ಪುಟ:ಚೆನ್ನ ಬಸವೇಶವಿಜಯಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಲೋಕ ಶಿವಸಭಾ ವಣಕ್ನವು ಇಂತಹ ಆನಂದಶೋಭಾಪುಣ್ಯಮಯವಾದ ನಗರದ ಮಧ್ಯದಲ್ಲಿರುವ ಪರ ಶಿವನರಮನೆಯು, ಎಲ್ಲ ಬೆಟ್ಟಗಳ ಮಧ್ಯದಲ್ಲಿ ಮೇರುಪರತವು ಶೋಭಿ ಸುವಂತೆಯೂ, ನಕ್ಷತ್ರಮಧ್ಯದಲ್ಲಿ ಚಂದ್ರಮಂಡಲವಿರುವಂತೆಯ, ನಾ ನಾರತ್ನಗಳ ನಡುವೆ ಚಿಂತಾಮಣಿಯಿರುವಂತೆಯೂ ಗ್ರಹಮಂಡಲದ ಮ ಧೈ ಸೂದ್ಯನೆಸೆಯುವಂತೆಯೂ, ಕ್ಷೇತ್ರಗಳೊಳಗೆಲ್ಲ ಕಾಶೀನಗರವು ಮೇ ರೆಯುವಂತೆಯೂ, ಶಿವಗಣಂಗಳ ಮಂದಿರಗಳ ಮಧ್ಯದಲ್ಲಿ ತಾನೇ. ತಾನಾಗಿ ತೋರುತ್ತ ೫ ಕೋಟಿ ಯೋಜನದಗಲವುಳುದಾಗಿರುವುದು. ಆ ಅರಮನೆಯಸುತ್ತಲೂ ಪರಮಶಿವತತ್ಥ ವೇ ೧೦ ಸಾವಿರ ಯೋಜನದೆತ್ತರ ದ ನಿಲಸ್ಸಟಕವರ್ಣದ ಕೋಟೆಯಾಗಿ ಆವರಿಸಿರುವುದು, ಅದರಮೇಲೆ ನೂರುಯೋಜನದೆತ್ತರದ ರತ್ನಮಯವಾದ ಕೋಟೆದೆನೆಗಳಿರುವುವು. ಆ ಕೋಟೆಗೆ ಭಕ್ತಿ ಜ್ಞಾನ ವೈರಾಗ್ಯ ಮುಕ್ತಿಗಳೇ ನಾಲ್ಕು ಮಹಾದ್ವಾರಗ ಳಾಗಿರುವುವು. ಪೂರದಿಕ್ಕಿನ ಮಹಾದ್ವಾರದಮೇಲೆ ಋಗೇದವು ೧ ಲಕ್ಷಯೋಜನದೆತ್ತರದಿಂದ ಸುವರ್ಣಮಯವಾದ ಗೋಪುರವಾಗಿ ರಂಜಿ ಸುತ್ತಿರುವುದು, ಅಲ್ಲಿ ನಂದೀಶ್ವರನು ಕಾದಿರುವನು. ದಕ್ಷಿಣದಿಕ್ಕಿನ ದ್ವಾರದಮೇಲೆ ಯಜರೇದವು ೧ ಲಕ್ಷಯೋಜನದೆತ್ತರದ ಗೋಪುರವಾಗಿ ಇಂದ್ರನೀಲರತ್ನಮಯವಾಗಿ ಶೋಭಿಸುವುದು, ಅಲ್ಲಿ ವೀರಭದ್ರೇಶ್ವರನ ಕಾವಲಿರುವುದು, ಪಶ್ಚಿಮದಾರದಮೇಲೆ ಸಾಮವೇದವು ೧ ಲಕ್ಷಯೋ ಜನದೆತ್ತರದಿಂದ ಮುಕ್ಕಾಮಯವಾದ ಗೋಪುರವಾಗಿ ಮೆರೆಯುತ್ತಿರುವು ದು, ಅಲ್ಲಿ ಮಹಾಕಾಳನು ಕಾವಲುಗೊಂಡಿರುವನು. ಉತ್ತಗಾರದ ಮೇಲೆ ಅಥರಣವೇದವು ೧ ಲಕ್ಷಯೋಜನವೆತ್ತರದಿಂದ ರತ್ನಮಯವಾದ ಗೋಪುರವಾಗಿ ತೋರುತ್ತಿರುವುದು, ಅಲ್ಲಿ ನೀಲಲೋಹಿತನು ರಕ್ಷಕನಾ ಗಿರುವನು. ಈ ದಾ "ಸಾಲಕರು ಕೈಯಲ್ಲಿ ಬೆತ್ತವನ್ನು ಹಿಡಿದು, ಶಿವ ನಪ್ಪಣೆಯಾದವರನ್ನು ಒಳಕ್ಕೆ ಬಿಡುತ್ತ ಲೂ, ಇಲ್ಲದವರನ್ನು ತಡೆಯುತ್ತ ಲೂ ಕಾದು ನಿಂತಿರುವರು. ಇಂತಪ್ಪ ಅರಮನೆಯೊಳಗೆ ವೇದಾಂತವೇ ಅಂತಃಪುರವಾಗಿ ಕೊಟಿಯೋಜನದಳತೆಯಿಂದ ಒಪ್ಪುತ್ತಿರುವುದು, ಓಂ ಕಾರವೇ ಸಭಾಸ್ಥ ಲವಾಗಿ ರಂಜಿಸುತ್ತಿರುವುದು, ಆ ಮಹಾಸಭೆಯ ದಿವ್ಯ ತೇಜಸ್ಸಿನ ಮುಂದೆ ೧ ಸಾವಿರಕೊಟಸೂ‌ರ ಮಂಡಲಗಳು ಕೂಡ ಹ