633 ಚನ್ನ ಬಸವೇಳಖಜಯಂ ಆಸ್ತಿ 66) [ಅಧ್ಯಾಯ ಮೊರೆಯಿಟ್ಟರು. ಆಗ ಶಲಕರನೇ ಚಿತ್ರಸಿ, ಗಜಾಸುರನಿಗಿದಿರಾಗಿ, ತನ್ನ ವಿನಾಕವೆಂಬ ಧನುಸ್ಸಿನ ಎಂಜಿನಿಯನ್ನು ಸೆಳೆದು, ಧ್ವನಿಮಾಡಿ,ಇದಿರಲ್ಲಿರು ವ ಗಜಾಸುರನನ್ನು ಕರುಣಾಕಟಾಕ್ಷದಿಂದ ನೋಡಿ,ಗುರಿಯಿಟ್ಟು ಪ್ರಯೋ ಗಿಸಿದನು. ಕೂಡಲೇ ಗಜದ ರುಂಡವು ಕಡಿತುಂಡಾಗಿ ಹಾರಿತು, ಮುಂ ಡವು ಭೂಮಿಯ ಮೇಲೆ ಬಿದ್ದಿತು. ಇದನ್ನು ಕಂಡು ಜಗತ್ತೆಲ್ಲವೂ ಆನಂ ದಾಬಿ ಯಲ್ಲಿ ಮುಳುಗಿ ಕೋಲಾಹಲವನ್ನು ಮಾಡಿತು. ಕೂಡಲೇ ಗಜಾ ಸುರನಾಗಿದ್ದ ಗಂಧರನು ತನ್ನ ಪೂರದ ಗಾಂಧರರೂಪನ್ನು ಧರಿಸಿ, ಚಂ ದ್ರಶೇಖರನ ಪಾದಾರವಿಂದಕ್ಕೆ ಭಕ್ತಿಯಿಂದ ನಮಸ್ಕರಿಸಿ, ಸ್ತುತಿಸಿ, ನನ್ನ ಜನ್ನವಾಗಿದ್ದ ಈ ಆನೆಯ ಶರೀರದ ಯಾವುದಾದರೊಂದು ಚಿಹ್ನವನ್ನು ಸ್ವಾಮಿಯು ಧರಿಸಬೇಕೆಂದು ಬೇಡಿಕೊಂಡನು. ಭಕ್ತಸುಲಭನಾದ ಸ್ವಾಮಿಯು ಹಾಗೆಯೇ ಆಗಲೆಂದು ನುಡಿದು, ಆನೆಯ ಚರವನ್ನು ಸುಲಿ ದು, ಹೊದೆದು, ಆ ಗಂಧರನಿಗೆ ಗಣಪದವಿಯನ್ನು ದಯಪಾಲಿಸಿ, ದೇವ ತೆಗಳಿಗೆ ಸುಖಗೊಳಿಸಿ, ಕೈಯಲ್ಲಿ ಗಜದ ರುಂಡವನ್ನು ಹಿಡಿದು ನಕ್ಕಿಸುತ್ತ ಕೈಲಾಸಕ್ಕೆ ತೆರಳಿದನು. ಅಂತಃಪುರದಲ್ಲಿದ್ದ ಭಾರತಿಯು ತನ್ನ ದೇಹದ ಮೇಲಣ ಕೊಳೆಯನ್ನು ತೆಗೆದು, ಬಿಂಬವನ್ನು ಮಾಡಿ, ಪ್ರಾಣವನ್ನು ತುಂಬಿ, ಅವನನ್ನು ಬಾಲ ಕಾವಲಿಗೆ ಇರಿಸಿರಲು, ಅಂತಃಪುರಪ್ರವೇಶ ವನ್ನು ಮಾಡುತ್ತಿದ್ದ ಶಿವನನ್ನು ಕಂಡು ಒಳ ಹೋಗಬೇಡವೆಂದು ಆತನು ತಡೆದನು. ಶಿವನಾದರೆ ಥಟ್ಟನೆ ಆತನ ತಲೆಯನ್ನು ಕಡಿದುರುಳಿಸಿ ಒಳ ಹೊಕ್ಕನು, ತನ್ನ ಪುತ್ರನು ಶಿವನ ಹಸ್ತದಿಂದ ಹೀಗೆ ಅಳಿದನೆಂಬ ಸುದ್ದಿ ಯನ್ನು ಪಾವತಿಯು ಕೇಳಿ, ಮನಸ್ಸಿನಲ್ಲಿ ಬಹುಳವಾಗಿ ನೊಂದು, ಪರ ಶಿವನೊಡನೆ ಕೋಪಿಸಿಕೊಂಡಳು. ಶಂಕರನಾದರೋ- ದೇವಿಯೆ ! ನಿನ್ನ ಮಗನು ಬದುಕಿರುವನು; ನೋಡು ಬಾರೆಂದು ಹೇಳಿ, ಕರೆತಂದು, ತನ್ನ ಕೈಯಲ್ಲಿದ್ದ ಆನೆದಲೆಯನ್ನು ಬಾಗಿಲಲ್ಲಿ ಬಿದ್ದಿದ್ದ ಪಾವತಿಯ ನಂದನನ ಮುಂಡಕ್ಕೆ ಜೋಡಿಸಲು, ಪ್ರಾಣವಳಿದಿದ್ದ ಆ ಶರೀರದಲ್ಲಿ ಮುನ್ನಿನಂತೆ ಪ್ರಾಣವು ಕೂಡಿಕೊಂಡಿತು, ಆದರೆ ಮಗನಿಗೆ ಉಂಟಾದ ಮುಖವಿಕಾರ ವನ್ನು ಮಾರುತಿಯು ನೋಡಿ, ಖೇದಗೊಂಡಳು. ಆಗ ಶಿವನು- ಎಲ್ ಭಾರತಿಯ ! ನಿನ್ನ ಕುಮಾರನ ಮುಖವು ವಿಕಾರವಾಯೆಂದು ಚಿಂತಿಸ
ಪುಟ:ಚೆನ್ನ ಬಸವೇಶವಿಜಯಂ.djvu/೧೫೭
ಗೋಚರ