಬ್ಬ ಶತ್ರುವನ್ನು ಪಡೆಯಬೇಕೆಂದು ಕೈಲಾಸಕ್ಕೆ ಹೊರ ಟನು. ಮಹಾಸಭೆಯ ಮಧ್ಯದಲ್ಲಿ ಸೇನೆಗೊಳ್ಳುತ್ತಿರುವ ಪರಶಿವನಿಗೆ ನಮಸ್ಕರಿಸಿ, ಕೈಮುಗಿದು ನಿಂತು, ಸಾಮಾ ! ನನಗೆ ಪ್ರತಿಭಟಿಸಿ ನಿಂ ತು ಯುದ್ಧ ಕೊಡುವ ಕಡುಗಲಿಯಾದ ಶತ್ರುವು ದಯಪಾಲಿಸಬೇಕೆಂ ದು ಬೇಡಿದನು. ಇದನ್ನು ಕೇಳಿ ಅವನು ನಸುನಗುತ್ತ, ಮುಂದುಗಾಣದೆ ಇದೇನಿ೦ತಹ ವರವನ್ನು ಬೇಡುವೆ ? ಎನಲು, ದೇವೇಂದ್ರನು ವ ತೆ ಮ ಇದು, ಮಹಾದೇವನೇ ! ನಾನು ಹಿಂದಣ ಯುದ್ಧದಲ್ಲಿ ಜಂಭ ಬಲ ನವಚಿ ವೃತ್ರ ಮೊದಲಾದ ದೈತ್ಯರನ್ನೆಲ್ಲಿ ಸೋಲಿಸಿ ಓಡಿಸಿದೆನು. ಅಲ ದಿನಿಂದ ಯುದ್ದಕಾರವು ನನಗೆ ಸಮ್ಮೇಪಿ ದುರ್ಲಭವಾಗಿ ಹಂಬಲಿಸಿಕೊ ಳ್ಳುವಂತಾಗಿದೆ. ಅದಕಾರಣ, ಅವಶ್ಯಕವಾಗಿ ನನಗೊಬ್ಬ ಶತ್ರುವನ್ನು ಅನುಗ್ರಹಿಸಬೇಕೆಂದು ಬಿನ್ನೈಸಿದನು. ಇದನ್ನು ಕೇಳಿ ಶಿವನಿಗೆ ಕೋ ಪವಾವಿರ್ಭವಿಸಲು, ದೇವೇಂದ್ರನನ್ನು ಸುಟ್ಟು ಬಿಡುವುದಕ್ಕಾಗಿ ಘಾಲ ನೇತ್ರದಿಂದೊಂದು ಕಿಡಿಯನ್ನು ಉರುಳಿಸಿದನು. ಆಗ ಸಭೆಯಲ್ಲೇ ಇದ್ದ ದೇವಗುರುವಾದ ಬೃಹಸ್ಪತಿಯು ನೋಡಿ, ಓಹೋ ! ಇಂದ್ರನು ಕೆಡು ವನೆಂದು ಯೋಚಿಸಿ, ಸಾಕು ಸಾಕು; ದೇವದೇವೋತ್ತಮನೇ ! ನೀನು ಕೊವಿಸಿ ಫಾಲನೇತಾಗ್ನಿಯನ್ನು ಇಂದ್ರನಮೇಲೆ ಪ್ರಯೋಗಿಸಿದರೆ ಅವ