ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M4 ಚನ್ನಬಸವೇಕವಿಜಯಂ (ಕಾಂಶ ೦) [ಅಧ್ಯಾಯ ಬೇಗನೆ ಮಾರ್ಗಗಳನ್ನಲಂಕರಿಸು, ಎಂದು ಹೇಳಲು, ದಕ್ಷನು ಕೋಪ ದಿಂದ ಹುಬ್ಬು ಗಂಟಕ್ಕಿ, “ ಯಾರೋ ಇವನು ? ಕತ್ತನ್ನು ಹಿಡಿದು ನೂ ಆಬಿಡಿ” ಎಂದು ಗರ್ಜಿಸಿ ನುಡಿದನು. ಅಷ್ಟರಲ್ಲಿ ಸಪರಿವಾರಳಾದ ಭವಾ ನಿಯೇ ಯಾಗಶಾಲೆಗೆ ಬಂದಳು, ಯಜ್ಞಕುಂಡದ ಬಳಿಯಲ್ಲಿ ಕುಳಿತಿದ್ದ ತಂದೆಯ ಬಳಿಗೆ ಹೋಗಿ, ವಿನಯದಿಂದ ತಲೆವಾಗಿ, ಅಯ್ಯಾ ! ಸಕಲ ವೇದಾಗಮರಹಸ್ಯಾರ್ಥಗಳನ್ನು ಅರಿತೂ ಅರಿತು ಪ್ರಜ್ಞನಾದ ನಿನಗೆ ನಾನು ಹೇಳುವುದೇನಿದೆ ? ನೀನು ಅಪ್ಪನಂತೆ ಈ ಕಾರವನ್ನಾಚರಿಸ ಬಹುದೆ ? ಪರಶಿವನನ್ನು ಬಿಟ್ಟು ಯಜ್ಞವನ್ನಾಚರಿಸಿದರೆ ಅದು ಸಾಂಗ ವಾಗುವುದೆ ? ಇದರಿಂದ ನಿನಗೆ ಶ್ರೇಯಸ್ಸಾದೀತೆ ? ಬೇಡ ಬೇಡ, ಈ ಪ್ರಯತ್ನವನ್ನು ನಿಲ್ಲಿಸು, ವಿಶ್ವಾಸದಿಂದ ನುಡಿಯುವ ನನ್ನ ಮಾತನ್ನು ಲಾ ಲಿಸು ' ಎಂದು ಮಧುರೋಕ್ತಿಗಳಿಂದ ಬೋಧಿಸಿದಳು. ದಕ್ಷನಾದರೊ“ ಓಹೋ ! ಗಂಡನ ಗೊಡ್ಡು ಬೆದರಿಕೆಯನ್ನು ತೋರಿಸುವುದಕ್ಕೆ ಇಲ್ಲಿಗೆ ಬಂದೆಯೊ ? ನಿನ್ನ ಗಂಡನೂ ನೀನೂ ಬರದಿದ್ದರೆ ನಮ್ಮ ಯಜ್ಞವು ನಡೆ ಯದೆ ನಿಂತುಹೋಗುವುದೊ ? ಅವನೊಬ್ಬನಿಲ್ಲದಿದ್ದರೆ ಜಗತ್ತೇ ನನಗಿ ಲ್ಲವೆ ? ಇಲ್ಲಿ ಕುಳಿತಿರುವವರೆಲ್ಲ ಯಾರೆಂದು ನೋಡು; ಈ ವಿಷ್ಣು ! ಈ ಬ್ರಹ್ಮ ! ಈ ದಿಕ್ಷಾಲಕರು ! ಈ ಗರುಡಗಂಧರರು ! ಈ ಮುನಿ ಗಳು ! ಈ ಸೂದೃಚಂದ್ರರು ! ಮೊದಲಾದವರೆಲ್ಲ ನಮಗೆ ಸಹಾಯಕ ರಾಗಿ ನಿಂತಿರುವಾಗ, ಚಂದ್ರ ಅತ್ರಿ ಕಶ್ಯಪ ಮೊದಲಾದ ಇಂಥ ಘನವಂ ತರೆಲ್ಲ ನನಗೆ ಅಳಿಯಂದಿರಾಗಿರುವಾಗ ನನಗೇನು ಕಡಿಮೆ ? ಯಾರ ಭೀತಿ ಯು ನನಗೇನು ? ಸ್ಮಶಾನವನ್ನು ಕಾಯುವ-ಮೂಳೆಯ ಮಾಲೆಯ ಆ ಬಡಗೊರವನು ನನಗೆ ಸಮಾನನೆ ? ಯಾವ ಮಾ ದೊಡ್ಡ ವಿಷಯವನ್ನು ನನ್ನೊಡನೆ ಹೇಳುವುದಕ್ಕೆ ಬಂದೆ ? ಬಿಡು; ನೀನೂ ನಿನ್ನ ಗಂಡನೂ ಮಾ ಡುವುದನ್ನು ನೋಡಿಕೊಳ್ಳುತ್ತೇನೆ, ನಡೆ ನಡೆ, ಎಂದು ಗಜರಿ ನುಡಿದು, ತಿರಸ್ಕರಿಸಿಬಿಟ್ಟನು. ಈ ಶಿವನಿಂದೆಯನ್ನು ಕೇಳಿದ ಕೂಡಲೇ ಯಾಗಶಾಲೆ ಯಲ್ಲಿದ್ದವರಲ್ಲಿ ಕೆಲರು ( ಶಿವಶಿವಾ ?” ಎಂದು ಕಿವಿ ಮುಚ್ಚಿಕೊಂಡರು. ಕೆಲರು ಶಿವನಿಂದೆಯನ್ನು ಕೇಳಬಾರದೆಂದು ಎದ್ದು ತಮ್ಮ ತಮ್ಮ ಮನೆಗೆ ಹೊರಟುಹೋದರು. ಕೆಲರು ಇದು ಸರಿಯಲ್ಲವೆಂದು ದಕ್ಷನಿಗೆ ಬುದ್ದಿ